ಪ್ರಧಾನ ಸುದ್ದಿ

ಬಾಹ್ಯಾಕಾಶಕ್ಕೂ ಶಾರ್ಟ್‌ಕಟ್

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲು ಶಾರ್ಟ್‌ಕಟ್ ಉಂಟಾ?

ಬಾಹ್ಯಾಕಾಶಕ್ಕೂ ಶಾರ್ಟ್‌ಕಟ್
Published On :

ಮಾಸ್ಕೋ/ಕೇಪ್ ಕೆನವೆರಲ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲು ಶಾರ್ಟ್‌ಕಟ್ ಉಂಟಾ?
ಸ್ವಲ್ಪ ರಿಸ್ಕ್ ತೆಗೆದುಕೊಂಡ್ರೆ ಬಾಹ್ಯಾಕಾಶ ಕೇಂದ್ರ ತಲುಪಲು ಎಕ್ಸ್‌ಪ್ರೆಸ್ ಮಾರ್ಗಗಳೂ ಇವೆ ಎಂದು ರಷ್ಯಾ ಸಾಧಿಸಿ ತೋರಿಸಿದೆ. ಇದೇ ಮೊದಲ ಬಾರಿಗೆ ರಷ್ಯಾ ಶಾರ್ಟ್‌ಕಟ್ ಮೂಲಕ ಗಗನಯಾತ್ರಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಾಹ್ಯಾಕಾಶ ಕೇಂದ್ರ ತಲುಪಲು ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ 45 ಗಂಟೆಗಳಷ್ಟು ಉಳಿತಾಯ ಮಾಡಬಹುದು ಎಂದು ತೋರಿಸಿಕೊಟ್ಟಿದೆ.
ಕಜಕಿಸ್ತಾನದ ಬೈಕೊನೂರ್‌ನ ಉಡ್ಡಯನ ಕೇಂದ್ರದಿಂದ ಮೂವರು ಗಗನಯಾತ್ರಿಗಳನ್ನು ಹೊತ್ತೊಯ್ದ ಸೊಯೆಜ್ ಗಗನನೌಕೆ ಕೇವಲ 6 ಗಂಟೆಗೂ ಕಡಿಮೆ ಅವಧಿಯಲ್ಲಿ ಬಾಹ್ಯಾಕಾಶ ಕೇಂದ್ರವನ್ನು ತಲುಪಿದೆ.
ಮೂರು ವರ್ಷದ ಹಿಂದೆ: ರಷ್ಯಾವು ಮೂರು ವರ್ಷದ ಹಿಂದೆಯೇ ಬಾಹ್ಯಾಕಾಶ ಕೇಂದ್ರವನ್ನು ತಲುಪಲು ಹೊಸ ಮಾರ್ಗಗಳ ಹುಡುಕಾಟ ಆರಂಭಿಸಿತ್ತು. ಆರಂಭದಲ್ಲಿ ಇಂಥದ್ದೊಂದು ಪ್ರಸ್ತಾಪ ಮುಂದಿಟ್ಟಾಗ ಇದರ ಸಾಧ್ಯಾಸಾಧ್ಯತೆ ಕುರಿತು ಸಂಶಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಲಿಸ್ಟಿಕ್ ಸ್ಪೆಷಲಿಸ್ಟ್‌ಗಳು ಹೊಸ ದಾರಿಯ ಕುರಿತು ಲೆಕ್ಕಾಚಾರ ಹಾಕಿದರು.
ರಾಕೆಟ್ ಮತ್ತು ಸೊಯೆಜ್ ಗಗನನೌಕೆಯ ಸಾಮರ್ಥ್ಯವನ್ನು ಪರಿಶೀಲಿಸಿದರು. ಆ ಬಳಿಕವಷ್ಟೇ ಈ ಎಕ್ಸ್‌ಪ್ರೆಸ್ ದಾರಿಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.