ಪ್ರಧಾನ ಸುದ್ದಿ

ನಕ್ಸಲ್ ದಾಳಿಗೆ 3 ಬಲಿ

ಬಿಹಾರದಲ್ಲಿ ರೈಲೊಂದರ ಮೇಲೆ ಸುಮಾರು 150ರಷ್ಟಿದ್ದ ನಕ್ಸಲೀಯರು ದಾಳಿ ನಡೆಸಿದ್ದು, ಪರಿಣಾಮ ಮೂವರು ಮೃತಪಟ್ಟ...

Published On :

ಪಟನಾ: ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ನಕ್ಸಲರು ನಡೆಸಿದ ಗುಂಡಿನ ದಾಳಿ ಪ್ರಕರಣ ಜನಮಾನಸದಿಂದ ಮರೆಯಾಗುವ ಮುನ್ನವೇ ಬಿಹಾರದಲ್ಲಿ ಕೆಂಪು ಉಗ್ರರು ತಮ್ಮ ಕ್ರೌರ್ಯ ಮೆರೆದಿದ್ದಾರೆ. ಬಿಹಾರದಲ್ಲಿ ರೈಲೊಂದರ ಮೇಲೆ ಸುಮಾರು 150ರಷ್ಟಿದ್ದ ನಕ್ಸಲೀಯರು ದಾಳಿ ನಡೆಸಿದ್ದು, ಪರಿಣಾಮ ಮೂವರು ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
150 ನಕ್ಸಲರಿಂದ ದಾಳಿ: ಇಂಟರ್‌ಸಿಟಿ ರೈಲು ಧನಾಬಾದ್‌ನಿಂದ ಪಟನಾಗೆ ತೆರಳುತ್ತಿತ್ತು. ಇನ್ನೇನು ಕುಂಧಾರ್ ಸ್ಟೇಷನ್ ತಲುಪಬೇಕು ಎನ್ನುವಷ್ಟರಲ್ಲಿ ಜಮೂಯಿಯ ಅರಣ್ಯ ಪ್ರದೇಶದ ಬಳಿ ರೈಲನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸಲಾಯಿತು.
 ಕ್ಷಣಮಾತ್ರದಲ್ಲಿ ರೈಲನ್ನು ಸುತ್ತುವರಿದ ಸುಮಾರು 150 ಮಂದಿ ಶಸ್ತ್ರಸಜ್ಜಿತ ನಕ್ಸಲರು ಒಂದೇ ಸಮನೆ ಗುಂಡು ಹಾರಿಸಿದ್ದಾರೆ. ಈ ವೇಳೆ ಒಬ್ಬ ಆರ್‌ಪಿಎಫ್(ರೇಲ್ವೆ ಸುರಕ್ಷತಾ ಪೊಲೀಸ್) ಜವಾನ ಹಾಗೂ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದಾರೆ. ನಂತರ, ಎಸಿ ಕೋಚ್‌ನಲ್ಲಿ ಬಿಹಾರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರ ಮೃತದೇಹ ಪತ್ತೆಯಾಗಿದೆ. ರೈಲಿನ ಚಾಲಕನಿಗೂ ಗುಂಡೇಟು ತಗುಲಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಲೂಟಿ: ಇದೇ ವೇಳೆ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರ್‌ಪಿಎಫ್ ಯೋಧರಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವ ಉದ್ದೇಶದಿಂದಲೇ ಈ ದಾಳಿ ನಡೆದಿದೆ.
 ಸುಮಾರು 30 ನಿಮಿಷಗಳ ಕಾಲ ಗುಂಡಿನ ದಾಳಿಯಲ್ಲಿ ತೊಡಗಿದ್ದ ನಕ್ಸಲರು ಬಳಿಕ ಆರ್‌ಪಿಎಫ್ ಯೋಧರ ಶಸ್ತ್ರಾಸ್ತ್ರಗಳನ್ನು ಹಾಗೂ ಪ್ರಯಾಣಿಕರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿ ಅಲ್ಲಿಂದಲೇ ಕಾಡಿಗೆ ತೆರಳಿದರು ಎನ್ನಲಾಗಿದೆ.  ಸಿಆರ್‌ಪಿಎಫ್‌ನ ಎರಡು ತುಕಡಿಗಳು ಸ್ಥಳಕ್ಕಾಗಮಿಸಿದ್ದು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.
ಮೂವರನ್ನು ಕೊಂದರು: ಏತನ್ಮಧ್ಯೆ, ನಾಗ್ಪುರದ ಗಾಡ್ಚಿರೋಲಿಯಲ್ಲಿಯೂ ನಕ್ಸಲೀಯರು ಅಟ್ಟಹಾಸ ಮೆರೆದಿದ್ದಾರೆ. ಸೂರಜ್‌ಗರ್‌ನಲ್ಲಿ ಗಣಿಗಾರಿಕೆ ವಿರೋಧಿಸುತ್ತಿದ್ದ ನಕ್ಸಲರೊಂದಿಗೆ ಸಂಧಾನಕ್ಕೆಂದು ತೆರಳಿದ್ದ ಪೊಲೀಸ್ ಪಾಟೀಲ್ ರಾಜು, ಗಣಿ ಕಂಪನಿಯ ಅಧಿಕಾರಿಗಳಾದ ಜಸ್ಪಾಲ್ ಸಿಂಗ್ ಮತ್ತು ಮಲ್ಲಿಕಾರ್ಜುನ ರೆಡ್ಡಿ ಅವರನ್ನು ನಕ್ಸಲರು ಗುಂಡಿಕ್ಕಿ ಕೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.