ಗೋ ಏರ್ ಟಿಕೆಟ್ ದರದಲ್ಲಿ ಕಡಿತ
ವಾಡಿಯಾ ಗ್ರೂಪ್‌ನ ಬಜೆಟ್ ಪರ ವಿಮಾನ ಗೋ ಏರ್ ಟಿಕೆಟ್ ದರದಲ್ಲಿ ಕಡಿತ ನೀಡುವುದಾಗಿ ಭಾನುವಾರ ಘೋಷಿಸಿದ್ದು...

ನವದೆಹಲಿ: ವಾಡಿಯಾ ಗ್ರೂಪ್‌ನ ಬಜೆಟ್ ಪರ ವಿಮಾನ ಗೋ ಏರ್ ಟಿಕೆಟ್ ದರದಲ್ಲಿ ಕಡಿತ ನೀಡುವುದಾಗಿ ಭಾನುವಾರ ಘೋಷಿಸಿದ್ದು, 1.7 ಮಿಲಿಯನ್ ಸೀಟುಗಳಲ್ಲಿ ಡಿಸ್ಕೌಂಟ್ ನೀಡಿದೆ.
ಮುಂದಿನ ವರ್ಷ ಪ್ರಯಾಣ ಮಾಡುವವರಿಗೆ ಅತೀ ಕಡಿಮೆ ಟಿಕೆಟ್ ದರ ರು. 1,469 ಆಗಿದ್ದು, ಇದಕ್ಕಾಗಿ 5 ದಿನಗಳ ಬುಕ್ಕಿಂಗ್ ಅವಧಿ ಸೋಮವಾರ ಆರಂಭವಾಗಿದೆ.
ಜನವರಿ 1 ರಿಂದ ಮಾರ್ಚ್ 31ರ ನಡುವಿನ ಅವಧಿಯಲ್ಲಿ ಪ್ರಯಾಣ ಮಾಡುವವರಿಗೆ ಗೋ ಏರ್ ನೆಟ್ವರ್ಕ್‌ನಲ್ಲಿರುವ ವಿಮಾನದಲ್ಲಿ ಈ ವಿಶೇಷ ಆಫರ್ ಲಭ್ಯವಾಗಲಿದೆ.
ಈ ಆಫರ್ ಬಯಸುವವರು ಡಿಸೆಂಬರ್ 21 ಮತ್ತು ಡಿಸೆಂಬರ್ 25ರ ನಡುವೆ ಬುಕ್ಕಿಂಗ್ ಮಾಡಬೇಕೆಂದು ಗೋಏರ್ ವಿಮಾನಯಾನ ಸಂಸ್ಥೆ ಹೇಳಿದೆ.
ಜನವರಿ-ಮಾರ್ಚ್ ತೈಮಾಸಿಕದಲ್ಲಿನ ಪ್ರಯಾಣವನ್ನು ಸುಗಮಗೊಳಿಸುವ ಸಲುವಾಗಿ ಬೆಲೆ ಕಡಿತ ನೀಡಲಾಗಿದೆ ಎಂದು ಗೋಏರ್ ಚೀಫ್ ಎಕ್ಸಿಕ್ಯೂಟಿವ್ ಜಿಯಾರ್‌ಜಿಯೋ ಡಿ ರೋನಿ ಹೇಳಿದ್ದಾರೆ.
ಮುಂಬೈ ಮೂಲದ ಈ ವಿಮಾನಯಾನ ಸಂಸ್ಥೆ ದೇಶಾದ್ಯಂತ 22 ಸ್ಥಳಗಳಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


