ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ರೈತನ ಆತ್ಮಹತ್ಯೆ; ೧೨ಕ್ಕೆ ಏರಿದ ಸಾವಿನ ಸಂಖ್ಯೆ
ಆಲುಗಡ್ಡೆ ಬೆಳೆಯಿಂದ ಲಾಭ ಬರದೆ ಹೋದದ್ದಕ್ಕೆ ರೈತನಾಗಿದ್ದ ಯುವ ಎಂಜಿನಿಯರಿಂಗ್ ಪದವೀಧರ ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು

ಬುರ್ಧ್ವಾನ್: ಆಲುಗಡ್ಡೆ ಬೆಳೆಯಿಂದ ಲಾಭ ಬರದೆ ಹೋದದ್ದಕ್ಕೆ ರೈತನಾಗಿದ್ದ ಯುವ ಎಂಜಿನಿಯರಿಂಗ್ ಪದವೀಧರ ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಇದು ೨೦೧೫ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸತ್ತ ರೈತರ ಸಂಖ್ಯೆಯನ್ನು ೧೨ ಕ್ಕೆ ಏರಿಸಿದೆ.
ಮೆಮಾರಿಯ ತನ್ನ ಮನೆಯಲ್ಲಿ ೨೭ ವರ್ಷದ ಪ್ರೋಬಿನ್ ಕುಮಾರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಧೃಢೀಕರಿಸಿದ್ದಾರೆ.
ಪ್ರತಿಷ್ಟಿತ ಜಾಧವಪುರ ವಿಶ್ವವಿದ್ಯಾಲಯದ ಪದವೀಧರ ಪ್ರೋಬಿನ್. ಉದ್ಯೋಗ ಸಿಗದೇ ರೈತನಾಗಿದ್ದ ಪ್ರೋಬಿನ್, ಐದು ಎಕರೆ ಜಾಗದಲ್ಲಿ ಆಲುಗಡ್ಡೆ ಬೆಳೆದಿದ್ದ ಎಂದು ಅವರ ತಂದೆ ನಿವೃತ್ತ ಶಾಲಾ ಶಿಕ್ಷಕ ಗಂಗಾಧರ್ ಲಾಹಾ ತಿಳಿಸಿದ್ದಾರೆ.
ಬಂಪರ್ ಬೆಳೆ ಬಂದಿರುವುದರಿಂದ ರಾಜ್ಯದಲ್ಲಿ ಆಲೂ ಬೆಲೆ ಕುಸಿಯುತ್ತಿದೆ. ಇದರಿಂದ ನೊಂದಿರುವ ಪ್ರೋಬಿನ್ ಗುರುವಾರ ರಾತ್ರಿ ಊಟಕ್ಕೂ ಮುಂಚೆ ನೇಣು ಹಾಕಿಕೊಂಡಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋದಮೇಲೆ ವೈದ್ಯರು ಮೃತಪಟ್ಟಿರುವುದನ್ನು ಘೋಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


