ಪ್ರಧಾನ ಸುದ್ದಿ

ದೆಹಲಿ ಮೆಟ್ರೋ: ಜೇಬು ಕತ್ತರಿಸುವವರಲ್ಲಿ ಶೇ ೯೪ ಮಹಿಳೆಯರು

ಮುಂದಿನ ಬಾರಿ ನೀವು ದೆಹಲಿ

ದೆಹಲಿ ಮೆಟ್ರೋ: ಜೇಬು ಕತ್ತರಿಸುವವರಲ್ಲಿ ಶೇ ೯೪ ಮಹಿಳೆಯರು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮುಂದಿನ ಬಾರಿ ನೀವು ದೆಹಲಿ ಮೆಟ್ರೋದಲ್ಲಿ ಸಂಚರಿಸುವಾಗ ಸಂಶಯಾತ್ಮಕ ಮಹಿಳೆ ಕಂಡು ಬಂದರೆ ಎಚ್ಚರದಿಂದಿರಿ. ಏಕೆಂದರೆ ಅಧಿಕೃತ ದಾಖಲೆಗಳು ಹೇಳುವಂತೆ ಪಿಕ್ ಪಾಕೆಟ್ ಮಾಡುವವರಲ್ಲಿ ಮಹಿಳೆಯರ ಕೈವಾಡವೇ ಸಿಂಹಪಾಲು. ಅದು ಶೇ ೯೪.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿ ಐ ಎಸ್ ಎಫ್) ಸಂಗ್ರಹಿಸಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೆಹಲಿ-ಎನ್ ಸಿ ಆರ್ ಪ್ರದೇಶದ ಮೆಟ್ರೊ ಸಂಚಾರದಲ್ಲಿ  ನಡೆದಿರುವ ಜೇಬುಕಳ್ಳತನದಲ್ಲಿ ೨೯೩ ಮಹಿಳೆಯರು ಹಾಗೂ ೨೨ ಪುರುಷರು ಭಾಗಿಯಾಗಿದ್ದಾರೆ. ದೆಹಲಿ ಮೆಟ್ರೊ ಸಂಚಾರದ ೧೩೪ ನಿಲ್ದಾಣಗಳಲ್ಲಿ ಭದ್ರತೆಯನ್ನು ಒದಗಿಸುವ ಸಂಸ್ಥೆ ಸಿ ಎಸ್ ಐ ಎಫ್ ಅಧಿಕಾರಿಗಳು ಈ ಎಲ್ಲ ಜೇಬುಗಳ್ಳರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೋದ ವರ್ಷ ಕೂಡ ೪೬೬ ಪಿಕ್ ಪಾಕೆಟ್ ಪ್ರಕರಣಗಳಲ್ಲಿ, ೪೨೧ ಪ್ರಕರಣಗಳಲ್ಲಿ ಸಿಕ್ಕಿಬಿದ್ದದ್ದು ಮಹಿಳೆಯರೇ ಎಂದು ತಿಳಿಸಿದೆ.

ಈ ವರ್ಷ ಸಿ ಐ ಎಸ್ ಅಫ್ ಭದ್ರತಾ ಸಿಬ್ಬಂದಿ ೨೯.೫೬ ಲಕ್ಷ ನಗದು, ೯ ಕೋಟಿಗೂ ಹೆಚ್ಚು ಮೌಲ್ಯದ ಚೆಕ್ಕುಗಳು/ಡ್ರಾಫ್ಟ್ ಗಳು, ೮೬,೬೮೩ ರೂ ವಿದೇಶಿ ನಗದು ಮತ್ತು ೧೬ ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದೆ. ಭದ್ರತಾ ತಪಾಸಣೆ ವೇಳೆ ಅಥವಾ ನಿಲ್ದಾಣಗಳಲ್ಲಿ ಪ್ರಯಾಣಿಕರು ಮರೆತು ಬಿಟ್ಟು ಹೋದ ೧೪೪ ಲ್ಯಾಪ್ ಟಾಪ್ ಗಳು, ೪೦ ಕ್ಯಾಮರಾಗಳು, ೧೧೫ ವಾಚುಗಳು, ೪೪೭ ಮೊಬೈಲ್ ಫೋನ್ ಗಳನ್ನು ಕೂಡ ವಶಪಡಿಸಿಕೊಂಡಿದ್ದು ತನಿಖೆಯ ನಂತರ ಇವುಗಳ ಮೂಲ ಹಕ್ಕುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.