ಕೈ ಕುಲುಕಿದ ಮತದಾರ
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸುವ ನಿರೀಕ್ಷೆ ಇದ್ದು, ಅಗತ್ಯ ಮ್ಯಾಜಿಕ್ ನಂಬರ್ ತನ್ನದಾಗಿಸಿಕೊಳ್ಳಲಿದೆ. ಸಿ ಫೋರ್ ಮತ್ತು...

ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 5
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸುವ ನಿರೀಕ್ಷೆ ಇದ್ದು, ಅಗತ್ಯ ಮ್ಯಾಜಿಕ್ ನಂಬರ್ ತನ್ನದಾಗಿಸಿಕೊಳ್ಳಲಿದೆ.
ಸಿ ಫೋರ್ ಮತ್ತು ಸುವರ್ಣ ಸುದ್ದಿವಾಹಿನಿ ಜಂಟಿಯಾಗಿ ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 109ರಿಂದ 120 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ. ಬಿಜೆಪಿ 49ರಿಂದ 60 ಸ್ಥಾನಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಜೆಡಿಎಸ್ 34ರಿಂದ 41 ಕ್ಷೇತ್ರದಲ್ಲಿ ಜಯ ಸಾಧಿಸಿದರೆ, ಕೆಜೆಪಿ 5ರಿಂದ 12 ಕ್ಷೇತ್ರದಲ್ಲಿ ಗೆಲವು ಸಾಧಿಸಲಷ್ಟೇ ಶಕ್ತವಾಗಲಿದೆ. ಬಿಎಸ್‌ಆರ್, ಬಿಎಸ್ಪಿ ಸೇರಿದಂತೆ ಇತರೆ ಎಲ್ಲ ಪಕ್ಷಗಳು 10ರಿಂದ 15 ಕ್ಷೇತ್ರಗಳಲ್ಲಿ ಜಯ ಸಾಧಿಸಲಿವೆ.
ಮತ ಗಳಿಕೆ ಪ್ರಮಾಣದಲ್ಲಿ ಕಾಂಗ್ರೆಸ್ ಶೇ.37ರಷ್ಟು ಮತಗಳನ್ನು ಪಡೆದರೆ, ಬಿಜೆಪಿ ಶೇ.27, ಜೆಡಿಎಸ್, ಶೇ.21, ಕೆಜೆಪಿ ಶೇ.7 ಹಾಗೂ ಬಿಎಸ್‌ಆರ್-ಇತರೆ ಪಕ್ಷಗಳು ಶೇ.8ರಷ್ಟು ಮತಗಳಿಸಲಿವೆ. ಮುಂಬೈ-ಕರ್ನಾಟಕ ಭಾಗದ ಒಟ್ಟು 40 ಸ್ಥಾನಗಳಲ್ಲಿ ಕಾಂಗ್ರೆಸ್ 19ರಿಂದ 21 ಕ್ಷೇತ್ರದಲ್ಲಿ ಜಯಗಳಿಸಲಿದ್ದು, ಬಿಜೆಪಿ 13ರಿಂದ 15 ಕ್ಷೇತ್ರದಲ್ಲಿ ಗೆಲವು ಕಾಣಲಿದೆ. ಜೆಡಿಎಸ್ 1ರಿಂದ 2, ಕೆಜೆಪಿ 3ರಿಂದ 5, ಇತರರು ಒಂದರಿಂದ ಎರಡು ಸ್ಥಾನ ಗಳಿಸುವ ನಿರೀಕ್ಷೆ ಇದೆ.
ಕೇಂದ್ರ ಕರ್ನಾಟಕದ 30 ಕ್ಷೇತ್ರಗಳಲ್ಲಿ ಕಾಂಗ್ರೆಸ್ 15ರಿಂದ 17 ಕ್ಷೇತ್ರದಲ್ಲಿ ಜಯ ಸಾಧಿಸಿದರೆ, ಬಿಜೆಪಿ 8ರಿಂದ 10 ಕ್ಷೇತ್ರ ತನ್ನದಾಗಿಸಿಕೊಳ್ಳಲಿದೆ. ಜೆಡಿಎಸ್‌ಗಿಂತ ಕೆಜೆಪಿ ಅತಿ ಹೆಚ್ಚು ಸ್ಥಾನಗಳಿಸುವ ಸಾಧ್ಯತೆ ಇದೆ. ಇತರರು ಒಂದೆರಡು ಕ್ಷೇತ್ರಗಳಿಗೆ ಮಾತ್ರ ತೃಪ್ತಿಪಟ್ಟುಕೊಳ್ಳಲಿದ್ದಾರೆ.
ರಾಜ್ಯದಲ್ಲಿ ಹಳೆ ಮೈಸೂರು ಭಾಗದ 70 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೇ ಸಿಂಹಪಾಲು. ಜೆಡಿಎಸ್‌ಗಿಂತ ಕಾಂಗ್ರೆಸ್ ಮುಂದಾಗಲಿದ್ದು 30ರಿಂದ 32 ಸ್ಥಾನ ಗಳಿಸಲಿದೆ. ಜೆಡಿಎಸ್ 28ರಿಂದ 30 ಕ್ಷೇತ್ರದಲ್ಲಿ ಜಯ ಸಾಧಿಸಲಿದೆ. ಬಿಜೆಪಿ 7ರಿಂದ 9 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಕೆಜೆಪಿ ಹಾಗೂ ಇತರರು ತಲಾ ಒಂದೆರಡು ಕ್ಷೇತ್ರದಲ್ಲಿ ಮಾತ್ರ ಜಯ ನಿರೀಕ್ಷಿಸಲಾಗಿದೆ.
ಹೈದರಾಬಾದ್ ಕರ್ನಾಟಕದಲ್ಲಿನ 35 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೇ ಸಿಂಹಪಾಲು. 20ರಿಂದ 22 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಬಿಜೆಪಿ 5ರಿಂದ 7 ಕ್ಷೇತ್ರದಲ್ಲಿ ಜಯ ಸಾಧಿಸಲಿದ್ದರೆ, ಕೆಜೆಪಿಗೆ ಒಂದು ಸ್ಥಾನ ಗಳಿಸುವುದು ಕಷ್ಟವಾಗಲಿದೆ. ಜೆಡಿಎಸ್ 2ರಿಂದ 3 ಕ್ಷೇತ್ರ ಗಳಿಸಲಿದೆ. ಇತರೆ ಪಕ್ಷಗಳು ಒಂದರಿಂದ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದಾಗಿದೆ.
ಕರಾವಳಿ ಕರ್ನಾಟಕದ ಒಟ್ಟು 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ 11ರಿಂದ 12 ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳಲಿದೆ. ಬಿಜೆಪಿ 7ರಿಂದ 8 ಕ್ಷೇತ್ರದಲ್ಲಿ ಜಯ ಸಾಧಿಸಲಿದೆ. ಜೆಡಿಎಸ್‌ಗೆ ಒಂದು ಕ್ಷೇತ್ರದಲ್ಲಿ ಗೆಲುವು ಸಾಧ್ಯವಾಗಬಹುದು. ಕೆಜೆಪಿ 1-2 ಸ್ಥಾನದಲ್ಲಿ ಜಯ ಸಾಧಿಸುವ ಸಂಭವವಿದೆ.
ಕಾಂಗ್ರೆಸ್ ಬೆಂಗಳೂರಿನಲ್ಲೂ ತನ್ನ ಪ್ರಾಬಲ್ಯ ಮೆರೆಯುವ ಲಕ್ಷಣಗಳಿವೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ 14ರಿಂದ 16 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಬಿಜೆಪಿ 9ರಿಂದ 11 ಕ್ಷೇತ್ರದಲ್ಲಿ ಜಯ ಸಾಧಿಸಲಿದೆ. ಜೆಡಿಎಸ್ ಮತ್ತೆ ಒಂದು ಅಥವಾ ಇನ್ನೊಂದು ಕ್ಷೇತ್ರದಲ್ಲಿ ಜಯ ಸಾಧಿಸಲಿದ್ದರೆ, ಕೆಜೆಪಿ ಒಂದು ಸ್ಥಾನ ಜಯ ಸಾಧಿಸುವ ಸಂಭವವಿದೆ.
ಇತರ ಸಮೀಕ್ಷೆಗಳು
ಸಿಎನ್‌ಎನ್-ಐಬಿಎನ್ ಟೈಮ್ಸ್ ನೌ ಸುದ್ದಿವಾಹಿನಿ ನ್ಯೂಸ್ 24 ಚಾಣಕ್ಯ ಆಜ್‌ತಕ್, ಎಬಿಪಿ ಸಿ ವೋಟರ್
ಶೇಕಡಾವಾರು
ಕಾಂಗ್ರೆಸ್ 100-116 114 132 110-118
ಬಿಜೆಪಿ 43-53 55 38 51-59
ಜೆಡಿಎಸ್ 43-53 34 38 31-37
ಇತರರು 16-24 20 15 09-13
ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆ ಎದ್ದಿದೆ. ಚುನಾವಣಾಪೂರ್ವ ಸಮೀಕ್ಷೆಗಳಂತೆಯೇ, ಮತಗಟ್ಟೆ ಸಮೀಕ್ಷೆಯಲ್ಲೂ ಮತದಾರ ಕಾಂಗ್ರೆಸ್‌ಗೇ ಒಲವು ತೋರಿದ್ದಾನೆ. ಸುವರ್ಣನ್ಯೂಸ್ ಮತ್ತು ಸಿ ಫೋರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಸರಳ ಬಹುಮತದಿಂದ ಅಧಿಕಾರದ ಗದ್ದುಗೆಗೇರುವ ಸಾಧ್ಯತೆ ಇದೆ.
ಕಾಂಗ್ರೆಸ್ 37
ಬಿಜೆಪಿ 27
ಜೆಡಿಎಸ್ 21
ಕೆಜೆಪಿ 7
ಇತರರು 8
ಪ್ರಾದೇಶಿಕವಾರು ಸಂಭಾವ್ಯ ಸ್ಥಾನಗಳು
ಬೆಂಗಳೂರು
ಕಾಂಗ್ರೆಸ್ 36 14-16
ಬಿಜೆಪಿ 27 9-11
ಜೆಡಿಎಸ್ 21 1-2
ಕೆಜೆಪಿ 5 0-1
ಇತರರು 4 0-0
ಮುಂಬೈ ಕರ್ನಾಟಕ ಸಂಭಾವ್ಯ ಸ್ಥಾನಗಳು
ಕಾಂಗ್ರೆಸ್ 37 19-21
ಬಿಜೆಪಿ 35 13-15
ಜೆಡಿಎಸ್ 7 1-2
ಕೆಜೆಪಿ 11 3-5
ಇತರರು 10 1-2
ಮಧ್ಯ ಕರ್ನಾಟಕ ಸಂಭಾವ್ಯ ಸ್ಥಾನಗಳು
ಕಾಂಗ್ರೆಸ್ 35 15-17
ಬಿಜೆಪಿ 23 8-10
ಜೆಡಿಎಸ್ 19 1-2
ಕೆಜೆಪಿ 14 2-3
ಇತರರು 9 1-2
ಹಳೇ ಮೈಸೂರು ಸಂಭಾವ್ಯ ಸ್ಥಾನಗಳು
ಕಾಂಗ್ರೆಸ್ 41 30-32
ಬಿಜೆಪಿ 9 7-9
ಜೆಡಿಎಸ್ 39 28-30
ಕೆಜೆಪಿ 4 0-1
ಇತರರು 7 1-2
ಹೈದ್ರಾಬಾದ್ ಕರ್ನಾಟಕ ಸಂಭಾವ್ಯ ಸ್ಥಾನಗಳು
ಕಾಂಗ್ರೆಸ್ 38 20-22
ಬಿಜೆಪಿ 27 5-7
ಜೆಡಿಎಸ್ 18 2-3
ಕೆಜೆಪಿ 4 0-1
ಇತರರು 11 6-7
ಕರಾವಳಿ ಕರ್ನಾಟಕ ಸಂಭಾವ್ಯ ಸ್ಥಾನಗಳು
ಕಾಂಗ್ರೆಸ್ 35 11-12
ಬಿಜೆಪಿ 34 7-8
ಜೆಡಿಎಸ್ 17 1-2
ಕೆಜೆಪಿ 6 0-1
ಇತರರು 8 1-2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


