ಜನತಾ ಪರಿವಾರ ವಿಲೀನ ಬಿಜೆಪಿಗೆ ಧ್ವಂಸಕ ಶಕ್ತಿಯಾಗಿ ಪರಿಣಮಿಸಲಿದೆ: ನಿತೀಶ್
ಜನತಾ ಪರಿವಾರದ ವಿಲೀನದ ಬಗ್ಗೆ ಬಿಜೆಪಿ ಪಕ್ಷದ ಪ್ರತಿಕ್ರಿಯೆಗಳ ಮೇಲೆ ಪ್ರಹಾರ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಪಾಟ್ನಾ: ಜನತಾ ಪರಿವಾರದ ವಿಲೀನದ ಬಗ್ಗೆ ಬಿಜೆಪಿ ಪಕ್ಷದ ಪ್ರತಿಕ್ರಿಯೆಗಳ ಮೇಲೆ ಪ್ರಹಾರ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರು ಪಕ್ಷಗಳ ವಿಲೀನ ಪ್ರಕ್ರಿಯೆ ಕೇಸರಿ ಪಕ್ಷಕ್ಕೆ ಧ್ವಂಸಕ ಶಕ್ತಿಯಾಗಿ ಪರಿಣಮಿಸಲಿದೆ ಎಂದು ಸಾಬೀತುಪಡಿಸಲಿದೆ ಎಂದಿದ್ದಾರೆ.
"ಅವರು ಹಾಸ್ಯ ಮಾಡುತ್ತಿರುವ ವಿಲೀನ ಬಿಜೆಪಿ ಪಕ್ಷಕ್ಕೆ ಧ್ವಂಸಕ ಶಕ್ತಿಯಾಗಲಿದೆ ಎಂದು ಅವರಿಗೆ ತಿಳಿದಿಲ್ಲ. ನಿಜವಾಗಿ ಅವರು ಹಾಸ್ಯ ಮಾಡುತ್ತಿಲ್ಲ ಆದರೆ ಅವರ ಅಜಾಗೃತ ಮನಸ್ಸಿನಲ್ಲಿರುವ ಭಯವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ" ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಜನತಾದಳ(ಸಂಯುಕ್ತ), ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ, ಜನತಾ ದಳ (ಜಾತ್ಯಾತೀತ), ಭಾರತೀಯ ರಾಷ್ಟೀಯ ಲೋಕ ದಳ ಹಾಗು ಸಮಾಜವಾದಿ ಜನತಾ ಪಕ್ಷಗಳ ವಿಲೀನ ಸಭೆಯ ನಂತರ ವರದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಈ ಹೇಳಿಕೆಗಳನ್ನು ನೀಡಿದ್ದರೆ.
ಮೂಲದ ಜನತಾದಳ ಪಕ್ಷವಾಗಿದ್ದ ಈ ಆರು ಪಕ್ಷಗಳು ೧೯೮೯ರಲ್ಲಿ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಿತ್ತು. ನವದೆಹಲಿಯ ಮುಲಾಯಂ ಸಿಂಗ್ ಯಾದವ್ ಮನೆಯಲ್ಲಿ ಸಭೆ ಸೇರಿರುವ ಈ ಪಕ್ಷಗಳ ನಾಯಕರು, ಪಕ್ಷದ ಹೊಸ ಹೆಸರು, ಚಿಹ್ನೆ ಮತ್ತು ಬಾವುಟಗಳನ್ನು ಮುಂದೆ ಘೋಷಿಸಲಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರನ್ನು ಹೊಸ ಪಕ್ಷದ ಅಧ್ಯಕ್ಷ ಎಂದು ಘೋಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


