ಕನ್ನಡಿಗರ ರಕ್ಷಣೆ ಆರಂಭ
ಯಾತ್ರೆಗೆ ತೆರಳಿ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕರ್ನಾಟಕ ಜನರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ...
ನವದೆಹಲಿ: ಯಾತ್ರೆಗೆ ತೆರಳಿ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕರ್ನಾಟಕ ಜನರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ಆರಂಭವಾಗಿದ್ದು, ಮೊದಲ ತಂಡ ಶುಕ್ರವಾರ ಬೆಳಗಿನ ಜಾವ ನವದೆಹಲಿಗೆ ಆಗಮಿಸುವ ನಿರೀಕ್ಷೆ ಇದೆ. ಆದರೆ, ಮಾಹಿತಿ ಲಭ್ಯವಾಗದ, ಸಂಪರ್ಕಕ್ಕೆ ಸಿಗದ ಸಾಕಷ್ಟು ಕನ್ನಡಿಗರು ಇನ್ನೂ ಪ್ರವಾಹ ಪೀಡಿತ ಪ್ರದೇಶದಲ್ಲೇ ಸಿಲುಕಿದ್ದಾರೆ. ಇದುವರೆಗೆ ಸುಮಾರು 200 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ತಡರಾತ್ರಿ ಅಥವಾ ಬೆಳಗಿನ ಜಾವ ನವದೆಹಲಿಗೆ ವಿಶೇಷ ವಿಮಾನದ ಮೂಲಕ ಕರೆತರಲಾಗುತ್ತದೆ. ಯಾತ್ರಾರ್ಥಿಗಳಿಗೆಲ್ಲ ಕರ್ನಾಟಕ ಭವನದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕರ್ನಾಟಕದಿಂದ ಡೆಹ್ರಾಡೂನ್ಗೆ ತೆರಳಿದ್ದ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ಸಿಂಗ್, ಆಂತರಿಕ ಭದ್ರತಾ ವಿಭಾಗದ ಡಿಐಜಿ ಹೇಮಂತ್ ನಿಂಬಾಳ್ಕರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಕರಿಗೌಡ ಅವರನ್ನೊಳಗೊಂಡ ತಂಡ ರಾಜ್ಯದ ಯಾತ್ರಾರ್ಥಿಗಳನ್ನು ಸಂಪರ್ಕಿಸಿ, ಸುರಕ್ಷಿತ ಪ್ರದೇಶಕ್ಕೆ ತಲುಪಿಸಿದೆ. ಮತ್ತಷ್ಟು ಜನರಿಗಾಗಿ ಶೋಧ ಮುಂದುವರೆದಿದೆ. ಕಾರ್ಯಾಚರಣೆಯ ನೇತೃತ್ವ ವಹಿಸಿರುವ ನವೀನ್ ರಾಜ್ಸಿಂಗ್ ಅವರ ಪ್ರಕಾರ, ಡೆಹ್ರಾಡೂನ್ನಲ್ಲಿ ರಾಜ್ಯ ಸರ್ಕಾರ ತೆರೆದಿರುವ ಸಹಾಯವಾಣಿಗೆ ಇದುವರೆಗೆ 300ಕ್ಕೂ ಹೆಚ್ಚು ಕರೆಗಳು ಬಂದಿವೆ. ಮತ್ತಷ್ಟು ಕರೆಗಳು ಬರುತ್ತಲೇ ಇವೆ.
ಹಿಂದಿರುಗಲು ರೈಲು ವ್ಯವಸ್ಥೆ
ಯಾತ್ರಾರ್ಥಿಗಳು ಹಿಂದಿರುಗಲು ತಕ್ಷಣವೇ ರೈಲು ಟಿಕೆಟ್ ಒದಗಿಸುವಂತೆ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ. ಹೀಗಾಗಿ ದೆಹಲಿಗೆ ಬಂದ ಯಾತ್ರಾರ್ಥಿಗಳು ರೈಲು ಮೂಲಕ ಕರ್ನಾಟಕಕ್ಕೆ ಹಿಂತಿರುಗಬಹುದಾಗಿದೆ.
- ರೇಣುಕಾಪ್ರಸಾದ್ ಹಾಡ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

