ಕಿಮ್ ಕರ್ದಾಶಿಯಾನ್‌ನಂತೆ ಕಾಣಲು 94.5 ಲಕ್ಷ ರುಪಾಯಿ ವ್ಯಯಿಸಿದ ಭೂಪ!
ಇದಕ್ಕೆ ಅಭಿಮಾನದ ಅತಿರೇಕ ಎನ್ನಬೇಕೋ ಗೊತ್ತಿಲ್ಲ. ಜಗತ್ತಿನ ಅತೀ ಸುಂದರಿಗಳಲ್ಲಿ ಒಬ್ಬಳಾದ ಕಿಮ್ ಕರ್ದಾಶಿಯಾನ್‌ನಂತಾಗಲು...

ಮ್ಯಾಂಚೆಸ್ಟರ್: ಇದಕ್ಕೆ ಅಭಿಮಾನದ ಅತಿರೇಕ ಎನ್ನಬೇಕೋ ಗೊತ್ತಿಲ್ಲ. ಜಗತ್ತಿನ ಅತೀ ಸುಂದರಿಗಳಲ್ಲಿ ಒಬ್ಬಳಾದ ಕಿಮ್ ಕರ್ದಾಶಿಯಾನ್‌ನಂತಾಗಲು ಆಕೆಯ ಅಭಿಮಾನಿಯೊಬ್ಬ ವ್ಯಯಿಸಿದ್ದು 94.5 ಲಕ್ಷ ರು.! ಬ್ರಿಟಿಷ್ ಮೇಕಪ್ ಆರ್ಟಿಸ್ಟ್ ಜೋರ್ಡಾನ್ ಜೇಮ್ಸ್ ಪಾರ್ಕ್ ಎಂಬಾತ ಕಿಮ್ ಕರ್ದಾಶಿಯಾನ್ ಮೇಲಿನ ಅಭಿಮಾನದಿಂದ ಕಾಸ್ಮೆಟಿಕ್ ಸರ್ಜರಿ ಮಾಡಿ ಮುಖವನ್ನೇ ಬದಲಾಯಿಸಿಕೊಂಡಿದ್ದಾನೆ. ಈಗಾಗಲೇ 50 ಬಾರಿ ಕಾಸ್ಮೆಟಿಕ್ ಸರ್ಜರಿಗೊಳಗಾಗಿರುವ 23ರ ಹರೆಯದ ಪಾರ್ಕ್, ಇನ್ನಷ್ಟು ಖರ್ಚು ಮಾಡಿ ಕಿಮ್‌ನಂತಾಗಲು ಸಿದ್ಧ ಎಂದು ಹೇಳುತ್ತಿದ್ದಾನೆ.
ಕಿಮ್ ನಂತಾಗಲು ಈತ ಮಾಡಿರುವ ಕಾಸ್ಮೆಟಿಕ್ ಸರ್ಜರಿಗಳ ಬಗ್ಗೆ ಟೀಕೆಯೂ ವ್ಯಕ್ತವಾಗುತ್ತಿದೆ. ಆದರೆ ಜಗತ್ತಿನ ಸುಂದರಿಯಲ್ಲೊಬ್ಬಳಾದ ಕಿಮ್ ನಂತಾಗಲು ತಾನು ಯಾವುದೇ ತ್ಯಾಗ ಮಾಡಲು ಸಿದ್ಧ ಎಂಬುದು ಪಾರ್ಕ್ ದಿಟ್ಟ ನುಡಿ. ಇದೀಗ ತಕ್ಷಣ ನೋಡಿದರೆ ಈಗ ಪಾರ್ಕ್ ಕೂಡಾ ಕಿಮ್‌ನಂತೆ ಕಾಣುತ್ತಿದ್ದಾನೆ. ತ್ವಚೆಯಲ್ಲಿರುವ ನೆರಿಗೆಯನ್ನು ತೆಗೆಯುವ ಬೋಟೋಕ್ಸ್ ಪ್ರೊಸೀಜರ್‌ಗೊಳಗಾಗಿರುವ ಪಾರ್ಕ್ ಶಸ್ತ್ರಕ್ರಿಯೆ ಮೂಲಕ ಆತನ ತುಟಿಗಳನ್ನೂ ಬದಲಾಯಿಸಿಕೊಂಡಿದ್ದಾನೆ.
ಜನರು ನನ್ನನ್ನು ಗೇಲಿ ಮಾಡಿದರೂ ನಾನು ಅದನ್ನು ಕಿವಿಗೆ ಹಾಕುವುದಿಲ್ಲ. ಯಾಕೆಂದರೆ ಒಂದು ಸುಂದರ ರೂಪವನ್ನು ನನ್ನದಾಗಿಸಿಕೊಳ್ಳಲು ನಾನು ಚಿಕ್ಕ ಪ್ರಯತ್ನವನ್ನು ಮಾಡುತ್ತಿದ್ದೇನಷ್ಟೇ ಎಂದು ಪಾರ್ಕ್ ಹೇಳುತ್ತಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


