ಸ್ವಚ್ಛ ಭಾರತ, ಹಸಿರು ಭಾರತ ಕ್ಯಾಲೆಂಡರ್ ಅನಾವರಣಗೊಳಿಸಿದ ಸರ್ಕಾರ
ಕೇಂದ್ರ ಸರ್ಕಾರದ ೨೦೧೫ ರ ನೂತನ ಕ್ಯಾಲೆಂಡರ್ ಗೆ ವಸ್ತು ಸ್ವಚ್ಛ ಭಾರತ, ಹಸಿರು ಭಾರತ.

ನವದೆಹಲಿ: ಕೇಂದ್ರ ಸರ್ಕಾರದ ೨೦೧೫ ರ ನೂತನ ಕ್ಯಾಲೆಂಡರ್ ಗೆ ವಸ್ತು ಸ್ವಚ್ಛ ಭಾರತ, ಹಸಿರು ಭಾರತ. ಮಾಹಿತಿ ಮತ್ತು ವಾರ್ತಾ ಕೇಂದ್ರ ಸಚಿವ ಅರುಣ್ ಜೇಟ್ಲಿ ಬುಧವಾರ ಈ ಕ್ಯಾಲೆಂಡರ್ ಅನಾವರಣಗೊಳಿಸಿದರು. ಹಾಗೆಯೇ ಮೊಬೈಲ್ ನಲ್ಲಿ ಇಳಿಸಿಕೊಳ್ಳಲು ಇದರ ಡಿಜಿಟಲ್ ಆವೃತ್ತಿ ಕೂಡ ಬಿಡುಗಡೆ ಮಾಡಿದರು.
ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಸಣ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಜೇಟ್ಲಿ, ಈ ವರ್ಷದ ಕ್ಯಾಲೆಂಡರ್ ಬಿಡುಗಡೆ ವಿಶೇಷ ಏಕೆಂದರೆ ಇದು ಸರ್ಕಾರದ ಸ್ವಚ್ಛ ಭಾರತ ಮತ್ತು ಡಿಜಿಟಲ್ ಭಾರತ ಯೋಜನೆಗಳೊಂದಿಗೆ ವಿಲೀನಗೊಂಡಿದೆ ಎಂದರು.
ಅಕ್ಟೋಬರ್ ೨ ರಂದು ಪೊರಕೆ ಹಿಡಿದು ಗುಡಿಸಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ಕೊಟ್ಟ ಪ್ರಧಾನಿ ಮೋದಿ ಅವರ ಫೋಟೋ ಕ್ಯಾಲೆಂಡರ್ ನ ಮುಖಚಿತ್ರವಾಗಿದೆ. ಇನ್ನುಳಿದ ಹಾಳೆಗಳಲ್ಲಿ ಸ್ವಚ್ಛ ಭಾರತದ ಅಭಿಯಾನದ ದೃಷ್ಯಚಿತ್ರಗಳಿವೆ.
ಈ ಕ್ಯಾಲೆಂಡರ್ ಮೋದಿ ಸರ್ಕಾರದ ಡಿಜಿಟಲ್ ಭಾರತ ಅಭಿಯಾನಕ್ಕೂ ಪೂರಕವಾಗಿದ್ದು, ಕ್ಯಾಲೆಂಡರ್ ನ್ನು ಕೊಳ್ಳುವ ಅವಶ್ಯಕತೆ ಇಲ್ಲ ಬದಲಾಗಿ ಮೊಬೈಲ್ ಮೂಲಕ ಉಚಿತವಾಗಿ ಇಳಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ ಸಚಿವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


