ದೇಶ ವಿರೋಧಿ ನಿಲುವು ಹೊಂದಿದ 32 ವೆಬ್‌ಸೈಟ್‌ಗಳಿಗೆ ನಿಷೇಧ
ಜಿಹಾದಿ ತತ್ವಗಳನ್ನು ಪಸರಿಸುವ ಮತ್ತು ಭಾರತದ ವಿರೋಧ ನಿಲುವನ್ನು ಹೊಂದಿರುವ 32 ವೆಬ್‌ಸೈಟ್‌ಗಳನ್ನು ಕೇಂದ್ರ ...

ನವದೆಹಲಿ: ಜಿಹಾದಿ ತತ್ವಗಳನ್ನು ಪಸರಿಸುವ ಮತ್ತು ಭಾರತದ ವಿರೋಧ ನಿಲುವನ್ನು ಹೊಂದಿರುವ 32 ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಉಗ್ರ ನಿಗ್ರಹ ದಳದ ಆದೇಶದ ಮೇರೆಗೆ ಈ ವೆಬ್‌ಸೈಟ್‌ಗಳನ್ನು ನಿಷೇಧಿಸಲಾಗಿದೆ. ಕೆಲವೊಂದು ವೆಬ್‌ಸೈಟ್‌ಗಳು ಸಾಮಾಜಿಕ ತಾಣಗಳನ್ನು ತಮ್ಮ ಚಟುವಟಿಕೆಗೆ ಬಳಸುತ್ತಿದ್ದು, ಭಾರತದ ಯುವ ಜನತೆಯನ್ನು ಜಿಹಾದಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿವೆ.
ಈ ರೀತಿ ದೇಶ ವಿರೋಧಿ ನಿಲುವು ಹೊಂದಿರುವ weebly.com, vimeo.com, dailymotion.com and gist.github.com ಮೊದಲಾದ ವೆಬ್ ಸೈಟ್‌ಗಳನ್ನು ನಿಷೇಧಕ್ಕೊಳಪಡಿಸಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


