ಉಚ್ಛಾಟನಾ ಪತ್ರ ಇನ್ನು ದೊರೆತಿಲ್ಲ: ಯೋಗೇಂದ್ರ ಯಾದವ್
ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಒಳಗೊಂಡಂತೆ ನಾಲ್ಕು ಜನರನ್ನು ಉಚ್ಛಾಟಿಸಿದ ಒಂದು ದಿನದ

ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಒಳಗೊಂಡಂತೆ ನಾಲ್ಕು ಜನರನ್ನು ಉಚ್ಛಾಟಿಸಿದ ಒಂದು ದಿನದ ನಂತರ, ತಮಗಿನ್ನೂ ಉಚ್ಛಾಟನಾ ಪತ್ರ ಬಂದಿಲ್ಲ ಎಂದು ಮಂಗಳವಾರ ಈ ನಾಯಕರು ಹೇಳಿದ್ದಾರೆ.
ಅಜಿತ್ ಝಾ ಮತ್ತು ಆನಂದ್ ಕುಮಾರ್ ಅವರೂ ಒಳಗೊಂಡಂತೆ ನಾವು ನಾಲ್ಕೂ ಜನ ಮೊದಲೇ ಪಕ್ಷದಿಂದ ಹೊರಬರಲು ನಿರ್ಧರಿಸಿದ್ದೆವು ಎಂದು ಈ ನಾಯಕರು ತಿಳಿಸಿದ್ದಾರೆ.
"ಪಕ್ಷದಿಂದ ಉಚ್ಛಾಟನಾ ಪತ್ರ ನಮಗಿನ್ನೂ ಬಂದಿಲ್ಲ. ಆದರೆ ಅದಕ್ಕೂ ಮುಂಚೆ ಅಂದರೆ ನೆನ್ನೆ (ಸೋಮವಾರ) ಸಂಜೆ, ನಾವು ನಾಲ್ಕೂ ಜನ ಆಮ್ ಆದ್ಮಿ ಪಕ್ಷದಿಂದ ಹೊರಬರಲು ನಿರ್ಧರಿಸಿದ್ದೆವು" ಎಂದು ಯೋಗೇಂದ್ರ ಯಾದವ್ ರಾಜಧಾನಿಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ಈ ನಾಯಕರನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಧಾರ ಆಪ್ ಪಕ್ಷ ಸೋಮವಾರ ತಡರಾತ್ರಿ ಹೊರಡಿಸಿತ್ತು. ಶೋಕಾಸ್ ನೋಟಿಸ್ ಗೆ ಭೂಷಣ್ ಮತ್ತು ಯಾದವ್ ಪ್ರತ್ಯೇಕವಾಗಿ ನೀಡಿದ್ದ ಉತ್ತರವನ್ನು ಪರಿಗಣಿಸಿ ಪಕ್ಷ ಈ ನಿರ್ಧಾರ ಕೈಗೊಂಡಿತ್ತು.
ಯಾದವ್, ಭೂಷಣ್, ಕುಮಾರ್ ಮತ್ತು ಝಾ ವಿರುದ್ಧದ ದೂರುಗಳನ್ನು ವಿಚಾರಣೆ ನಡೆಸಿ ನಿರ್ಧಾರ ಕೈಗೊಳ್ಳಲು ರಾಷ್ಟ್ರೀಯ ಶಿಸ್ತು ಸಮಿತಿ ಏಪ್ರಿಲ್ ೨೦ರಂದು ಸಭೆ ಸೇರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


