ಭಾರತ ಪಾಕ್ ಗಡಿಯಲ್ಲಿ ಭಾರಿ ಗುಂಡಿನ ಚಕಮಕಿ
ಜಮ್ಮು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಭಾರಿ ಗುಂಡಿನ ಚಕಮಕಿ ನಡೆಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು: ಜಮ್ಮು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಭಾರಿ ಗುಂಡಿನ ಚಕಮಕಿ ನಡೆಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಜಿಲ್ಲೆಯ ಕನಾಚಕ್ ಪ್ರದೇಶದ ಬಳಿ ನೆನ್ನೆ ರಾತ್ರಿ ಗಡಿ ರಕ್ಷಣಾ ಪಡೆ (ಬಿ ಎಸ್ ಎಫ್) ಸಂಶಯಾತ್ಮಕ ಚಲನವಲನಗಳನ್ನು ಗಮನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಯಾವುದೇ ನುಸುಳಿವಿಕೆಯನ್ನು ತಡೆಯಲು ಬಿ ಎಸ್ ಎಫ್ ಗುಂಡಿನ ದಾಳಿ ನಡೆಸಿದೆ ತದನಂತರ ಮುಂಜಾನೆಯವರೆಗೆ ಪರಿಸ್ಥಿತಿ ತಣ್ಣಗಾಗಿದೆ.
"ಆದರೆ ಬೆಳಗ್ಗೆ ೬:೦೫ಕ್ಕೆ ಪಾಕಿಸ್ತಾನ ರೇಂಜರ್ ಗಳು ಬಿ ಎಸ್ ಎಫ್ ಗಡಿ ಅಡ್ಡೆಯ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದಾರೆ" ಎಂದು ಕೂಡ ಅವರು ತಿಳಿಸಿದ್ದಾರೆ.
ಇದಕ್ಕೆ ಪರಿಣಾಮಕಾರಿಯಾಗಿ ಬಿ ಎಸ್ ಅಫ್ ಪ್ರತಿಕ್ರಿಯೆ ನೀಡಿದ್ದು ಗುಂಡಿನ ಚಕಮಕಿ ಜಾರಿಯಲ್ಲಿದೆ.
ಸೋಮವಾರ ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ರೇಂಜರ್ ಗಳು ಗಡಿ ನಿತಂತ್ರಣಾ ರೇಖೆ ಮತ್ತು ಅಂತರಾಷ್ಟ್ರೀಯ ಗಡಿಯ ನಾಲ್ಕು ಕಡೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


