ಪ್ರಧಾನ ಸುದ್ದಿ

ನೇಪಾಳ ಭೂಕಂಪ: 128 ಗಂಟೆಗಳ ಕಾಲ ಅವೇಶಷಗಳಡಿಯಲ್ಲಿ ಸಿಲುಕಿದ್ದ ಮಹಿಳೆ ರಕ್ಷಣೆ

ನೇಪಾಳದಲ್ಲಿ ಸಂಭವಿಸಿದ ಮಹಾಭೂಕಂಪನಕ್ಕೆ ನೆಲಸಮವಾಗಿದ್ದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿ, 128 ಗಂಟೆಗಳ ಕಾಲ ಜೀವ ಹಿಡಿದುಕೊಂಡಿದ್ದ...

ನೇಪಾಳ ಭೂಕಂಪ: 128 ಗಂಟೆಗಳ ಕಾಲ ಅವೇಶಷಗಳಡಿಯಲ್ಲಿ ಸಿಲುಕಿದ್ದ ಮಹಿಳೆ ರಕ್ಷಣೆ
ಅವಶೇಷಗಳಡಿಯಲ್ಲಿ ಸಿಲುಕಿ ಬದುಕುಳಿದ ಕೃಷ್ಣ ದೇವಿ ಖಡ್ಕಾ ಅವರನ್ನು ಕರೆದೊಯ್ಯುತ್ತಿರುವ ರಕ್ಷಣಾ ಸಿಬ್ಬಂದಿಗಳು
Published On :

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಮಹಾಭೂಕಂಪನಕ್ಕೆ ನೆಲಸಮವಾಗಿದ್ದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿ, 128 ಗಂಟೆಗಳ ಕಾಲ ಜೀವ ಹಿಡಿದುಕೊಂಡಿದ್ದ 24 ವರ್ಷದ ಯುವತಿಯನ್ನು ರಕ್ಷಿಸಲಾಗಿದೆ.

ನೇಪಾಳದ ರಕ್ಷಣಾ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿದ್ದ ಕೃಷ್ಣ ದೇವಿ ಖಡ್ಕಾ ಎಂಬ ಯುವತಿಯನ್ನು ರಕ್ಷಿಸಲಾಗಿದೆ. ಈ ಮಹಿಳೆ ಗೆಸ್ಟ್ ಹೌಸ್ ನಲ್ಲಿದ್ದಾಗ ಭೂಕಂಪನವಾಗಿದ್ದು. ಗೆಸ್ಟ್ ಹೌಸ್ ಧ್ವಂಸವಾಗಿದೆ. ಇದರಡಿಯಲ್ಲಿ 128 ಗಂಟೆಗಳ ಕಾಲ ಸಿಲುಕಿದ್ದ ಮಹಿಳೆ ಅನ್ನ, ನೀರು ಬೆಳಕಿಲ್ಲದೇ ಜೀವಿಸಿದ್ದಾರೆ.

ಅವರನ್ನು ಹೊರತೆಗೆಯುವಲ್ಲಿ ರಕ್ಷಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ನೇಪಾಳದಲ್ಲಿ ಭೂಕಂಪನದಿಂದಾಗಿ ಮೃತಪಟ್ಟವರ ಸಾವಿನ ಸಂಖ್ಯೆ 6,166ಕ್ಕೆ ಏರಿದೆ. 10 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ, 12,064 ಮನೆಗಳು ಧ್ವಂಸಗೊಂಡಿವೆ.

117 ವಿದೇಶಿಗರನ್ನು ನೇರಾಳದಿಂದ ಕಳುಹಿಸಿಕೊಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.