ಪ್ರಧಾನ ಸುದ್ದಿ

ವಾಯುವ್ಯ ಪಾಕಿಸ್ತಾನದಲ್ಲಿ 5.5 ಪ್ರಮಾಣದ ಭೂಕಂಪ

ರಿಕ್ಟರ್ ಮಾಪನದಲ್ಲಿ ದಾಖಲಾದ ೫.೫ ಪ್ರಮಾಣದ ಭೂಕಂಪ ಪಾಕಿಸ್ತಾನದ ವಾಯುವ್ಯಕ್ಕಿರುವ ಖೈಬರ್ ಪಖ್ತುಂಖ್ವ ಪ್ರಾಂತ್ಯವನ್ನು ಅಲುಗಾಡಿಸಿದೆ.

ವಾಯುವ್ಯ ಪಾಕಿಸ್ತಾನದಲ್ಲಿ 5.5 ಪ್ರಮಾಣದ ಭೂಕಂಪ
ಸಾಂದರ್ಭಿಕ ಭೂಪಟ
Published On :

ಪೇಶಾವರ್: ರಿಕ್ಟರ್ ಮಾಪನದಲ್ಲಿ ದಾಖಲಾದ ೫.೫ ಪ್ರಮಾಣದ ಭೂಕಂಪ ಪಾಕಿಸ್ತಾನದ ವಾಯುವ್ಯಕ್ಕಿರುವ ಖೈಬರ್ ಪಖ್ತುಂಖ್ವ ಪ್ರಾಂತ್ಯವನ್ನು ಅಲುಗಾಡಿಸಿದೆ. ಇದರ ಪರಿಣಾಮ ಸಾಧಾರಣವಾಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲವದರೂ ಅಲ್ಲಿನ ಜನರನ್ನು ಭಯಭೀತಗೊಳಿಸಿದೆ.

ತಜಕಿಸ್ತಾನದ ಗಡಿಯ ಹಿಂದ್ ಕುಶ್ ಪರ್ವತ ಶ್ರೇಣಿಯ ಕೇಂದ್ರದ ಈ ಭೂಕಂಪ ೧೪೪ ಕಿಮೀ ವರೆಗೂ ಅಲುಗಿಸಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ತಿಳಿಸಿದೆ.

ಮಾಲಾಕಂಡ್, ಸ್ವ್ಯಾಟ್, ದೀರ್ ಜಿಲ್ಲೆಗಳಲ್ಲಿ ಕಂಪನ ಸಂಭವಿಸಿದೆ.

"ಇಲ್ಲಿಯವರೆಗೂ ಯವುದೇ ಸಾವು ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ನೇಪಾಳ ಕೇಂದ್ರಿತ ಭೂಕಂಪ ನೇಪಾಳ ಮತ್ತು ಗಡಿಯಲ್ಲಿ ಭಾರತ ಮತ್ತು ಚೀನಾ ದೇಶದ ಕೆಲವು ಭಾಗಗಳನ್ನು ಕಂಪಿಸಿದ ಬೆನ್ನಲ್ಲೇ ಈ ಭೂಕಂಪ ಸಂಭವಿಸಿರುವುದು ಜನರಲ್ಲಿ ಭಯಭೀತಿಯನ್ನು ಸೃಷ್ಟಿಸಿದೆ.

೨೦೧೩ರಲ್ಲಿ ಸಂಭವಿಸಿದ ೭.೭ ಪ್ರಮಾಣದ ಪಾಕಿಸ್ತಾನದ ಭೂಕಂಪ ಸುಮಾರು ೫೦೦ ಜನರನ್ನು ಕೊಂದಿತ್ತು. ಪಾಕಿಸ್ತಾನ ಅತಿ ಕೆಟ್ಟ ಭೂಕಂಪ ೨೦೦೫ ರಲ್ಲಿ ಸಂಭವಿಸಿದ್ದು ರಿಕ್ಟರ್ ಮಾಪನದಲ್ಲಿ ೭.೬ ಪ್ರಮಾಣದ ಭೂಕಂಪ ೭೩ಸಾವಿರ ಜನರನ್ನು ಬಲಿ ತೆಗೆದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.