ನಾಳೆ ಕರ್ನಾಟಕ ಬಂದ್: ಬಹುತೇಕ ಸಂಘಟನೆಗಳ ಬೆಂಬಲ
ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಕನ್ನಡ ಪರ ಸಂಘಟನೆಗಳು ಶನಿವಾರ ಬಂದ್ ಗೆ ಕರೆ ನೀಡಿದೆ...

ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಕನ್ನಡ ಪರ ಸಂಘಟನೆಗಳು ಶನಿವಾರ ಬಂದ್ ಗೆ ಕರೆ ನೀಡಿದೆ.
ಇದಕ್ಕೆ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿವೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ನೇತೃತ್ವದೊಂದಿಗೆ ಕನ್ನಡ ಸಂಘಟನೆಗಳ ಒಕ್ಕೂಟ'ಬಂದ್‍ಗೆ ಕರೆ ನೀಡಿದೆ.
ಶನಿವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತುರ್ತು ಸೇವೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ಚಟುವಟಿಕೆಗಳೂ ಬಂದ್ ಆಗಲಿವೆ. ಇದಕ್ಕೆ ರಾಜ್ಯಾದ್ಯಂತ ನೂರಾರು ಸಂಘಟನೆಗಳು ಸ್ವಯಂ ಪ್ರೇರಣೆಯಲ್ಲಿ ಬೆಂಬಲ ಸೂಚಿಸಿ, ಬಂದ್‍ನಲ್ಲಿ ಭಾಗವಹಿಸುವುದಾಗಿ ಹೇಳಿವೆ.
ನಾಳೆ ಕೋರ್ಟ್ ಕಲಾಪಗಳು ಎಂದಿನಂತೆ ಸಾಗಲಿದೆ. ಮೆಟ್ರೋ ರೈಲು ಸಂಚರಿಸಲಿದೆ. ಹಾಲು ವಿತರಣೆ, ಔಷಧಿ, ಆ್ಯಂಬುಲೆನ್ಸ್ ಸೇವೆಗಳು ಲಭ್ಯವಾಗಲಿದೆ.
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ನಟ ಪ್ರೇಮ್, ಕಿಚ್ಚ ಸುದೀಪ್, ಚಂದ್ರಶೇಖರ ಪಾಟೀಲ್, ಪಾಟೀಲ್ ಪುಟ್ಟಪ್ಪ, ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ರಾಜ್ಯಾದ್ಯಂತ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಸಂಜೆ 4ರ ನಂತರ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ಎಲ್ಲಾ ಜ್ಯುವೆಲರಿ ಶಾಪ್ಸ್ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಬಂದ್ ಆಗಲಿದೆ.
ಇನ್ನೂ ಕೋಲಾರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಬೈಕ್ ರ್ಯಾಲಿ ಹಮ್ಮಿಕೊಳ್ಳಲಿದ್ದು, ಕೋಲಾರದ ಜನತೆ ಶಾಂತಿಯುತವಾಗಿ ಬಂದ್ ಗೆ ಬೆಂಬಲಿಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ.
ಬೆಂಬಲ ವ್ಯಕ್ತಪಡಿಸುತ್ತಿರುವ ಸಂಘಟನೆಗಳು
ಬೆಂಗಳೂರು ಆಟೋ ಚಾಲಕರ ಸಂಘ, ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ನೌಕರರ ಒಕ್ಕೂಟ, ಖಾಸಗಿ ಬಸ್ ಮಾಲೀಕರು, ಟ್ಯಾಕ್ಸಿ ಯೂನಿಯನ್ ಗಳು, ಸಾರಿಗೆ ಸಂಸ್ಥೆಗಳ ನೌಕರರ ಸಂಘ, ವಕೀಲರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಆಟೋ ಚಾಲಕರ ಸಂಘ, ಬೆಂಗಳೂರು ಆಟೋ ಚಾಲಕರ ಸಂಘ, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘ, ರಾಜ್ಯ ಬಾರ್ ಕೌನ್ಸ್ಲ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಫೋರಂ ಮಾಲ್, ಕನ್ನಡ ಚಿತ್ರೋದ್ಯಮ, ಫಿಲ್ಸ್ ಚೇಂಬರ್, ಪೆಟ್ರೋಲ್ ಬಂಕ್ ಮಾಲೀಕರು, ಬೆಂಗಳೂರಿನ ಎಲ್ಲಾ ಜ್ಯುವೆಲರಿ ಶಾಪ್ ಅಸೋಸಿಯೇಷನ್
ಸಂಚಾರ ವ್ಯವಸ್ಥೆ
ಖಾಸಗಿ ಬಸ್ ಗಳ ಸಂಚಾರವಿಲ್ಲ, ಟ್ಯಾಂಕರ್ ವಾಹನಗಳು ಸಂಚಾರಲ ಇಲ್ಲ, ಹೊಸ ರಾಜ್ಯದ ಲಾರಿಗಳು ಚೆಕ್ ಪೋಸ್ಟ್ ಬಳಿ ಸ್ಥಗಿತ, ಸರಕು ಸಾಗಾಣೆ, ಟ್ಯಾಕ್ಸಿ, ಏರ್ ಪೋರ್ಟ್ ಟ್ಯಾಕ್ಸಿಗಳು, ಗ್ಯಾಸ್ ಟ್ಯಾಂಕರ್ ವಾಹನಗಳ ಸಂಚಾರ ಇಲ್ಲ, ಆಟೋ, ಟ್ಯಾಕ್ಸಿ ಸಂಚಾರವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


