ಪ್ರಧಾನ ಸುದ್ದಿ

ಭಾರತದ ಮುಸ್ಲಿಮರ ಪೂರ್ವಿಕರು ಹಿಂದೂಗಳು: ತೊಗಾಡಿಯಾ

ಭಾರತದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಪೂರ್ವಿಕರು ಹಿಂದೂಗಳಾಗಿದ್ದರು ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ...

ಭಾರತದ ಮುಸ್ಲಿಮರ ಪೂರ್ವಿಕರು ಹಿಂದೂಗಳು: ತೊಗಾಡಿಯಾ
ಪ್ರವೀಣ್ ತೊಗಾಡಿಯಾ
Published On :

ಅಹಮದಾಬಾದ್: ಭಾರತದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಪೂರ್ವಿಕರು ಹಿಂದೂಗಳಾಗಿದ್ದರು ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ನಾಯಕ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ಭಾರತದಲ್ಲಿನ ಮುಸ್ಲಿಮರ ಪೂರ್ವಿಕರು ಹಿಂದೂಗಳು, ಹಾಗೆಯೇ ಕ್ರಿಶ್ಚಿಯನ್ನರ ಪೂರ್ವಿಕರೂ ಹಿಂದೂಗಳೇ. ಹಿಂದೆ ಮೊಗಲ ಚಕ್ರವರ್ತಿಗಳ ಆಳ್ವಿಕೆಯಿದ್ದಾಗ ಅವರ ದಬ್ಬಾಳಿಕೆಗೆ ಹೆದರಿ ಜನರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬುದಾಗಿ ಚರಿತ್ರೆ ಹೇಳುತ್ತದೆ ಎಂದು ತೊಗಾಡಿಯಾ ಹೇಳಿದ್ದಾರೆ.

ಗುಜರಾತ್‌ನ  ಭಾವ್‌ನಗರ್‌ನಲ್ಲಿ ವಿಹಿಂಪದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಮಾತನಾಡಿದ ತೊಗಾಡಿಯಾ, ಪ್ರಸ್ತುತ ನಮ್ಮ ದೇಶದಲ್ಲಿ ಹಿಂದೂಗಳ ಮೇಲೆ ಯಾರೂ ದಬ್ಬಾಳಿಕೆ ನಡೆಸುತ್ತಿಲ್ಲ. ಹೀಗಿರುವಾಗ ಯಾರಾದರೂ ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಿದ್ದರೆ, ಅವರನ್ನು ಹಿಂದೂಗಳು ಪೂರ್ಣ ಮನಸ್ಸಿನಿಂದ ಸ್ವೀಕರಿಸುತ್ತಾರೆ.

ಡಿಸೆಂಬರ್ 8ರಂದು ಆಗ್ರಾದಲ್ಲಿ ಧರ್ಮ ಜಾಗರಣ್ ಮಂಚ್ ನೂರರಷ್ಟು ಮುಸ್ಲಿಂರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿದ್ದು ವಿವಾದ ಸೃಷ್ಟಿಸಿತ್ತು.

ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕೆಂದು ಸಂಸತ್‌ನಲ್ಲಿ ವಿಪಕ್ಷಗಳು ಒತ್ತಾಯಿಸಿ ಗದ್ದಲವೆಬ್ಬಿಸಿದ್ದವು.

ಆದಾಗ್ಯೂ, ಮತಾಂತರ ಪ್ರಕರಣದಲ್ಲಿ ಪ್ರಥಮ ಆರೋಪಿ ನಂದ್ ಕಿಶೋರ್ ಬಾಲ್ಮೀಕಿ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.