ಉಚ್ಛಾಟಿತ ನಾಯಕರು ಮತ್ತೆ ತೆಕ್ಕೆಗೆ; ಸಂಜಯ್ ಸಿಂಗ್ ಸ್ಪಷ್ಟನೆ ಕೇಳಿದ ಎಎಪಿ ಪಂಜಾಬ್ ಘಟಕ
ಆಮ್ ಆದ್ಮಿ ಪಕ್ಷದ ಶಿಸ್ತು ಪಾಲನಾ ಸಮಿತಿ, ಉಚ್ಛಾಟಿತ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನದ ಕುರಿತು ಸ್ಪಷ್ಟನೆ ನೀಡುವಂತೆ

ಜಲಂಧರ್: ಆಮ್ ಆದ್ಮಿ ಪಕ್ಷದ ಶಿಸ್ತು ಪಾಲನಾ ಸಮಿತಿ, ಉಚ್ಛಾಟಿತ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನದ ಕುರಿತು ಸ್ಪಷ್ಟನೆ ನೀಡುವಂತೆ ಹಿರಿಯ ನಾಯಕ ಸಂಜಯ್ ಸಿಂಗ್ ಅವರಿಗೆ ನೋಟಿಸ್ ನೀಡಿದೆ.
"ಸುಮಾರು ೨೩ ಜನ ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಹೊರಹಾಕಲಾಗಿದ್ದ, ಉಚ್ಛಾಟಿಸಲಾಗಿದ್ದ ನಾಯಕರನ್ನು ಮತ್ತೆ ಪಕ್ಷ ಸೇರುವಂತೆ ಆಹ್ವಾನ ನೀಡಲಾಗಿದೆ ಎಂಬ ವದಂತಿಗಳು ಗಾಳಿಯಲ್ಲಿ ದಟ್ಟವಾಗಿದೆ" ಎಂದು ಎಎಪಿ ಪಕ್ಷ ಪಂಜಾಬ್ ಘಟಕದ ಶಿಸ್ತು ಪಾಲನಾ ಸಮಿತಿ ಸದಸ್ಯ ಪ್ರಣವ್ ರವಿ, ಸಂಜಯ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಉದಾಸೀನ ತೋರಿದ್ದು, ಉಚ್ಛಾಟಿತರನ್ನು ಪಕ್ಷದ ತೆಕ್ಕೆಗೆ ಮತ್ತೆ ತರಲು ತೆಗೆದುಕೊಂಡಿರುವ ಕ್ರಮ ಮತ್ತು ದಾಖಲೆಗಳ ವಿವರ ಕೇಳಿದ್ದಾರೆ.
ಇಲ್ಲಿಯವರೆಗೂ ಎಎಪಿ ಪಕ್ಷ ಪಂಜಾಬಿನಲ್ಲಿ ಸುಮಾರು ೨೩ ಪಕ್ಷದ ಸದಸ್ಯರನ್ನು ಉಚ್ಛಾಟಿಸಿದ್ದು ಅವರಲ್ಲಿ ಪ್ರೋ ಮಂಜಿತ್ ಸಿಂಗ್, ಬಲದೀಪ್ ಸಿಂಗ್ ಮತ್ತು ಜ್ಯೋತಿ ಮನ್ ಕೂಡ ಸೇರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


