ದಲಿತ್ ವೋಟ್ ಬ್ಯಾಂಕ್ ಮೇಲೆ ಕಣ್ಣು, ದೊಡ್ಡ ಮಟ್ಟದಲ್ಲಿ ಅಂಬೇಡ್ಕರ್ ಜಯಂತಿಗೆ ಬಿಜೆಪಿ ಸಜ್ಜು
ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಗೆ ಕಾಂಗ್ರೆಸ್ ದೇಶಾದ್ಯಂತ್ಯ ಯೋಜನೆ ಮಾಡುತ್ತಿದ್ದಂತೆಯೇ, ಹಿಂದುಳಿಯದ ಬಿಜೆಪಿ

ನವದೆಹಲಿ: ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಗೆ ಕಾಂಗ್ರೆಸ್ ದೇಶಾದ್ಯಂತ್ಯ ಯೋಜನೆ ಮಾಡುತ್ತಿದ್ದಂತೆಯೇ, ಹಿಂದುಳಿಯದ ಬಿಜೆಪಿ ಪಕ್ಷದ ಅಧ್ಯಕ್ಷ ಅಮಿತ್ ಷಾ ರಾಷ್ಟ್ರದಾದ್ಯಂತ ಅಂಬೇಡ್ಕರ್ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುವಂತೆ ಕಾರ್ಯಕರ್ತರಿಗೆ ಸೋಮವಾರ ಕರೆ ಕೊಟ್ಟಿದ್ದಾರೆ.
"ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ನಾಯಕರಾಗಿರಲಿಲ್ಲ. ಅವರು ಸಮಾಜದ ಎಲ್ಲ ವರ್ಗದವರಿಗೂ, ಎಲ್ಲ ಮತಧರ್ಮದವರಿಗೂ ನಾಯಕರಾಗಿದ್ದರು. ಅಂಬೇಡ್ಕರ್ ಅವರ ೧೨೫ ಜನ್ಮದಿನಾಚರಣೆಯನ್ನು ಆಚರಿಸಲು ಹಾಗು ಅವರ ಸಂದೇಶವನ್ನು ಜನರಿಗೆ ಕೊಂಡೊಯ್ಯಲು ಪ್ರಾದೇಶಿಕ ಮಟ್ಟದಲ್ಲಿ ರಾಷ್ಟ್ರದಾದ್ಯಂತ ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷ ಆಯೋಜಿಸಲಿದೆ" ಎಂದು ಪಕ್ಷ ಎಸ್ ಸಿ ಮೋರ್ಚಾ ಸಭೆಯಲ್ಲಿ ಹೇಳಿದ್ದಾರೆ.
ಅಂಬೇಡ್ಕರ್ ಅವರು ಜೀವನ ನಡೆಸಿದ್ದ ನಾಗಪುರ ಮತ್ತು ಮುಂಬೈ ಮುಂತಾದ ಸ್ಥಳಗಳ ಅಭಿವೃದ್ಧಿಗೆ ಬಿಜೆಪಿ ಪಕ್ಷ ಶ್ರಮಿಸಿದೆ ಎಂದಿರುವ ಅವರು ಅಂಬೇಡ್ಕರ್ ಕೆಲವು ಕಾಲ ಬದುಕಿದ್ದ ಲಂಡನ್ನಿನಲ್ಲು ಒಂದು ಸ್ಥಳ ನಿರ್ಮಿಸುವ ಆಗ್ಗೆ ಕೇಂದ್ರ ಚಿಂತನೆ ನಡೆಸುತ್ತಿದೆ ಎಂದಿದ್ದಾರೆ.
ಅಂಬೇಡ್ಕರ್ ಜೀವನದ ಮುಖ್ಯಾಂಶಗಳನ್ನು ಪಟ್ಟಿ ಮಾಡಿರುವ ಪುಸ್ತಕವನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಾಗುವುದು ಎಂದು ಮೋರ್ಚಾದ ಅಧ್ಯಕ್ಷ ದುಶ್ಯಂತ್ ಕುಮಾರ್ ಗೌತಮ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


