ಪ್ರಧಾನ ಸುದ್ದಿ

ಮೊದಲು ನಿಮ್ಮ ನಾಯಕ ಎಲ್ಲಿದ್ದಾರೆಂದು ಹುಡುಕಿ: ರಾಹುಲ್ ಬಗ್ಗೆ ಅಮಿತ್ ಶಾ ವ್ಯಂಗ್ಯ

ಮೊದಲು ನಿಮ್ಮ ನಾಯಕ ಎಲ್ಲಿದ್ದಾರೆಂದು ಹುಡುಕಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮೊದಲು ನಿಮ್ಮ ನಾಯಕ ಎಲ್ಲಿದ್ದಾರೆಂದು ಹುಡುಕಿ: ರಾಹುಲ್ ಬಗ್ಗೆ ಅಮಿತ್ ಶಾ ವ್ಯಂಗ್ಯ
ಅಮಿತ್ ಶಾ
Published On :

ಬೆಂಗಳೂರು: ಮೊದಲು ನಿಮ್ಮ ನಾಯಕ ಎಲ್ಲಿದ್ದಾರೆಂದು ಹುಡುಕಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಪ್ರತಿಪಕ್ಷಗಳು ಹತಾಶೆಗೊಂಡಿವೆ. ನಿರಾಶೆಯಲ್ಲಿವೆ ಎಂದರು. ಅಲ್ಲದೆ ಬಿಜೆಪಿಯ ತಪ್ಪುಗಳನ್ನು ಹುಡುಕುವ ಬದಲು ನಿಮ್ಮ ನಾಯಕನನ್ನು ಹುಡುಕಿ ಎಂದು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದರು.

ಇದೇ ವೇಳೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಪಕ್ಷಕ್ಕೆ ತೃಪ್ತಿ ತಂದಿದೆ ಎಂದ ಶಾ, 10 ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಉತ್ತಮ ಕೆಲಸಗಳನ್ನು ಮಾಡಿದೆ ಎಂದರು.

ರಾಹುಲ್ ಗಾಂಧಿ ವಾಪಸ್ ಬಂದಾಗ ನಿಮಗೆ ತಿಳಿಯುತ್ತದೆ. ಅಲ್ಲಿಯವರೆಗೆ ಸುಮ್ಮನಿರಿ  ಎಂದು ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಮಧ್ಯೆ, ಕಳೆದ ಆರು ವಾರಗಳಿಂದ ನಾಪತ್ತೆಯಾಗಿರುವ ರಾಹುಲ್ ಗಾಂಧಿ ಏಪ್ರಿಲ್ 12ರಂದು ದೆಹಲಿಗೆ ವಾಪಸ್ ಆಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.