ಪ್ರಧಾನ ಸುದ್ದಿ

ಪೇಶಾವರ ದಾಳಿ: ಮಕ್ಕಳನ್ನು ಬಂಧಮುಕ್ತಗೊಳಿಸುವಂತೆ ಸತ್ಯಾರ್ಥಿ ಆಗ್ರಹ

ಪೇಶಾವರದ ಶಾಲೆಯಲ್ಲಿ ಒತ್ತೆಯಾಳುಗಳನ್ನಾಗಿರಿಸಿರುವ ಮಕ್ಕಳನ್ನು ಬಂಧಮುಕ್ತಗೊಳಿಸುವಂತೆ 2014 ನೋಬೆಲ್ ಪ್ರಶಸ್ತಿ ...

ಪೇಶಾವರ ದಾಳಿ: ಮಕ್ಕಳನ್ನು ಬಂಧಮುಕ್ತಗೊಳಿಸುವಂತೆ ಸತ್ಯಾರ್ಥಿ ಆಗ್ರಹ
ಕೈಲಾಶ್ ಸತ್ಯಾರ್ಥಿ
Published On :

ದೆಹಲಿ: ಪೇಶಾವರದ ಶಾಲೆಯಲ್ಲಿ ಒತ್ತೆಯಾಳುಗಳನ್ನಾಗಿರಿಸಿರುವ ಮಕ್ಕಳನ್ನು ಬಂಧಮುಕ್ತಗೊಳಿಸುವಂತೆ 2014 ನೋಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ತಾಲೀಬಾನ್ ಆತ್ಮಾಹುತಿ ದಳದವರಲ್ಲಿ ಬಿನ್ನವಿಸಿಕೊಂಡಿದ್ದಾರೆ.

ಉಗ್ರರು  ನನ್ನನ್ನು ಕೊಲ್ಲಲಿ, ಆದರೆ ಆ ಮಕ್ಕಳನ್ನು ಬಿಟ್ಟು ಬಿಡಲಿ ಎಂದು ಸತ್ಯಾರ್ಥಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಉಗ್ರರ ದಾಳಿಯನ್ನು ಖಂಡಿಸಿದ ಸತ್ಯಾರ್ಥಿ, ಈ ಕೃತ್ಯವನ್ನು ಮಾಡಿದವರು ಮನುಕುಲದ, ಅಲ್ಲಾಹುವಿನ ಹಾಗೂ ನಮ್ಮ, ನಿಮ್ಮ ಶತ್ರುಗಳು ಎಂದಿದ್ದಾರೆ.
 
ಮಂಗಳವಾರ ಇಲ್ಲಿನ ಸೇನಾಶಾಲೆಯೊಂದಕ್ಕೆ ದಾಳಿಯಿಟ್ಟ ಉಗ್ರರು ಸುಮಾರು 130 ಮಂದಿಯನ್ನು ಹತ್ಯೆಗೈದಿದ್ದಾರೆ. ಆತ್ಮಾಹುತಿ ದಾಳಿಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಜೀವ ಕಳೆದುಕೊಂಡಿದ್ದು, ಉಗ್ರರ ಈ ಪೈಶಾಚಿಕ ಕೃತ್ಯವನ್ನು ಎಲ್ಲ ರಾಷ್ಟ್ರಗಳು ಖಂಡಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.