ಪ್ರಧಾನ ಸುದ್ದಿ

ಗಾಳಿಮಳೆಗೆ ಹೊಳೆನರಸೀಪುರದಲ್ಲಿ ಭಾರೀ ಹಾನಿ

Published On :

ಕನ್ನಡಪ್ರಭ ವಾರ್ತೆ  ಹೋಳೆನರಸೀಪುರ  ಮೇ 7
ಪಟ್ಟಣದಲ್ಲಿ ಸೋಮವಾರ ರಾತ್ರಿ ದಿಢೀರನೆ ಸುರಿದ ಮಳೆ ಹಾಗೂ ಬೀಸಿದ ಬಲವಾದ ಗಾಳಿಗೆ ಕೆಲವು ಭಾಗಗಳಲ್ಲಿ ಮನೆಗಳ ಸೂರು ಹಾರಿ ಹೋಗಿದ್ದರೆ, ಮಳೆಯ ನಡುವೆ ಸಿಡಿಲಿನ ಅಬ್ಬರಕ್ಕೆ ಸಿಲುಕಿ ಒಂದು ಹಸು ಸ್ಥಳದಲ್ಲೇ ಮೃತಪಟ್ಟು, ವ್ಯಕ್ತಿಯೊಬ್ಬರಿಗೆ ಸಿಡಿಲು ಬಡಿದು ಆಸ್ಪತ್ರೆ ಸೇರಿದ್ದಾರೆ.
ತಾಲೂಕಿನ ಕೃಷ್ಣಾಪುರ ಗ್ರಾಮದ ರಾಮಚಂದ್ರ ಎಂಬವರು ತಮ್ಮ ಹಸುವಿನಲ್ಲಿ ಹಾಲು ಕರೆವಾಗ ಬಡಿದ ಸಿಡಿಲಿಗೆ ಹಸುವು ಸ್ಥಳದಲ್ಲೇ ಮೃತಪಟ್ಟರೆ, ರಾಮಚಂದ್ರ ಅವರು ತೀವ್ರ ಅಸ್ವಸ್ಥರಾಗಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಲ್ಲದೆ ಮಳೆಯ ಜತೆಗೆ ಬೀಸಿದ ಭಾರಿ ಗಾಳಿಗೆ ಸಿಲುಕಿ ಪಟ್ಟಣದ ದಾಸಗೌಡರ ಬೀದಿಯಲ್ಲಿನ ಸಿ.ಮಂಜುನಾಥ್ ಅವರಿಗೆ ಸೇರಿದ ತೆಂಗಿನಮರವು ಮನೆಯ ಮೇಲ್ಭಾಗಕ್ಕೆ ಬಿದ್ದು ಹಾನಿ ಸಂಭವಿಸಿದೆ. ಇಲ್ಲಿನ ವಕ್ಕರಣೆ ಬಾವಿ ಬೀದಿಯಲ್ಲಿನ ರಾಮಕೃಷ್ಣ ಅವರಿಗೆ ಸೇರಿದ ತೆಂಗಿನ ಮರವೂ ಗಾಳಿಗೆ ಸಿಲುಕಿ ನೆಲಕ್ಕುರುಳಿದೆ.
ಪಟ್ಟಣದ ಸಮೀಪವಿರುವ ತಿರುಮಲಪುರ ಗ್ರಾಮದ ಶ್ರೀನಿವಾಸ್ ಎಂಬುವವರ ಮನೆಯ ಹಾಗೂ ಹಾಲಿನ ಡೈರಿಯ ಮೇಲ್ಚಾವಣಿಯ ಶೀಟುಗಳು ಹಾರಿ ಹೋಗಿ ಸುಮಾರು 1.5ಲಕ್ಷ ನಷ್ಟ ಸಂಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.