ಚಿಟ್ ಫಂಡ್ ಹಗರಣ: ಒಡಿಶಾದಲ್ಲಿ ಸಿಬಿಐ ದಾಳಿ
ಒಡಿಶಾದಲ್ಲಿ ನಡೆದಿರುವ ಬಹುಕೋಟಿ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮಂಗಳವಾರ ...

ಭುಬನೇಶ್ವರ್: ಒಡಿಶಾದಲ್ಲಿ ನಡೆದಿರುವ ಬಹುಕೋಟಿ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮಂಗಳವಾರ ರಾಜ್ಯಸಭಾ ಸಭಾ ಸದಸ್ಯ ಪ್ಯಾರಿಮೋಹನ್ ಮೊಹಾಪಾತ್ರ ಅವರ ನಿವಾಸ ಸೇರಿದಂತೆ 22 ಸ್ಥಳಗಳಲ್ಲಿ ದಾಳಿ ನಡೆಸಿದೆ.
ರು. 4,373 ಕೋಟಿ ಹಗರಣದ ಬಗ್ಗೆ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಆದಾಗ್ಯೂ, ಈ ಹಗರಣ ಅಂತಿಂಥದಲ್ಲ, ಬರೋಬ್ಬರಿ ರು.20,000 ಕೋಟಿ ಅವ್ಯವಹಾರ ಇಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಸಿಬಿಐ ದಾಳಿಯಲ್ಲಿ ಈಗಾಗಲೇ ಮೂವರು ಬಿಜೆಡಿ ನಾಯಕರು ಬಂಧಿತರಾಗಿರುವುದರಿಂದ ಆಡಳಿತಾರೂಡ ಬಿಜು ಜನತಾ ದಳ (ಬಿಜೆಡಿ) ಪಕ್ಷಕ್ಕೆ ಇದು ತಲೆನೋವಾಗಿ ಪರಿಣಮಿಸಿದೆ.
ಭುಬನೇಶ್ವರದ 16 ಸ್ಥಳಗಳಲ್ಲಿ, ಕಟಕ್‌ನ 4 ಮತ್ತು ಟಿಲ್ಟಾಗಢ್ ಮತ್ತು ರೌರ್‌ಕೇಲಾದಲ್ಲಿ ಸೀಶೋರ್ ಗ್ರೂಪ್‌ನೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


