ಪ್ರಧಾನ ಸುದ್ದಿ

ಮತಾಂತರ ವಿರೋಧಿಸುವವರು ಅದನ್ನು ನಿಷೇಧಿಸುವ ಕಾನೂನು ತರಲಿ:ಭಾಗ್ವತ್

ಮತಾಂತರವನ್ನು ವಿರೋಧಿಸುವವರು ಅದನ್ನು ನಿಷೇಧಿಸಲು ಕಾನೂನು ತರಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ...

ಮತಾಂತರ ವಿರೋಧಿಸುವವರು ಅದನ್ನು ನಿಷೇಧಿಸುವ ಕಾನೂನು ತರಲಿ:ಭಾಗ್ವತ್
ಮೋಹನ್ ಭಾಗ್ವತ್ (ಸಂಗ್ರಹ ಚಿತ್ರ )
Published On :

ನವದೆಹಲಿ: ಮತಾಂತರವನ್ನು ವಿರೋಧಿಸುವವರು ಅದನ್ನು ನಿಷೇಧಿಸಲು ಕಾನೂನು ತರಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

ಮತಾಂತರ ವಿವಾದಗಳ ಬಗ್ಗೆ ಶನಿವಾರ ಮಾತನಾಡಿದ ಭಾಗ್ವತ್, ಮತಾಂತರವನ್ನು ವಿರೋಧಿಸುವವರು ಸಂಸತ್‌ನಲ್ಲಿ ಮತಾಂತರ ನಿಷೇಧದ ಕಾನೂನು ಜಾರಿ ಮಾಡಲಿ ಎಂದಿದ್ದಾರೆ.

ಇನ್ನೊಂದು ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗುವುದನ್ನು ವಿರೋಧಿಸುವ ಮಂದಿ ಮೊದಲು ಹಿಂದೂಗಳನ್ನು ಇತರ ಧರ್ಮಕ್ಕೆ ಮತಾಂತರ ಮಾಡುವುದನ್ನು ತಡೆಯಲಿ. ನೀವು ಅನ್ಯ ಧರ್ಮೀಯರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡುವುದು ಬೇಡ ಎನ್ನುವುದಾದರೆ, ಇತರ ಧರ್ಮದವರೂ ಹಿಂದೂಗಳನ್ನು ಅವರ ಧರ್ಮಕ್ಕೆ ಮತಾಂತರಿಸಬಾರದು. ಆದಾಗ್ಯೂ, ಹಿಂದೂಗಳು ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡಿದ್ದರೆ ನಾವು ಅವರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರುತ್ತೇವೆ ಎಂದು ಭಾಗ್ವತ್ ಒತ್ತಿ ಹೇಳಿದ್ದಾರೆ.

ಸದ್ಯ ಹಿಂದೂ ಸಮಾಜ ಎಚ್ಚೆತ್ತುಕೊಂಡಿದ್ದು ನಾವ್ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಾವು ಭಾರತಕ್ಕೆ ಎಲ್ಲಿಂದಲೋ ಬಂದವರಲ್ಲ, ಇದು ಹಿಂದೂಗಳ ದೇಶ ಎಂದು ಭಾಗ್ವತ್ ಗುಡುಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.