ಪ್ರಧಾನ ಸುದ್ದಿ

ಡಿ ಕೆ ರವಿ ಮಾವನಿಂದ ಸಿಸಿಟಿವಿ ದೃಶ್ಯಾವಳಿ ಪಡೆದ ಸಿಬಿಐ

ಐ ಎ ಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ, ಡಿ ಕೆ ರವಿ ಅವರ ಮಾವ ರಾಜಕೀಯ ನಾಯಕ

ಡಿ ಕೆ ರವಿ ಮಾವನಿಂದ ಸಿಸಿಟಿವಿ ದೃಶ್ಯಾವಳಿ ಪಡೆದ ಸಿಬಿಐ
ಡಿ ಕೆ ರವಿ
Published On :

ಬೆಂಗಳೂರು: ಐ ಎ ಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ, ಡಿ ಕೆ ರವಿ ಅವರ ಮಾವ ರಾಜಕೀಯ ನಾಯಕ ಹನುಮಂತರಾಯಪ್ಪ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಬಿಐನ ವಿಶೇಷ ತನಿಖಾ ತಂಡ ಹನುಮಂತರಾಯಪ್ಪನವರೊಂದಿಗೆ ಮಾತುಕತೆ ನಡೆಸಿದ್ದರು ಯಾವುದೇ ಅಧಿಕೃತ ತನಿಖೆ ನಡೆಸಿಲ್ಲ. "ಸಿಬಿಐ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಳ್ಳುವ ಮೊದಲು ನನ್ನ ಜೊತೆ ಸಾಮಾನ್ಯವಾಗಿ ಮಾತನಾಡಿದರು. ರವಿ ಅವರ ಸಾವಿನ ಎರಡು ದಿನ ಮುಂಚಿತವಾದ ಸಿಸಿಟಿವಿ ದೃಶ್ಯಾವಳಿಗಳನ್ನು ಸಿಐಡಿ ಅಧಿಕಾರಿಗಳು ಬೇಕಂತಲೇ ಅಳಿಸಿಹಾಕಿದ್ದಾರೆ ಎಂದು ಕೂಡ ನಾನು ಅವರಿಗೆ ತಿಳಿಸಿದೆ. ಅಳಿಸಿಹಾಕಿರುವ ದೃಶ್ಯಾವಳಿಗಳನ್ನು ತಜ್ಞರ ಸಹಾಯದೊಂದಿಗೆ ಮತ್ತೆ ಪಡೆಯುತ್ತೇವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ" ಎಂದು ಹನುಮಂತರಾಯಪ್ಪ ಹೇಳಿದ್ದಾರೆ,

ರವಿ ಅವರ ಸಾವಿಗೂ ಮುಂಚಿನ ಚಲನವಲನಗಳನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹಾಗೇಯೆ ಡಿ ಕೆ ರವಿ ಅವರ ಫೋನ್ ಕಾಲ್ ವಿವರಗಳನ್ನು ಅವರು ಪರಿಶೀಲಿಸುತ್ತಿದ್ದು, ನಂತರ ಕುಟುಂಬ ಸದಸ್ಯರನ್ನು ಪ್ರಶ್ನಿಸಲಾಗುವುದು ಎಂದಿದ್ದಾರೆ. ಮನೆ, ಕಚೇರಿ ಹಾಗೂ ಡಿ ಕೆ ರವಿ ಭೇಟಿ ನೀಡಿದ್ದ ಇತರ ಸ್ಥಳಗಳಿಂದ ಇತರ ಸಾಕ್ಷ್ಯಾಧಾರಗಳನ್ನು ಕೂಡ ಸಂಗ್ರಹಿಸುತ್ತಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.