'ಒಣ ಗುಜರಾತ್'ನಲ್ಲಿ ಅಮೂಲ್ ಡೈರಿ ಅಧ್ಯಕ್ಷರ ಮನೆಯಿಂದ ಮದ್ಯ ವಶ
ಅಮೂಲ್ ಡೈರಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ರಾಮ್ ಸಿನ್ಹಾ ಪರ್ಮಾರ್ ಅವರ ಥಸ್ರಾ ಪಟ್ಟಣದ ಮನೆಯಿಂದ ೫.೩೨ ಲಕ್ಷ ಬೆಲೆ

ಅಹಮದಾಬಾದ್: ಅಮೂಲ್ ಡೈರಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ರಾಮ್ ಸಿನ್ಹಾ ಪರ್ಮಾರ್ ಅವರ ಥಸ್ರಾ ಪಟ್ಟಣದ ಮನೆಯಿಂದ ೫.೩೨ ಲಕ್ಷ ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
"೪.೮೪ ಲಕ್ಷ ಮೌಲ್ಯದ ೨೦೨೩ ಬಿಯರ್ ಬಾಟೆಲ್ಗಳು ಮತ್ತು ೪೮,೨೦೦ ರೂ ಮೌಲ್ಯದ ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯವನ್ನು ಪರ್ಮಾರ್ ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಒಬ್ಬ ಅಪ್ರಾಪ್ತನೂ ಸೇರಿದಂತೆ ಮೂರು ಜನರನ್ನು ಮಧ್ಯ ನಿಷೇಧ ಕಾಯ್ದೆಯಡಿ ಬಂಧಿಸಲಾಗಿದೆ" ಎಂದು ಥಾಸ್ರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎ ಜಿ ಚೌಹಾನ್ ತಿಳಿಸಿದ್ದಾರೆ.
ಮೂವರಲ್ಲಿ ಒಬ್ಬ ಐದನೇ ತರಗತಿಯ ವಿದ್ಯಾರ್ಥಿ ಹಾಗೂ ಇನ್ನಿಬ್ಬರು ವಿನು ಬಾಬು ಖಾರದ್ ಮತ್ತು ಪ್ರವೀಣ್ ಮಾಲಿ ಎಂದು ಗುರುತಿಸಲಾಗಿದೆ.
ಐಶರ್ ಟ್ರಕ್ಕಿನಿಂದ ದಾಸ್ತಾನು ಪ್ರದೇಶಕ್ಕೆ ಇವರುಗಳು ಬಾಟೆಲ್ ಗಳನ್ನು ಇಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
೧೯೬೦ ರಿಂದಲೂ ಮದ್ಯದ ಉತ್ಪಾದನೆ, ದಾಸ್ತಾನು, ಮಾರಾಟ ಮತ್ತು ಕುಡಿಯುವುದನ್ನು ಗುಜರಾತಿನಲ್ಲಿ ನಿಷೇಧಿಸಲಾಗಿದೆ.
ಥಾಸ್ರಾ ವಿಧಾನ ಸಭೆಯ ಪ್ರತಿನಿಧಿ ಪರ್ಮಾರ್ ಅವರನ್ನು ಸಂಪರ್ಕಿಸಿದಾಗ, ಅಮೂಲ್ ಡೈರಿ ಚುನಾವಣೆಗಳು ಇನ್ನೇನು ಸಮೀಸುತ್ತಿರುವುದರಿಂದ ಇದು 'ರಾಜಕೀಯ ಪಿತೂರಿ' ಎಂದಿದ್ದಾರೆ.
ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿರುವುದು ನನ್ನ ಮನೆಯ ಹೊರಗಡೆ. ಬಂಧಿತರಾದವರ ಬಗ್ಗೆ ನನಗೇನು ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


