ಪ್ರಧಾನ ಸುದ್ದಿ

ವಿಮಾನ ಅಪಹರಣ ನಿಗ್ರಹ: ರಾಜ್ಯಸಭೆಯಲ್ಲಿ ಹೊಸ ಕಾಯ್ದೆಯ ಚರ್ಚೆ

ಅಪಹರಣಕಾರರಿಗೆ ಗಲ್ಲಿ ಶಿಕ್ಷೆ ನೀಡುವ ಹಾಗೂ ಮಿಸ್ಸೈಲ್ ಆಗಿ ಬಳಕೆಯಾಗುವ ವಿಮಾನಗಳನ್ನು

ವಿಮಾನ ಅಪಹರಣ ನಿಗ್ರಹ: ರಾಜ್ಯಸಭೆಯಲ್ಲಿ ಹೊಸ ಕಾಯ್ದೆಯ ಚರ್ಚೆ
ಕಂಧಹಾರ್ ಅಪಹರಣದ ಒಂದು ಚಿತ್ರ
Published On :

ನವದೆಹಲಿ: ಅಪಹರಣಕಾರರಿಗೆ ಗಲ್ಲಿ ಶಿಕ್ಷೆ ನೀಡುವ ಹಾಗೂ ಮಿಸ್ಸೈಲ್ ಆಗಿ ಬಳಕೆಯಾಗುವ ವಿಮಾನಗಳನ್ನು ಹೊಡೆದುರುಳಿಸುವ ಅಧಿಕಾರವನ್ನು ಭದ್ರತಾ ಪಡೆಗಳಿಗೆ ನೀಡುವ ಹೊಸ ಕಾಯ್ದೆ ಬುಧವಾರ ರಾಜ್ಯಸಭೆಯಲ್ಲಿ ಮಂಡಣೆಯಾಯಿತು.

ವಿರೋಧ ಪಕ್ಷಗಳು ಧಾರ್ಮಿಕ ಮತಾಂತರದ ಬಗ್ಗೆ ಚರ್ಚೆ ನಡೆಸಲು ನಡೆದ ಪ್ರತಿಭಟನೆಯ ನಡುವೆಯೇ ಈ ಕಾಯ್ದೆ ರಾಜ್ಯಸಭೆಯಲ್ಲಿ ಮಂಡನೆಯಾಯಿತು.

ಈ ಹೊಸ ಶಾಸನ ಅಪಹರಣ ನಿಗ್ರಹ ಕಾನೂನಿನಲ್ಲಿ ತಿದ್ದುಪಡಿ ತರಲಿದೆ. ಜಾಗತಿಕ ಒಡಂಬಡಿಕೆಗಳಾದ ಬೀಜಿಂಗ್ ಪ್ರೋಟೋಕಾಲ್ ೨೧೦೧ ಮತ್ತು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಐ ಸಿ ಎ ಒ) ಗಳನ್ನೂ ಇದು ಒಳಗೊಳ್ಳಲಿದೆ.

ಈ ಶಿಷ್ಟಾಚಾರ, ನಾಗರಿಕ ವಿಮಾನವನ್ನು ಸಾಮೂಹಿಕ ವಿನಾಶದ ಆಯುಧವಾಗಿ ಉಗ್ರಗಾಮಿಗಳು ಬಳಸುವುದರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ೧೯೯೯ರಲ್ಲಿ ಕಂದಹಾರ್ ವಿಮಾನ ಅಪಹರಣ ಹಾಗೂ ಅಮೇರಿಕಾದ ೯/೧೧ ದಾಳಿಯ ತರಹದ ಘಟನೆಗಳನ್ನು ಕಠಿಣ ರೀತಿಯಲ್ಲಿ ವ್ಯವಹರಿಸಲು ಭದ್ರತಾ ಪಡೆಗಳಿಗೆ ಅವಕಾಶ ನೀಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.