ಶಾಲೆಯ ಪಾಯಿಖಾನೆ ಸ್ವಚ್ಛ ಮಾಡಲು ದಲಿತ ಮಕ್ಕಳ ಮೇಲೆ ಬಲಪ್ರಯೋಗ; ಪ್ರತಿಭಟನೆ
ಕಾಲಕ್ಕಾಡಿನ ಶಾಲೆಯೊಂದರಲ್ಲಿ ದಲಿತ ಮಕ್ಕಳಿಗೆ ಪಾಯಿಖಾನೆಯನ್ನು ಸ್ವಚ್ಛಗೊಳಿಸಲು ಅಧ್ಯಾಪಕರು ಬಲಪ್ರಯೋಗ ನಡೆಸಿರುವುದರ ವಿರುದ್ಧ ಪೋಷಕರು,

ತಿರುನೆಲ್ವೇಲಿ: ಕಾಲಕ್ಕಾಡಿನ ಶಾಲೆಯೊಂದರಲ್ಲಿ ದಲಿತ ಮಕ್ಕಳಿಗೆ ಪಾಯಿಖಾನೆಯನ್ನು ಸ್ವಚ್ಛಗೊಳಿಸಲು ಅಧ್ಯಾಪಕರು ಬಲಪ್ರಯೋಗ ನಡೆಸಿರುವುದರ ವಿರುದ್ಧ ಪೋಷಕರು, ಹಕ್ಕುಗಳ ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಕಾಲಕ್ಕಾಡೀನ ಬಳಿಯ ಕೀಲಾಪಥೈ ಪಂಡಿಥಂಕುರುಚಿಯ ಸರ್ಕಾರಿ ಸಹಾಯಧನದ ಶಾಲೆಯಲ್ಲಿ ಸುಮಾರು ೫೦೦ ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ೬ರಿಂದ ೮ನೆ ತರಗತಿಯ ಶಾಲೆಯ ಮಕ್ಕಳಿಗೆ ಶಾಲಾ ಅವಧಿಯಾ ನಂತರ ಪಾಯಿಖಾನೆಗಳನ್ನು ಸ್ವಚ್ಚಗೊಳಿಸುವಂತೆ ಅಧ್ಯಾಪಕರು ಬಲಪ್ರಯೋಗ ಮಾಡಿದ್ದಾರೆ. ಸ್ವಚ್ಛ ಮಾಡದೆ ಹೋದರೆ ಶಿಕ್ಷೆ ನೀಡುವುದಾಗಿ ಹೆದರಿಸಿದ್ದಾರೆ. ಕಳೆದ ಇಪ್ಪತ್ತು ದಿನಗಳಿಂದ ಇದು ನಡೆಯುತ್ತಿದ್ದರೂ ಮಕ್ಕಳು ಇತ್ತೇಚಿಗಷ್ಟೆ ತಮ್ಮ ಪೋಷಕರಿಗೆ ಈ ವಿಷಯ ತಿಳಿಸಿದ್ದಾರೆ.
"ಇದು ನಾಲ್ಕು ವಾರಗಳಿಂದ ನಡೆಯುತ್ತಿದ್ದರೂ ನನ್ನ ಮಗ ಇಂದೆ ಇದರ ಬಗ್ಗೆ ಹೇಳಿದ್ದು" ಎಂದು ೮ನೆ ತರಗತಿಯ ವಿದ್ಯಾರ್ಥಿಯ ತಂದೆ ಹೇಳಿದ್ದಾರೆ. ಒಂದು ಮಗು ಶಾಲೆಗೆ ಹೋಗಲು ನಿರಾಕರಿಸಿದ ಮೇಲೆ, ಅವರ ಪೋಷಕರಿಗೆ ಕಾರಣ ತಿಳಿದಿದೆ. ಆಗ ಇತರ ಪೋಷಕರಿಗೂ ಇದರ ಬಗ್ಗೆ ತಿಳಿದುಬಂದಿದೆ. ನಂತರ ಪೋಷಕರು, ಹಕ್ಕುಗಳ ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಜಿಲ್ಲಾ ಶೈಕ್ಷಣಿಕ ಅಧಿಕಾರಿ ಚೇರನ್ ಮಹಾದೇವಿ ಶಾಲೆಗೇ ತೆರಳಿ ಪೋಷಕರ ಜೊತೆ ಸಂಧಾನ ನಡೆಸಿದ್ದಾರೆ. ಶಾಲೆಯ ವಕ್ತಾರ ಪೋಷಕರ ಕ್ಷಮೆ ಕೋರಿದ್ದು ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


