ಪ್ರಧಾನ ಸುದ್ದಿ

ಪಾಕಿಸ್ತಾನ ಹಿಂದೂಗಳ ಕಲ್ಯಾಣಕ್ಕೆ ಬದ್ಧರಾಗಿದ್ದೇವೆ: ಸುಷ್ಮಾ ಸ್ವರಾಜ್

ಹಿಂದೂಗಳನ್ನು ಒಳಗೊಂಡಂತೆ ಪಾಕಿಸ್ತಾನದ ಅಲ್ಪಸಂಖ್ಯಾತರ ಸಮಾಜ ಕಲ್ಯಾಣಕ್ಕೆ ಅಡ್ಡಿಯಾಗಿರುವ ಬೆಳವಣಿಗೆಗಳನ್ನು ಕೇಂದ್ರ ಗಮನಿಸುತ್ತಿದ್ದು, ಇಸ್ಲಮಾಬಾದಿನ

ಪಾಕಿಸ್ತಾನ ಹಿಂದೂಗಳ ಕಲ್ಯಾಣಕ್ಕೆ ಬದ್ಧರಾಗಿದ್ದೇವೆ: ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
Published On :

ನವದೆಹಲಿ: ಹಿಂದೂಗಳನ್ನು ಒಳಗೊಂಡಂತೆ ಪಾಕಿಸ್ತಾನದ ಅಲ್ಪಸಂಖ್ಯಾತರ ಸಮಾಜ ಕಲ್ಯಾಣಕ್ಕೆ ಅಡ್ಡಿಯಾಗಿರುವ ಬೆಳವಣಿಗೆಗಳನ್ನು ಕೇಂದ್ರ ಗಮನಿಸುತ್ತಿದ್ದು, ಇಸ್ಲಮಾಬಾದಿನ ಜೊತೆ ಅಗತ್ಯವಾದ ಸಭೆಗಳನ್ನು ನಡೆಸಿ ಈ ವಿಷಯಗಳನ್ನು ಚರ್ಚಿಸಲಿದ್ದೇವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಪಂಜಾಬಿನ ಬಿಜೆಪಿ ರಾಜ್ಯಸಭಾ ಸಂಸದ ಅವಿನಾಶ್ ರಾಯ್ ಖನ್ನ ಅವರ ಪತ್ರಕ್ಕೆ ಉತ್ತರಿಸಿದ ಸುಷ್ಮಾ ಸ್ವರಾಜ್, ಹಿಂದುಗಳು ತಮ್ಮ ಮದುವೆಯ ನೊಂದಣಿ ಮಾಡಿಸಿಕೊಳ್ಳಲು ಪಡುತ್ತಿರುವ ತೊಂದರೆಗಳ ಬಗ್ಗೆ ಪಾಕಿಸ್ತಾನದ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

"ಹಲವಾರು ಹಿಂದುಗಳು ಪಾಕಿಸ್ತಾನದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ಅಧಿಕಾರಿಗಳು ಅವರಿಗೆ ಮಾಡುವೆ ನೊಂದಣಿ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲ" ಎಂದು ಖನ್ನ ದೂರಿದ್ದರು.

ಸುಷ್ಮಾ ಅವರು ನೀಡಿರುವ ಪ್ರತಿಕ್ರಿಯೆಯಲ್ಲಿ, ಪಾಕಿಸ್ತಾನಕ್ಕೆ ಈ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಮತ್ತು ಅಲ್ಪಸಂಖಾತರ ಮತ್ತು ಎಲ್ಲ ನಾಗರಿಕರ ಕಲ್ಯಾಣಕ್ಕೆ ಶ್ರಮಿಸುತ್ತಿರುವುದಾಗಿ ತಿಳಿಸಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.