ಪ್ರಧಾನ ಸುದ್ದಿ

ಗಾಯದ ಮೇಲೆ ಬರೆ

ಗೌರಿಕುಂಡ್‌ನಲ್ಲಿ ಪ್ರವಾಹ ಸಂತ್ರಸ್ತರನ್ನು ಹೊತ್ತು ಬರುತ್ತಿದ್ದ ರಕ್ಷಣಾ ಪಡೆಯ ಹೆಲಿಕಾಪ್ಟರ್ ಎಂಐ17 ವಿ5 ಪತನವಾದ ಪರಿಣಾಮ...

ಗಾಯದ ಮೇಲೆ ಬರೆ
Published On :

ನವದೆಹಲಿ: ಗಾಯದ ಮೇಲೆ ಬರೆ ಎಳೆದಂತಾಗಿದೆ ಪ್ರವಾಹ ಸಂತ್ರಸ್ತರ ಮತ್ತು ರಕ್ಷಣಾ ಕಾರ್ಯಕರ್ತರ ಸ್ಥಿತಿ...!
ಗೌರಿಕುಂಡ್‌ನಲ್ಲಿ ಪ್ರವಾಹ ಸಂತ್ರಸ್ತರನ್ನು ಹೊತ್ತು ಬರುತ್ತಿದ್ದ ರಕ್ಷಣಾ ಪಡೆಯ ಹೆಲಿಕಾಪ್ಟರ್ ಎಂಐ17 ವಿ5 ಪತನವಾದ ಪರಿಣಾಮ 19 ಮಂದಿ ಸಾವನ್ನಪ್ಪಿದ್ದಾರೆ.
ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದು, ಸದ್ಯ 8 ಮೃತದೇಹಗಳು ಸಿಕ್ಕಿವೆ ಎಂದು ರಕ್ಷಣಾ ಪಡೆಯ ಮೂಲಗಳು ಹೇಳಿವೆ. ಈ ಕಾಪ್ಟರ್ ಬೆಳಗಿನಿಂದ ಎರಡು ಬಾರಿ ಕೇದಾರನಾಥದಿಂದ ಸಂತ್ರಸ್ತರನ್ನು ಕರೆತಂದಿತ್ತು. ಮೂರನೇ ಬಾರಿಗೆ ಬರುವಾಗ ಪತನವಾಗಿ, ಇದರಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಐಎಎಫ್ ಹೇಳಿದೆ.
ಮಧ್ಯಾಹ್ನ 12.30ರ ವೇಳೆಗೆ ಹೆಲಿಕಾಪ್ಟರ್ ಕೇದಾರನಾಧ ಬಿಟ್ಟಿದೆ. ಸ್ಥಳದಿಂದ ಹಾರಿದ 5 ರಿಂದ 7 ನಿಮಿಷಗಳಲ್ಲಿ ಪತನವಾಗಿದೆ .
ಕಾಪ್ಟರ್‌ನಲ್ಲಿ ಎನ್‌ಡಿಆರ್‌ಎಫ್, ಐಟಿಬಿಪಿ ಮತ್ತು ಐಎಎಫ್ ಸಿಬ್ಬಂದಿ ಇದ್ದರು . ಹೆಲಿಕಾಪ್ಟರ್ ಪತನಕ್ಕೆ ಕೆಟ್ಟ ಹವಾಮಾನ, ಮಂಜು ಮುಸುಕಿದ್ದೇ ಕಾರಣ ಎಂದು ಐಎಎಫ್ ಹೇಳಿದೆ. ಇದು ಪಶ್ಚಿಮ ಬಂಗಾಳದ ಬಾರಕ್‌ಪುರ ವಾಯು ಪಡೆಗೆ ಸೇರಿದ ಹೆಲಿಕಾಪ್ಟರ್ ಎಂದು ತಿಳಿಸಿದೆ.
ಕೇದಾರನಾಥದಿಂದ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಘಟನೆ ಸಂಬಂಧ ತನಿಖೆ ನಡೆಯಲಿದೆ.  ಕಾರ್ಯಾಚರಣೆಯನ್ನೂ ಮುಂದುವರಿಸುವುದಾಗಿ ಸೇನೆ ಹೇಳಿದೆ. ಕಳೆದ ವರ್ಷವಷ್ಟೇ ರಷ್ಯಾದಿಂದ ಈ ಹೆಲಿಕಾಪ್ಟರ್‌ಗಳನ್ನು ತರಿಸಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.