ಪ್ರಧಾನ ಸುದ್ದಿ

ಬುಡಕಟ್ಟಿನ ಸಿ ಎಂ ನೇಮಿಸಲು ಬಿಜೆಪಿ ವಿಫಲ: ನಿತೀಶ್ ಕುಮಾರ್ ಟೀಕೆ

ಜಾರ್ಖಂಡ್ ರಾಜ್ಯ ಸ್ಥಾಪನೆಗೊಂಡ ಪ್ರಾಂಭದಿಂದಲೂ ರಾಜ್ಯದ ಮುಖ್ಯಮಂತ್ರಿ..

ಬುಡಕಟ್ಟಿನ ಸಿ ಎಂ ನೇಮಿಸಲು ಬಿಜೆಪಿ ವಿಫಲ: ನಿತೀಶ್ ಕುಮಾರ್ ಟೀಕೆ
ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
Published On :

ಪಾಟ್ನಾ: ಜಾರ್ಖಂಡ್ ರಾಜ್ಯ ಸ್ಥಾಪನೆಗೊಂಡ ಪ್ರಾಂಭದಿಂದಲೂ ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಚುಕ್ಕಾಣಿ ಹಿಡಿಯುತ್ತಿರುವ ಬುಡಕಟ್ಟಿನ ವ್ಯಕ್ತಿಯ ಸಂಪ್ರದಾಯವನ್ನು ಮುರಿದು ಆದಿವಾಸಿ ಜನಾಂಗಕ್ಕೆ ಸೇರದ ರಘುಬರ್ ದಾಸ್ ಅವರನ್ನು ನೇಮಕ ಮಾಡಿರುವುದಕ್ಕೆ ಜೆಡಿಯು ಮುಖಂಡ ನಿತೀಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದಿವಾಸಿಯಲ್ಲದ ಒಬ್ಬ ವ್ಯಕ್ತಿಯನ್ನು ಜಾರ್ಖಂಡ್ ಮುಖ್ಯಮಂತ್ರಿಯಾಗಿ ನೇಮಕ ಮಾಡಿ ಈ ಹಿಂದಿನ ಸಂಪ್ರದಾಯವನ್ನು ಮುರಿದಿರುವುದಲ್ಲದೆ, ಬುಡಕಟ್ಟು ಜನರ ಮೇಲೆ ನಮಗೆ ವಿಶ್ವಾಸವಿಲ್ಲ ಎಂಬ ಸಂದೇಶ ಬಿಜೆಪಿ ಕಳುಹಿಸಿದೆ ಎಂದಿದ್ದಾರೆ.

ಆದಿವಾಸಿ ಜನರ ಅಭಿಲಾಷೆಗಳನ್ನು ಪೂರೈಸಲೇ ಜಾರ್ಖಂಡ್ ರಾಜ್ಯವನ್ನು ಸ್ಥಾಪಿಸಿದ್ದು ಹಾಗು ಇದಕ್ಕಾಗಿ ಬುಡಕಟ್ಟು ಜನರ ಭಾವನೆಗಳನ್ನು ಗೌರವಿಸಲು ಇಲ್ಲಿಯವರೆಗೆ ಬುಡಕಟ್ಟು ಮೂಲದ ವ್ಯಕ್ತಿಯನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಿದ್ದುದು" ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.

ಈ ನಡೆ ಬುಡಕಟ್ಟು ಜನರಲ್ಲಿ ಅಸಮಧಾನ ಸೃಷ್ಟಿಸಲಿದ್ದು ಇದು ಬುಡಕಟ್ಟು ಜನರು ಮತ್ತು ಇತರ ಜನರ ಮಧ್ಯೆ ಅಸಮಾಧಾನ ಸೃಷ್ಟಿಸಲು ಕೇಸರಿ ಪಕ್ಷ  ರಾಜಕೀಯ ಮಾಡುತ್ತಿದೆ ಎಂದು ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.