ಮಲಾಲ ಕಥೆ
ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಧ್ವನಿ ಎತ್ತಿದ್ದ ತಪ್ಪಿಗೆ ತಾಲಿಬಾನ್ ಉಗ್ರರಿಂದ ಗುಂಡಿನ ದಾಳಿಗೊಳಗಾಗಿದ್ದ 15 ವರ್ಷದ ಪಾಕಿಸ್ತಾನದ ಶಾಲಾ ಬಾಲಕಿ ಮಲಾಲ ಯೂಸಫ್ಝಾಯ್ ಆತ್ಮಚರಿತ್ರೆ ಈಗ...

ಲಂಡನ್: ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಧ್ವನಿ ಎತ್ತಿದ್ದ ತಪ್ಪಿಗೆ ತಾಲಿಬಾನ್ ಉಗ್ರರಿಂದ ಗುಂಡಿನ ದಾಳಿಗೊಳಗಾಗಿದ್ದ 15 ವರ್ಷದ ಪಾಕಿಸ್ತಾನದ ಶಾಲಾ ಬಾಲಕಿ ಮಲಾಲ ಯೂಸಫ್ಝಾಯ್ ಆತ್ಮಚರಿತ್ರೆ ಈಗ ಪುಸ್ತಕ ರೂಪದಲ್ಲಿ ಹೊರಬರಲಿದೆ.
ಹೌದು. ಬ್ರಿಟನ್ ಮೂಲದ ಪ್ರಕಾಶನ ಸಂಸ್ಥೆಯೊಂದು ಮಲಾಲ ಜೀವನ ಕಥೆಯನ್ನು ಪುಸ್ತಕ ರೂಪದಲ್ಲಿ ತರಲು ನಿರ್ಧರಿಸಿದೆ. ಇದಕ್ಕಾಗಿ ಸಂಸ್ಥೆಯು ಆಕೆಗೆ 16.30 ಕೋಟಿ ನೀಡಲು ನಿರ್ಧರಿಸಿದೆ. ವರ್ಷಾಂತ್ಯದೊಳಗೆ ಪಾಕ್ನ ಈ ದಿಟ್ಟ ಬಾಲಕಿ ಆತ್ಮಚರಿತ್ರೆ 'ಐ ಆ್ಯಮ್ ಮಲಾಲಾ(ನಾನು ಮಲಾಲ)' ಹೆಸರಿನಲ್ಲಿ ಬಿಡುಗಡೆಯಾಗಲಿದೆ.
ಈ ಪುಸ್ತಕವನ್ನು ವೀಡೆನ್ಫೆಲ್ಡ್ ಮತ್ತು ನಿಕೊಲ್ಸನ್ ಇಂಗ್ಲೆಂಡ್ ಮತ್ತು ಕಾಮನ್ವೆಲ್ತ್ನಲ್ಲಿ ಹಾಗೂ ಲಿಟ್ಲ್ ಮತ್ತು ಬ್ರೌಟ್ ಜಗತ್ತಿನ ಉಳಿದೆಡೆ ಪ್ರಕಟ ಮಾಡಲಿದೆ.
'ನಾನು ನನ್ನ ಕಥೆ ಹೇಳ ಬಯಸುತ್ತೇನೆ. ಆದರೆ, ಈ ಕಥೆ ಶಿಕ್ಷಣ ವಂಚಿತ ವಿಶ್ವದ ಇತರೆ 6.1 ಕೋಟಿ ಮಕ್ಕಳ ಕಥೆಯೂ ಆಗಿರಲಿದೆ' ಎಂದು ಮಲಾಲ ಹೇಳಿದ್ದಾಳೆ.
'ಈ ಪುಸ್ತಕ ವಿಶ್ವದ ಎಲ್ಲಾ ಮೂಲೆಗಳಿಗೂ ತಲುಪುವಂತಾಗಬೇಕು. ಕೆಲವು ಮಕ್ಕಳಿಗೆ ಶಿಕ್ಷಣ ಪಡೆಯುವುದು ಎಷ್ಟು ಕಷ್ಟ ಎನ್ನುವುದು ಎಲ್ಲ ರಿಗೂ ಅರಿವಾಗಬೇಕು' ಎಂಬುದು ಆಕೆಯ ಅಭಿಪ್ರಾಯ.
ವೀಡೆನ್ಫೆಲ್ಡ್ ಮತ್ತು ನಿಕೊಲ್ಸನ್ ಸಂಸ್ಥೆಯ ಡೆಪ್ಯುಟಿ ಪಬ್ಲಿಷಿಂಗ್ ಡೈರೆಕ್ಟರ್ ಅರ್ಜು ತಹಸಿನ್ ಪ್ರಕಾರ, ಮಲಾಲ ಆತ್ಮಚರಿತ್ರೆ ಎಲ್ಲಾ ವಯೋವಾನದವರಿಗೂ ಸ್ಫೂರ್ತಿ ನೀಡಲಿದೆ.
ಮಲಾಲ ಆತ್ಮಚರಿತ್ರೆ ಧೈರ್ಯ, ಸಾಹಸ ಮತ್ತು ಗುರಿಗೆ ಒಂದು ದಾಖಲೆಯಾಗಲಿದೆ. ಮಲಾಲ ಸಣ್ಣ ವಯಸ್ಸಿನಲ್ಲೇ ಸಾಕಷ್ಟು ನೋವುಂಡಿದ್ದಾಳೆ. ಅವಳ ಈ ಆತ್ಮಚರಿತ್ರೆ ಶಿಕ್ಷಣದ ಹಕ್ಕಿನಲ್ಲಿ ನಂಬಿಕೆ ಇಟ್ಟಿರುವ ಎಲ್ಲಾ ವಯೋವಾನದ ಜನರ ಪಾಲಿಗೆ ಸ್ಫೂರ್ತಿಯ ಚಿಲುಮೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅ.9, 2012ರಂದು ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರನೊಬ್ಬ ಮಲಾಲ ತಲೆಗೆ ಗುಂಡು ಹಾರಿಸಿದ್ದ. ಈ ವೇಳೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಲಾಲಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಲೆಗೆ ಹೊಕ್ಕಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದರು. ಬಳಿಕ ಮಲಾಲಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ನ ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಳಿಕ ಸಂಪೂರ್ಣ ಚೇತರಿಸಿಕೊಂಡಿರುವ ಮಲಾಲ ಈಗ ಇಂಗ್ಲೆಂಡ್ನಲ್ಲಿ ಶಿಕ್ಷಣ ಮುಂದುವರಿಸಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


