ಗಚ್ಚಿನಮಠ ಶ್ರೀ ಸಾವು
ಗಚ್ಚಿನಮಠದ ನಿಕಟಪೂರ್ವ ಮತ್ತು ಹಾವೇರಿ ಅಗಡಿ ಅಕ್ಕಿ ಮಠದ ಹಾಲಿ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ (67) ಗುರುವಾರ ಮುಂಜಾನೆ ತೀವ್ರ ...
ಅಥಣಿ: ಗಚ್ಚಿನಮಠದ ನಿಕಟಪೂರ್ವ ಮತ್ತು ಹಾವೇರಿ ಅಗಡಿ ಅಕ್ಕಿ ಮಠದ ಹಾಲಿ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ (67) ಗುರುವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾದರು.
ಮೇ 16ರಂದು ಶ್ರೀಮಠದಿಂದ ನಿರ್ಗಮಿಸಿದ ನಂತರ ಗಚ್ಚಿನಮಠದ ಹಿಂಭಾಗದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ವಾಸ್ತವ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದರು. ಗುರುವಾರ ಮುಂಜಾನೆ ಎಂದಿನಂತೆ ಚನ್ನಬಸವ ಸ್ವಾಮೀಜಿ ಶಿವಯೋಗಿಗಳ ಗದ್ದುಗೆ ದರ್ಶನ ಪಡೆದು ಶ್ರೀಮಠದಿಂದ ತೆರಳಿದ ಕೆಲವು ಗಂಟೆಗಳಲ್ಲಿ ತೀವ್ರ ಎದೆ ನೋವು ಕಾಣಿಸಿಕೊಂಡಾಗ ಶ್ರೀಮಠದ ಭಕ್ತರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ರಕ್ತದೊತ್ತಡ ಕ್ಷೀಣಿಸಿದ ಹಿನ್ನೆಲೆಯಲಿ ಬೆಳಗ್ಗೆ 9.30ರ ಸುಮಾರಿಗೆ ವಿಧಿವಶರಾಗಿದ್ದಾರೆ ಎಂದು ಆಸ್ಪತ್ರೆಯ ಡಾ.ಎ.ಎ.ಪಾಂಗಿ ತಿಳಿಸಿದ್ದಾರೆ.
ಶ್ರೀಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೆ ಸಹಸ್ರಾರು ಭಕ್ತರು, ಅನುಯಾಯಿಗಳು ಆಸ್ಪತ್ರೆಗೆ ದೌಡಾಯಿಸಿದರು. ಭಕ್ತರ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಗಚ್ಚಿನಮಠಕ್ಕೆ ಕೊಂಡೊಯ್ಯಲಾಯಿತು. ಪಟ್ಟಣದ ಸಾರಿ ಬಝಾರ, ಬುಧವಾರ ಪೇಠ, ಇನಾಂದಾರ ಪೇಠದ ಎಲ್ಲ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶ್ರೀಗಳಿಗೆ ಗೌರವ ಸಲ್ಲಿಸಿದರು.
ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಾಜಿ ಬೀಳಗಿ ಗ್ರಾಮದವರಾದ ಚನ್ನಬಸವ ಸ್ವಾಮೀಜಿಯವರು 1947, ನ.2ರಂದು ಶಿವಲಿಂಗಯ್ಯ ಹಾಗೂ ನೀಲಮ್ಮ ಹಿರೇಮಠ ದಂಪತಿಯ ಜ್ಯೇಷ್ಠ ಸುಪುತ್ರರಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕಾಜಿ ಬೀಳಗಿ ಗ್ರಾಮದಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಕೊಲ್ಲಾಪೂರ ಮತ್ತು ಚಿರ್ತದುರ್ಗದಲ್ಲಿ ಪೂರೈಸಿದ್ದರು. ಚನ್ನಬಸವ ಶ್ರೀಗಳನ್ನು ಚಿತ್ರದುರ್ಗ ಮುರುಘಾಮಠದ ಅಂದಿನ ಪೀಠಾಧಿಪತಿ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು ಹಾವೇರಿ ಜಿಲ್ಲೆಯ ಅಗಡಿ ಮಠದ ಪೀಠಾಧಿಪತಿಗಳಾಗಿ ನೇಮಕ ಮಾಡಿದರು. ನಂತರ ಅಗಡಿ ಮಠದೊಂದಿಗೆ ಇವರನ್ನು 1985ರಲ್ಲಿ ಅಥಣಿ ಗಚ್ಚಿನಮಠದ ಚರಪೀಠಾಧಿಕಾರಿಂುನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಶ್ರೀಮಠದ ಭಕ್ತರ ಒತ್ತಾಯದ ಮೇರೆಗೆ ಮಹಾಶಿವರಾತ್ರಿಂುಂದು ಚನ್ನಬಸವ ಶ್ರೀಗಳನ್ನು ಚಿತ್ರದುರ್ಗದ ಮುರುಘಾಶರಣರು ಚರಪೀಠದಿಂದ ಮುಕ್ತಗೊಳಿಸಿ ಇವರ ಸ್ಥಾನಕ್ಕೆ ಶಿವಬಸವ ಸ್ವಾಮಿಗಳನ್ನು ನೇಮಕ ಮಾಡಿ, ಎರಡು ತಿಂಗಳ ಅವಧಿಯಲ್ಲಿ ಶ್ರೀ ಮಠದಿಂದ ನಿರ್ಗಮಿಸಬೇಕು ಸೂಚಿಸಿದ್ದರು. ಹೀಗಾಗಿ ಮೇ16ರಂದು ಮಠದಿಂದ ಚನ್ನಬಸವ ಶ್ರೀಗಳು ನಿರ್ಗಮಿಸಿದ್ದರು.
ಶ್ರೀಮಠದ ನೂತನ ಪೀಠಾಧಿಪತಿಗಳಾದ ಶಿವಬಸವ ಸ್ವಾಮೀಜಿ ವೀರಶೈವ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನ ಪೂರೈಸಲು ಅನುವು ಮಾಡಿಕೊಟ್ಟರು. ಹಲ್ಯಾಳದ ಅಭಿನವ ಗುರುಸಿದ್ಧ ಸ್ವಾಮೀಜಿ, ಶೆಟ್ಟರ ಮಠದ ಬಸವಸಿದ್ಧಲಿಂಗ ದೇವರು, ಗುರುಲಿಂಗ ದೇವರು, ಚಿತ್ರದುರ್ಗದ ಬಸವಕಿರಣ ಸ್ವಾಮೀಜಿ, ದೇವರಹಿಪ್ಪರಗಿಯ ಮಹಾಸ್ವಾಮೀಜಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

