ಮೋದಿ ಅವರ ದೃಢ ಮನಸ್ಸೇ ಅವರ ಶಕ್ತಿ: ಜೇಟ್ಲಿ
ಉತ್ತಮ ಕ್ರೀಡಾಪಟುವಿನಂತೆ ಮೋದಿಯವರಿಗೆ ದೃಢ ಮನಸ್ಸು ಇದೆ. ಅದೇ ಅವರ ಶಕ್ತಿ, ಅದರಿಂದಲೇ ಅವರಿಷ್ಟು ...

ನವದೆಹಲಿ: ಉತ್ತಮ ಕ್ರೀಡಾಪಟುವಿನಂತೆ ನರೇಂದ್ರ ಮೋದಿಯವರಿಗೆ ದೃಢ ಮನಸ್ಸು ಇದೆ. ಅದೇ ಅವರ ಶಕ್ತಿ, ಅದರಿಂದಲೇ ಅವರಿಷ್ಟು ಉನ್ನತ ಮಟ್ಟಕ್ಕೆ ಏರಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಳೆದ 15 ವರ್ಷಗಳಿಂದ ನಾನು ಮೋದಿ ಅವರ ಒಡನಾಡಿಯಾಗಿದ್ದೇನೆ. ಅವರು ತುಂಬಾ ಶಿಸ್ತಿನ ಹಾಗೂ ಕಟ್ಟು ನಿಟ್ಟಿನ ವ್ಯಕ್ತಿ ಎಂದು ಭಾನುವಾರ ಮಾಧ್ಯಮದವರೊಂದಿಗೆ ನಡೆದ ಸಂವಾದದಲ್ಲಿ ಜೇಟ್ಲಿ ಹೇಳಿದ್ದಾರೆ.
ಅವರ ಅಭಿವೃದ್ಧಿ ಮಂತ್ರಗಳು ಹಾಗೂ ಯೋಜನೆಗಳು ಅವರನ್ನು ಉತ್ತಮ ನಾಯಕನನ್ನಾಗಿ ಮಾಡಿದೆ. ಸರ್ಕಾರ ಮುನ್ನಡೆಸುವ ಕೆಲಸವೇ ಆಗಿರಲಿ, ಅವರು ತುಂಬಾ ಶ್ರದ್ಧೆ ಹಾಗೂ ಶ್ರವದಿಂದ ಕೆಲಸ ನಿರ್ವಹಿಸುತ್ತಾರೆ. ಇದರಿಂದಾಗಿಯೇ ಅವರಿಗೆ ಸರ್ಕಾರದಲ್ಲಿ ಯಾವ್ಯಾವ ವಿಭಾಗ ಯಾವ ಯಾವ ಕೆಲಸಗಳನ್ನು ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಸರಿಯಾಗಿ ಗೊತ್ತಿದೆ.
ಅವರೊಬ್ಬ ಉತ್ತಮ ಕಲಿಕೆಗಾರ. ಅವರು ಪ್ರಧಾನಿ ಹುದ್ದೆಗೇರಿದ್ದೇ ತಡ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ನಾಯಕರೆನಿಸಿಕೊಂಡರು. ಈ ಹಿಂದೆ ಯಾವುದೇ ರಾಜಕಾರಣಿ ಇಷ್ಟರ ಮಟ್ಟಿಗೆ ಬೆಳವಣಿಗೆ ಕಂಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಅವರ ಸಾಮರ್ಥ್ಯ ಏನೆಂದು ಗೊತ್ತಾಗಬೇಕಾದರೆ ಗುಜರಾತ್‌ಗೆ ಹೋಗಿ ನೋಡಬೇಕು ಎಂದು ಜೇಟ್ಲಿ ಮೋದಿಯವರನ್ನು ಶ್ಲಾಘಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


