ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ೧.೫ ಲಕ್ಷ ಜನ ನಿಧನ: ಕೇಂದ್ರ ಸರ್ಕಾರ
ಪ್ರತಿ ವರ್ಷ ಸರಾರಸರಿ ೫ ಲಕ್ಷ ಅಪಘಾತಗಳಾಗುತ್ತವೆ ಮತ್ತು ಇವುಗಳಲ್ಲಿ ಸುಮಾರು ೧.೫ಲಕ್ಷ ಜನ ಸಾವನಪ್ಪುತ್ತಾರೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.

ನವದೆಹಲಿ: ಪ್ರತಿ ವರ್ಷ ಸರಾರಸರಿ ೫ ಲಕ್ಷ ಅಪಘಾತಗಳಾಗುತ್ತವೆ ಮತ್ತು ಇವುಗಳಲ್ಲಿ ಸುಮಾರು ೧.೫ಲಕ್ಷ ಜನ ಸಾವನಪ್ಪುತ್ತಾರೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
ಈ ಅಪಘಾತಗಳಲ್ಲಿ ಶೇಕಡಾ ೭೮% 'ಚಾಲಕರ ತಪ್ಪು' ಕಾರಣ ಮತ್ತು ಚಾಲಕರಿಗೆ ಇನ್ನು ಸರಿಯಾದ ತರಬೇತಿಯ ಅವಶ್ಯಕತೆ ಇದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರಾಜ್ಯ ಸಚಿವ ಪೋನ್ ರಾಧಾಕೃಷ್ಣ ತಿಳಿಸಿದ್ದಾರೆ.
ಸದನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರತಿವರ್ಷ ಸರಾಸರಿ ೫ ಲಕ್ಷ ಅಪಘಾತಗಳಾಗುತ್ತವೆ ಅವುಗಳಲ್ಲಿ ಸುಮಾರು ೧.೫ ಲಕ್ಷ ಜನ ಸಾವನ್ನಪ್ಪುತ್ತಾರೆ ಹಾಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಗಾಯಗೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಅಪಘಾತಗಳಿಂದ ಹಲವಾರು ಜನ ಪ್ರಾಣ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಎಚ್ಚರಿಕೆಯ ಕೂಗು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಚಾಲಕರಿಗೆ ತರಬೇತಿ ನೀಡಲು ಸಂಸ್ಥೆಗಳನ್ನು ಸ್ಥಾಪಿಸುವ ಯಾವುದೇ ಯೋಜನೆಗಳಿದೆಯೇ ಎಂಬ ಪ್ರಶ್ನಗೆ, ರಾಧಾಕೃಷ್ಣನ್ ಅವರು ಚಾಲಕ ಪರವಾನಗಿ ನೀಡುವುದು ರಾಜ್ಯಸರ್ಕಾರ ಆದುದರಿಂದ ಇದರಲ್ಲಿ ಕೇಂದ್ರದ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ. ಈ ಉತ್ತರ ಅನೇಕ ಸಂಸದರಲ್ಲಿ ಆಕ್ರೋಶ ಮೂಡಿಸಿ, ಕೇಂದ್ರ ಸರ್ಕಾರದ ಈ ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ ಎಂದಿದ್ದಾರೆ.
ಇದರ ಮಧ್ಯೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಟ್ಟಿಗೆ ಕೆಲಸ ಮಾಡುವ ಅಗತ್ಯವಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


