ಪ್ರಧಾನ ಸುದ್ದಿ

ಕಾಶ್ಮೀರದಲ್ಲಿ ಲಷ್ಕರ್ ಎ ತೈಬಾ ಜಿಲ್ಲಾ ಕಮ್ಯಾಂಡರ್ ಹತ್ಯೆ

ಲಷ್ಕರ್ ಎ ತೈಬಾ ಉಗ್ರಗಾಮಿ ಸಂಘಟನೆಯ ಜಿಲ್ಲಾ ಕಮ್ಯಾಂಡರ್ ನನ್ನು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುಂಡಿನ ಕಾಳಗದಲ್ಲಿ ಹತ್ಯೆ ಮಾಡಲಾಗಿದೆ ಎಂದು

ಕಾಶ್ಮೀರದಲ್ಲಿ ಲಷ್ಕರ್ ಎ ತೈಬಾ ಜಿಲ್ಲಾ ಕಮ್ಯಾಂಡರ್ ಹತ್ಯೆ
ಸಾಂದರ್ಭಿಕ ಚಿತ್ರ
Published On :

ಶ್ರೀನಗರ: ಲಷ್ಕರ್ ಎ ತೈಬಾ ಉಗ್ರಗಾಮಿ ಸಂಘಟನೆಯ ಜಿಲ್ಲಾ ಕಮ್ಯಾಂಡರ್ ನನ್ನು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುಂಡಿನ ಕಾಳಗದಲ್ಲಿ ಹತ್ಯೆ ಮಾಡಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

"ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ, ಭದ್ರತಾ ಪಡೆಗಳು ಪುಲ್ವಾಮಾದ ಅಸ್ತಾನ್ ಮೊಹಲ್ಲ (ಕಾಕಪೋರ) ಸುತ್ತುವರೆದಿದ್ದರು. ಅಡಗಿದ್ದ ಭಯೋತ್ಪಾದಕರಿಗೆ ಸವಾಲೊಡ್ಡಿದ ನಂತರ ಉಗ್ರಗಾಮಿಗಳು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಭದ್ರತಾ ಪಡೆಗಳು ಮುಹಮ್ಮದ್ ಅಪ್ಜಲ್ ಅಲಿಯಾಸ್ ತಾಲಿಬ್ ನನ್ನು ಹತ್ಯೆಗೈದಿವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

"ಹತ್ಯೆಯಾದ ಭಯೋತ್ಪಾದಕ ಕಳೆದ ವರ್ಷದಿಂದಲೂ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಮತ್ತು ಭದ್ರತಾ ಪಡೆಗಳ ವಾಂಟೆಡ್ ಪಟ್ಟಿಯಲ್ಲಿದ್ದ" ಎಂದು ಅಧಿಕಾರಿ ತಿಳಿಸಿದ್ದಾರೆ.

ಭದ್ರತಾ ಪಡೆಗಳು ಎಲ್ ಇ ಟಿ ಜಿಲ್ಲ ಕಮ್ಯಾಂಡರ್ ನನ್ನು ಹತ್ಯೆ ಮಾಡಿದ್ದಾರೆ ಎಂಬ ವರದಿ ಹೊರಬಿದ್ದ ನಂತರ ಆ ಪ್ರದೇಶದಲ್ಲಿ ಜನರ ಗುಂಪು ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಿದ ವರದಿಗಳು ಕೇಳಿಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.