ಇನ್ನೊಬ್ಬ ಶ್ರೀ ನಿವೃತ್ತಿ
ಕನ್ನಡಪ್ರಭ ವಾರ್ತೆ ಬೆಳಗಾವಿ ಮಾ.29
ನಿರಂತರ 25 ವರ್ಷಗಳ ಕಾಲ ಭಕ್ತರ ಸೇವೆ ಮಾಡಿದ್ದೇನೆ. ಈಗ ಸ್ವಂುಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು, ಮಠದ ಸದ್ಭಕ್ತ್ತರಾದ ತಾವು ಇದನ್ನು ಮನ್ನಿಸಿ ನೂತನ ಸ್ವಾಮೀಜಿಗೆ ಮಠದ ಚುಕ್ಕಾಣಿ ನೀಡಬೇಕು ಎಂದು ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಸ್ವಂುಂ ನಿವೃತ್ತಿ ಘೋಷಣೆ ಮಾಡಿ ಶುಕ್ರವಾರ ಭಕ್ತ ವೃಂದದಲ್ಲಿ ಆಶ್ಚಂರ್ು, ಆತಂಕವನ್ನುಂಟು ಮಾಡಿದರು.
ಶಿವಬಸವ ನಗರದ ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿಗಳಾಗಿ 25 ವಸಂತಗಳು ತುಂಬಿದ ಹಿನ್ನೆಲೆಂುಲ್ಲಿ ಭಕ್ತ ವೃಂದದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಗುರು-ವಂದನೆ ಕಾಂರ್ುಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
25 ವರ್ಷಗಳ ಹಿಂದೆ ಹೊಸಪೇಟೆಂು ಸಂಗನಬಸವ ಸ್ವಾಮೀಜಿ, ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಇಬ್ಬರು ಸೇರಿ ನನ್ನನ್ನು ನಾಗನೂರು ರುದ್ರಾಕ್ಷಿಮಠದ ಶಿವಬಸವ ಸ್ವಾಮೀಜಿಗಳ ಉಡಿಂುಲ್ಲಿ ಹಾಕಿದ್ದರು. ಮಾತೃ-ಹೃದಯಿಂಾಗಿದ್ದ ಡಾ.ಶಿವಬಸವ ಸ್ವಾಮೀಜಿ ಅವರ ಪ್ರೀತಿ, ಪ್ರೇಮ, ಅಂತಃಕರಣ ಫಲವಾಗಿ ನಾವು ಸಂತರಾಗಿ ಹೊರಹೊಮ್ಮಿದೆವು. ನಾವು ನಿಮಿತ್ತ ಮಾತ್ರ. ಎಲ್ಲವನ್ನೂ ಹಿಂದಿನ ಡಾ. ಶಿವಬಸವ ಸ್ವಾಮೀಜಿ, ಪ್ರಭು ಸ್ವಾಮಿ ಅವರೇ ಮಾಡಿದ್ದಾರೆ. ಶಾಲಾ-ಕಾಲೇಜುಗಳನ್ನು ಅವರೇ ತೆರೆದಿದ್ದರು. ತಾವು ಅವುಗಳನ್ನು ಸಮರ್ಥವಾಗಿ ಮೇಲ್ವಿಚಾರಣೆ ಮಾಡಿದ್ದೇವೆ ಅಷ್ಟೇ ಎಂದರು. ಇಡೀ ಭಕ್ತ ಸಮುದಾಂು ಕಳೆದ 25 ವರ್ಷಗಳಿಂದ ತೋರಿಸಿದ ಪ್ರೀತಿ, ವಾತ್ಸಲ್ಯ, ಔದಾಂರ್ುಗಳಿಗೆ ಚಿರಋುಣಿಂಾಗಿದ್ದೇನೆ. ತಾವು ಮಠಕ್ಕೆ ನೀಡಿದ್ದು ಸೇಮೆಂುಲ್ಲ, ಅದು ನನ್ನ ಕರ್ತವ್ಯ ಎಂದು ಭಾವಿಸಿರುವುದಾಗಿ ಭಾವುಕರಾದರು. ತಾವು ತೋರಿಸಿದ ಅಂತಃಕರಣ, ಮಮತೆಗೆ ಮಾತುಗಳೇ ಹೊರಡುತ್ತಿಲ್ಲ ಎಂದು ಗದ್ಗದಿತರಾದರು.
ಸಾನಿಧ್ಯ ವಹಿಸಿದ್ದ ಗದುಗಿನ ತೋಂಟದಾಂರ್ು ಸ್ವಾಮೀಜಿ, 'ಲಿಂಗಾಂುತ ಮಠದ ಂುತಿಗಳು, ಸ್ವಾಮೀಜಿಗಳಿಗೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಹಾಗೂ ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಮಾದರಿಂಾಬೇಕು' ಎಂದರು. ಕ್ರೈಸ್ತ ಪಾದ್ರಿಗಳಂತೆ ಲಿಂಗಾಂುತ ಸ್ವಾಮೀಜಿಗಳು ಂಾವುದೇ ಆಸೆ-ಆಮಿಷಗಳಿಗೆ ಬಲಿಂಾಗದೇ ವಚನ-ಸಾಹಿತ್ಯದ ಪ್ರಚಾರ ಮಾಡಬೇಕು ಎಂದೂ ತಿಳಿಸಿದರು.
ಂಾವುದಕ್ಕೂ ಅಂಟಿಕೊಳ್ಳದೇ, ಅಂಜದೇ-ಅಳುಕದೇ 25 ವರ್ಷಗಳ ಕಾಲ ಸಂತೋಷದಿಂದ ಸೇವೆ ಸಲ್ಲಿಸಿ, 55 ವಸಂತಗಳನ್ನು ಕಳೆದಿರುವ ಸಿದ್ಧರಾಮ ಸ್ವಾಮೀಜಿ 105 ವರ್ಷಗಳ ಕಾಲ ಬಾಳಲಿ ಎಂದು ಬಿಜಾಪುರದ ಜ್ಞಾನಯೋಗಾಶ್ರವುದ ಶ್ರೀ ಸಿದ್ಧೇಶ್ವರಶ್ರೀಗಳು ಹಾರೈಸಿದರು.
ಕಾಂರ್ುಕ್ರಮದಲ್ಲಿ ಸಿದ್ಧರಾಮ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ವೇದಿಕೆ ಮೇಲೆ ಕಾರಂಜಿಮಠದ ಗುರುಸಿದ್ಧಸ್ವಾಮೀಜಿ, ಜೆಎನ್‌ಎಂಸಿ ನಿವೃತ್ತ ಪ್ರಾಚಾಂರ್ು ಡಾ.ಎಚ್.ಬಿ.ರಾಜಶೇಖರ ಇದ್ದರು. ಇದೇ ಸಂದರ್ಭದಲ್ಲಿ ಸಿದ್ಧರಾಮ ಸ್ವಾಮೀಜಿ 25 ವರ್ಷಗಳ ಕಾಲ ಶ್ರೀಮಠಕ್ಕೆ ಸಲ್ಲಿಸಿದ ಸೇವೆಗಳ ನೆನಪಿನ ಬುತ್ತಿಯುಳ್ಳ ಡಾ. ಸರಜೂ ಕಾಟ್ಕರ್ ಹಾಗೂ ಡಾ.ರಾಮಕೃಷ್ಣ ಮರಾಠೆ ಸಂಪಾದಿಸಿದ ಬೆಳಗಾವಿ-ಬೆಳಗು ಅಭಿನಂದನೆ ಗ್ರಂಥವನ್ನು ಭಕ್ತರ ವತಿಯಿಂದ ಅರ್ಪಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

