ಜರಾವಾ ಜನಾಂಗದ ಬಗ್ಗೆ ಚಿತ್ರೀಕರಣ ಮಾಡಿದ ನಿರ್ಮಾಪಕರ ವಿರುದ್ಧ ಕೇಸು
ಅಂಡಮಾನ್‌ನ ಜರಾವಾ ಬುಡಕಟ್ಟು ಜನರು ವಾಸವಾಗಿರುವ ರಕ್ಷಿತಾರಣ್ಯಕ್ಕೆ ಅಕ್ರಮವಾಗಿ ನುಗ್ಗಿ ಚಿತ್ರೀಕರಣ ಮಾಡಿದ ಇಬ್ಬರು ...

ಕೋಲ್ಕತ್ತಾ: ಅಂಡಮಾನ್‌ನ ಜರಾವಾ ಬುಡಕಟ್ಟು ಜನರು ವಾಸವಾಗಿರುವ ರಕ್ಷಿತಾರಣ್ಯಕ್ಕೆ ಅಕ್ರಮವಾಗಿ ನುಗ್ಗಿ ಚಿತ್ರೀಕರಣ ಮಾಡಿದ ಇಬ್ಬರು ಫ್ರೆಂಚ್ ನಿರ್ಮಾಪಕರ ವಿರುದ್ಧ ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
ಫ್ರಾನ್ಸ್‌ನ ಚಿತ್ರ ನಿರ್ದೇಶರ ಅಲೆಕ್ಸಾಂಡರ್ ಡೆರಿಮ್ಸ್ ಮತ್ತು ನಿರ್ಮಾಪಕ ಕ್ಲೈರ್ ಬೇಲ್‌ವರ್ಟ್ ಜವಾರಾ ಬುಡಕಟ್ಟು ಸಮುದಾಯದವರ ಬಗ್ಗೆ ಚಿತ್ರೀಕರಣ ಮಾಡಿದ್ದರು.
ಏತನ್ಮಧ್ಯೆ, ಕಾಡಿನಲ್ಲಿ ಚಿತ್ರೀಕರಣಕ್ಕೆ ಸಹಾಯ ಮಾಡಿದ ಮಾಯಾಬುಂಡೇರ್ ಬ್ಯಾಪಿಸ್ಟ್ ಚರ್ಚ್‌ನ ಫಾದರ್ ಸೋ ಸತ್ಯ ಅವರನ್ನು ಬಂಧಿಸಲಾಗಿದೆ ಎಂದು ಉತ್ತರ ಮತ್ತು ಮಧ್ಯ ಅಂಡಮಾನ್ ಎಸ್ಪಿ ಸಂತೋಷ್ ಕುಮಾರ್ ಮೀನಾ ಹೇಳಿದ್ದಾರೆ.
ಅಕ್ರಮವಾಗಿ ಕಾಡಿಗೆ ನುಗ್ಗಿ ಅಲ್ಲಿನ ಬುಡಕಟ್ಟು ಜನಾಂಗದವರ ಬಗ್ಗೆ ಚಿತ್ರೀಕರಣ ನಡೆಸಿದವರ ವಿರುದ್ಧ ನಾವು ಲುಕೌಟ್ ನೋಟಿಸ್ ಜಾರಿ ಮಾಡಿದ್ದೇವೆ. ಅವರನ್ನು ನಾವು ಪತ್ತೆ ಹಚ್ಚಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ನಮಗೆ ಸಾಕ್ಷ್ಯಾಧಾರಗಳು ಲಭಿಸಿದ್ದು, ಇದು ಅವರ ವಿರುದ್ಧದ ಆರೋಪವನ್ನು ಸಾಬೀತು ಪಡಿಸುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಪ್ರಸ್ತುತ ವರ್ಷ ಜನವರಿ 28 ಮತ್ತು ಫೆಬ್ರವರಿ 11ರ ಅವಧಿಯಲ್ಲಿ ಇಲ್ಲಿ ಚಿತ್ರೀಕರಣ ನಡೆದಿದ್ದು, ಆ ಚಿತ್ರ ನಿರ್ಮಾಪಕರನ್ನು ಪತ್ತೆ ಹಚ್ಚಲು ನಾವು ವಿದೇಶಾಂಗ ಸಚಿವಾಲಯ ಮತ್ತು ಇಂಟರ್‌ಪೋಲ್ ಸಹಾಯ ಪಡೆಯುವುದಾಗಿಯೂ ಪೊಲೀಸರು ಹೇಳಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ಚಿತ್ರ ನಿರ್ಮಾಪಕರ ವಿರುದ್ದ Protection of the Aboriginal Tribes (Amendment) ಕಾಯ್ದೆ 2012 ಮತ್ತು Foreigners Amendment 2004 ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


