ಪ್ರಧಾನ ಸುದ್ದಿ

ಕಲ್ಲಿದ್ದಲು ಹಗರಣ: ಮನಮೋಹನ್ ಸಿಂಗ್ ರನ್ನು ಯಾಕೆ ವಿಚಾರಣೆಗೊಳಪಡಿಸಿಲ್ಲ?

ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಉದ್ಯಮಿ ಕೆ.ಎಂ. ಬಿರ್ಲಾ , ಕಲ್ಲಿದ್ದಲು ಇಲಾಖೆ ಮಾಜಿ ಸಚಿವ ಪಿ.ಸಿ ಪರೇಖ್ ಮತ್ತು ...

ಕಲ್ಲಿದ್ದಲು ಹಗರಣ: ಮನಮೋಹನ್ ಸಿಂಗ್ ರನ್ನು ಯಾಕೆ ವಿಚಾರಣೆಗೊಳಪಡಿಸಿಲ್ಲ?
ಮನಮೋಹನ್ ಸಿಂಗ್
Published On :
ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಉದ್ಯಮಿ  ಕೆ.ಎಂ. ಬಿರ್ಲಾ , ಕಲ್ಲಿದ್ದಲು ಇಲಾಖೆ ಮಾಜಿ ಸಚಿವ ಪಿ.ಸಿ ಪರೇಖ್ ಮತ್ತು ಇನ್ನಿತರರ ವಿರುದ್ಧ ತನಿಖೆ ನಡೆಸಿದ್ದರೂ, ಪ್ರಕರಣದ ಆರೋಪಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಯಾವುದೇ ರೀತಿಯ ತನಿಖೆ ನಡೆಸಿಲ್ಲ ಯಾಕೆ? ಎಂದು ವಿಶೇಷ ನ್ಯಾಯಾಲಯ ಸಿಬಿಐ ಅನ್ನು ಪ್ರಶ್ನಿಸಿದೆ.
ಸಿಬಿಐನ್ನು ತರಾಟೆಗೆ ತೆಗೆದುಕೊಂಡ ಸ್ಪೆಷಲ್ ಸಿಬಿಐ ನ್ಯಾಯಾಧೀಶ ಭಾರತ್ ಪರಾಶರ್, ಈ ಪ್ರಕರಣ ನಡೆದ ಅವಧಿಯಲ್ಲಿದ್ದ ಸಚಿವರನ್ನು ವಿಚಾರಣೆಗೊಳಪಡಿಸಬೇಕಾದ ಅಗತ್ಯವಿತ್ತಾ? ಅವರ ಹೇಳಿಕೆಗಳು ಅವಶ್ಯಕವಾಗಿತ್ತು ಎಂದು ನಿಮಗನಿಸುತ್ತಿದೆಯಾ? ಎಂದು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ತನಿಖಾ ಅಧಿಕಾರಿ, ಪ್ರಧಾನಿ ಕಚೇರಿಯ ಅಧಿಕಾರಿಗಳನ್ನು  ತನಿಖೆಯ ವೇಳೆ ವಿಚಾರಣೆಗೊಳಪಡಿಸಲಾಗಿದೆ ಮತ್ತು ಕಲ್ಲಿದ್ದಲು ಸಚಿವರ ಹೇಳಿಕೆ ಅಗತ್ಯವಿಲ್ಲ ಎಂದು ನಾವು ಮನಗಂಡಿದ್ದೇವೆ ಎಂದಿದ್ದಾರೆ.
ಆದಾಗ್ಯೂ, ಆವಾಗ ಕಲ್ಲಿದ್ದಲು ಸಚಿವರಾಗಿದ್ದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲು ನಮಗೆ ಅನುಮತಿ ಇರಲಿಲ್ಲ ಎಂದು ತನಿಖಾ ಅಧಿಕಾರಿಗಳು ಕೋರ್ಟ್ ಮುಂದೆ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.