ಸೊಹರಾಬುದ್ಧೀನ್ ನಕಲಿ ಎನ್ಕೌಂಟರ್: ಅಮಿತ್ ಷಾಗೆ ತಾತ್ಕಾಲಿಕ ರಿಲೀಫ್
ಸೊಹರಾಬುದ್ಧೀನ್ ಶೇಕ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ, ಆರೋಪ ಪಟ್ಟಿ ಸಿದ್ಧವಾಗುವವರೆಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ...

ಮುಂಬೈ: ಸೊಹರಾಬುದ್ಧೀನ್ ಶೇಕ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ, ಆರೋಪ ಪಟ್ಟಿ ಸಿದ್ಧವಾಗುವವರೆಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಸಿಬಿಐ ವಿಶೇಷ ನ್ಯಾಯಾಲಯ ಮುಕ್ತಿ ಕೊಟ್ಟಿದೆ.
ಷಾ ಅವರು ಶಾಶ್ವತ ಮುಕ್ತಿಗೆ ಕೋರಿಕೆಯಿಟ್ಟಿದ್ದರೂ, ನ್ಯಾಯಾಲಯ ಆರೋಪ ಪಟ್ಟಿ ಸಿದ್ಧವಾಗುವರೆಗೆ ಮಾತ್ರ ಅವಕಾಶ ಕೊಟ್ಟಿದೆ. ನಂತರ ವಿಚಾರಣೆ ಪ್ರಾರಂಭವಾಗಲಿದೆ.
ಸೊಹರಾಬುದ್ಧೀನ್ ಅವರ ಸಹೋದರ ರುಬಬುದ್ದೀನ್ ಚಾರ್ಜ್ ಶೀಟಿನ ಇಂಗ್ಲಿಷ್ ಆವೃತ್ತಿಯ ಮನವಿಗೂ ಮನ್ನಣೆ ಕೊಟ್ಟಿರುವ ವಿಶೇಷ ನ್ಯಾಯಾಧೀಶ ಬಿ ಎಸ್ ಲೋಯಾ, ನವೆಂಬರ್ ೨೧ ರವರೆಗೆ ವಿಚಾರಣೆ ಮುಂದೂಡಿದ್ದು ರುಬಬುದ್ದೀನ್ ಅವರಿಗೆ ಚಾರ್ಜ್ ಶೀಟಿನ ಇಂಗ್ಲಿಷ್ ಆವೃತ್ತಿ ನೀಡುವಂತೆ ಸಿ ಬಿ ಐ ಗೆ ಕೋರ್ಟ್ ಸೂಚಿಸಿದೆ.
ಸಿಬಿಐ ಪ್ರಕಾರ, ನವೆಂಬರ್ ೨೦೦೫ ರಲ್ಲಿ ಸೊಹರಾಬುದ್ಧೀನ್ ಮತ್ತು ಅವರ ಹೆಂಡತಿ ಕೌಸರ್ ಬಿ ಅವರನ್ನು ಗುಜರಾತಿನ ಉಗ್ರಗಾಮಿ ನಿಗ್ರಹ ದಳ ಅಕ್ರಮವಾಗಿ ಕೊಂಡೊಯ್ದು ಗಾಂಧಿನಗರದ ಬಳಿ ಪೂರ್ವನಿಯೋಜಿತ ಎನ್ಕೌಂಟರ್ ನಲ್ಲಿ ಕೊಂದು ಹಾಕಿತ್ತು. ತನ್ನ ಸಾವಿಗೂ ಮುಂಚೆ ಸೊಹರಾಬುದ್ಧೀನ್ ವಾಣಿಜ್ಯೋದ್ಯಮಿಯೊಬ್ಬನಿಗೆ ಬೆದರಿಕೆ ಹಾಕಿ ದುಡ್ಡು ಕೇಳಿದ್ದ ಎಂದು ಆಪಾದಿಸಲಾಗಿತ್ತು.
ತುಳಸಿರಾಮ್ ಪ್ರಜಾಪತಿ ಈ ನಕಲಿ ಎನ್ಕೌಂಟರ್ ನ ಪ್ರತ್ಯಕ್ಷದರ್ಶಿಯನ್ನು, ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಚಪ್ರಿ ಗ್ರಾಮದ ಬಳಿ ಡಿಸೆಂಬರ್ ೨೦೦೬ ರಲ್ಲಿ ಮತ್ತೊಂದು ಎನ್ಕೌಂಟರ್ ನಲ್ಲಿ ಪೊಲೀಸರು ಕೊಂದು ಹಾಕಿದ್ದರು ಎಂದು ಸಿಬಿಐ ಹೇಳುತ್ತದೆ. ಮುಂಬೈ ನ್ಯಾಯಾಲಯದಲ್ಲಿ ಎರಡೂ ಪ್ರಕರಣಗಳ ವಿಚಾರಣೆ ಒಟ್ಟಿಗೆ ಆಗುತ್ತಿವೆ.
ನಕಲಿ ಎನ್ಕೌಂಟರ್ ನಡೆದ ಸಮಯದಲ್ಲಿ ಗುಜರಾತಿನ ಗೃಹ ಖಾತೆಯ ರಾಜ್ಯ ಸಚಿವರಾಗಿದ್ದ ಷಾ ಅವರನ್ನೂ ಒಳಗೊಂಡಂತೆ, ಸಿಬಿಐ ೩೭ ಜನರನ್ನು ಆರೋಪಿಗಳೆಂದು ಪರಿಗಣಿಸಿ ಹಲವು ಪೊಲೀಸರನ್ನೂ ಈ ಎರಡು ಪ್ರಕರಣಗಾಲ್ಲಿ ಆರೋಪಿಗಳೆಂದು ಗುರುತಿಸಿತ್ತು.
ಈ ಪಿತೂರಿಯಲ್ಲಿ ಷಾ ಭಾಗಿಯಾಗಿದ್ದಾರೆಂದು ಆಪಾದಿಸಲಾಗಿದೆ.
ಆಪಾದಿತರಲ್ಲಿ ಷಾ ಒಳಗೊಂಡಂತೆ, ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿಗಳಾದ ಡಿ ಜಿ ವಂಜಾರ ಮತ್ತು ರಾಜಕುಮಾರ್ ಪಾಂಡೆಯನ್ ಗೆ ಈಗಾಗಲೇ ಜಾಮೀನು ನೀಡಲಾಗಿದೆ.
ಸಾಕ್ಷ್ಯಾಧಾರಗಳಿಗೆ ಸಂಚಕಾರ ಇರುವುದನ್ನು ಗಮನಿಸಿ ಸರ್ವೋಚ್ಛ ನ್ಯಾಯಾಲಯ ಈ ಪ್ರಕರಣವನ್ನು ಅಹಮದಾಬಾದಿನಿಂದ ಮುಂಬೈಗೆ ವರ್ಗಾಯಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


