ಅಜಂ ಖಾನ್ ಉಗ್ರ ಎಂದದ್ದಕ್ಕೆ ಕೇಂದ್ರ ಸಚಿವನ ವಿರುದ್ಧ ಕೇಸ್ ದಾಖಲು
ಉತ್ತರಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂ ಖಾನ್ ಅವರನ್ನು ಉಗ್ರಗಾಮಿ ...

ಲಕನೌ: ಉತ್ತರಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂ ಖಾನ್ ಅವರನ್ನು ಉಗ್ರಗಾಮಿ ಎಂದು ಕರೆದಿದ್ದಕ್ಕೆ, ಕೇಂದ್ರದ ಕೃಷಿ ರಾಜ್ಯ ಸಚಿವ ಸಂಜೀವ್ ಬಲಿಯಾನ್ ವಿರುದ್ಧ ಉತ್ತರ ಪ್ರದೇಶದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಅಜಂ ಖಾನ್ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನ ಆಚರಣೆಗಳ ಬಗ್ಗೆ ನಿಡಿದ್ದ ಹೇಳಿಕೆಯೊಂದರ ವಿರುದ್ಧ ಕೈಸ್ಲಾ ದಲ್ಲಿ ಡಿಸೆಂಬರ್ ೨೧ ರಂದು ನಡೆದ ಕಿಸಾನ್ ಸಮ್ಮೇಳನದ ಜೊತೆಜೊತೆಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಲಿಯಾನ್, ಅಜಂ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದಕ್ಕೂ ಮುಂಚೆ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಅಜಂ ಖಾನ್, ಮುಲಾಯಂ ಸಿಂಗ್ ಯಾದವ್ ಅವರ ಜನ್ಮ ದಿನದ ಅದ್ದೂರಿ ಆಚರಣೆಗೆ ಹಣ ತಾಲಿಬಾನ್, ಎಲ್ ಇ ಟಿ ಮತ್ತು ದಾವೂದ್ ಇಬ್ರಹಾಂನಿಂದ ಬರುತ್ತದೆ ಎಂದು ವ್ಯಂಗ್ಯವಾಡಿದ್ದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಲಿಯಾನ್, ಭಯೋತ್ಪಾದಕರಿಂದ ಹಣ ತೆಗೆದುಕೊಂಡಿರುವುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡಿರುವವರು ಅತಿ ದೊಡ್ಡ ಭಯೋತ್ಪಾದಕ ಎಂದಿದ್ದಾರೆ.
ಬಲಿಯಾನ್ ಬಿಜೆಪಿಯ ನಾಯಕ ಮತ್ತು ಇವರ ಹೆಸರು ೨೦೧೩ರ ಮುಜಫರ್ ನಗರ ದಂಗೆಯಲ್ಲೂ ಕಾಣಿಸಿಕೊಂಡಿತ್ತು.
"... ಈ ಪ್ರಕರಣದಲ್ಲಿ, ಅವರು (ಅಜಂ ಖಾನ್) ತಮ್ಮ ಭಯೋತ್ಪಾದನಾ ಸಂಬಂಧವನ್ನು ಅವರೇ ಹೇಳಿಕೊಂಡಿರುವಾಗ, ಬಲಿಯಾನ್ ಹೇಳಿರುವುದರಲ್ಲಿ ತಪ್ಪೇನು? ಎಂದು ಬಿಜೆಪಿಯ ಮಾಧ್ಯಮ ವಕ್ತಾರ ವಿಜಯ್ ಬಹಾದ್ದೂರ್ ಪಾಠಕ್ ಬಲಿಯಾನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


