ಪ್ರಧಾನ ಸುದ್ದಿ

ಎವರೆಸ್ಟ್ ಶಿಖರದಲ್ಲಿ ಹಿಮಪಾತ: ಸಾವಿನ ಸಂಖ್ಯೆ 65 ಕ್ಕೆ ಏರಿಕೆ

ನೇಪಾಳದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪ ಮೌಂಟ್ ಎವರೆಷ್ಟ್ ಮೇಲೂ ಪರಿಣಾಮ ಬೀರಿದೆ. ಭೂಕಂಪ ಸಂಭವಿಸುತ್ತಿದ್ದಂತೆಯೇ...

ಎವರೆಸ್ಟ್ ಶಿಖರದಲ್ಲಿ ಹಿಮಪಾತ: ಸಾವಿನ ಸಂಖ್ಯೆ 65 ಕ್ಕೆ ಏರಿಕೆ
ಮೌಂಟ್ ಎವರೆಸ್ಟ್ ನಲ್ಲಿ ಹಿಮಾಪಾತ
Published On :

ನವದೆಹಲಿ : ನೇಪಾಳದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪ ಮೌಂಟ್ ಎವರೆಷ್ಟ್ ಮೇಲೂ ಪರಿಣಾಮ ಬೀರಿದೆ. ಭೂಕಂಪ ಸಂಭವಿಸುತ್ತಿದ್ದಂತೆಯೇ ಎವರೆಷ್ಟ್ ನಲ್ಲಿ ಒಂದೇ ಸಮನೆ ಭಾರಿ ಹಿಮಪಾತ ಆರಂಭವಾಗಿದೆ.

ಹಿಮಪಾತಕ್ಕೆ ಸಿಲುಕಿ 19ಮಂದಿ ಪರ್ವತಾರೋಹಿಗಳು ಜೀವ ಕಳೆದುಕೊಂಡಿದ್ದಾರೆ. 5 ಸಾವಿರ ಮೀಟರ್ ಎತ್ತರದಲ್ಲಿದ್ದ ಪರ್ವತಾರೋಹಿಗಳು ಬೇಸ್ ಕ್ಯಾಂಪ್ ಕಡೆಗೆ ಧಾವಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಏಪ್ರಿಲ್ ತಿಂಗಳಲ್ಲಿ ಸಣ್ಮಮಟ್ಟದ ಹಿಮಪಾತ ಸಾಮಾನ್ಯ.

ಆದರೆ ಭೂಕಂಪದ ಪ್ರಭಾವದಿಂದಾಗಿ ಈ ಬೆಳವಣಿಗೆಯಾಗಿದೆ. ಸತ್ತವರು ಹಾಗೂ ನಾಪತ್ತೆಯಾದವರ ವಿವರ ಇನ್ನೂ ಸಿಗಬೇಕಿದ್ದು, ಆರೋಹಿಗಳಲ್ಲಿ ಚೀನೀಯರು, ಶೆರ್ಪಾಗಳು ಹೆಚ್ಚಿನ ಸಂಖ್ಯೆಯವರಿದ್ದರು.

ಭಯದಲ್ಲೂ ಟ್ವೀಟ್: ನೂರಾರು ಆರೋಹಿಗಳು ಹಿಮಪಾತಕ್ಕೆ ಸಿಲುಕಿದ್ದಾರೆ. ಭೂಕಂಪದ ಪರಿಣಾಮದಿಂದ ಹಿಮಪಾತ ಹೆಚ್ಚಾಗಿದೆ. ಜೀವ ಉಳಿಸಿಕೊಳ್ಳಲು ಟೆಂಟ್ ಬಿಟ್ಟು ಓಡಲಾರಂಭಿಸಿ
ದ್ದೇವೆ. ನಮ್ಮ ಸುರಕ್ಷತೆಗಾಗಿ ಪ್ರಾರ್ಥಿಸಿ ಎಂದು ಅಲೆಕ್ಸ್ ಗಾವನ್
ಎಂಬ ರೊಮಾನಿಯಾದದ ಪರ್ವತಾರೋಹಿ ಹಿಮಪಾತದ ಭೀತಿಯ ನಡುವೆಯೇ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.