ಪ್ರಧಾನ ಸುದ್ದಿ

ಟಿಕೆಟ್ ಬೇಕಾ? SMS ಕಳಿಸಿ

ಇನ್ನು ಮುಂದೆ ರೇಲ್ವೆ ಟಿಕೆಟ್ ಬುಕ್ಕಿಂಗ್‌ಗಾಗಿ ನೀವು ರೇಲ್ವೆ ನಿಲ್ದಾಣದಲ್ಲಿ ಸರದಿ ಸಾಲಲ್ಲಿ ನಿಲ್ಲಬೇಕಾಗಿಲ್ಲ, ರೇಲ್ವೆ ವೆಬ್‌ಸೈಟ್ ಜಾಲಾಡಬೇಕಾಗಿಲ್ಲ. ಅಂಗೈಯಲ್ಲೇ...

Published On :

ರೇಲ್ವೆ ಇಲಾಖೆಯಿಂದ ಶೀಘ್ರ ಹೊಸ ಸಂಖ್ಯೆ ಘೋಷಣೆ

ನವದೆಹಲಿ: ಇನ್ನು ಮುಂದೆ ರೇಲ್ವೆ ಟಿಕೆಟ್ ಬುಕ್ಕಿಂಗ್‌ಗಾಗಿ ನೀವು ರೇಲ್ವೆ ನಿಲ್ದಾಣದಲ್ಲಿ ಸರದಿ ಸಾಲಲ್ಲಿ ನಿಲ್ಲಬೇಕಾಗಿಲ್ಲ, ರೇಲ್ವೆ ವೆಬ್‌ಸೈಟ್ ಜಾಲಾಡಬೇಕಾಗಿಲ್ಲ. ಅಂಗೈಯಲ್ಲೇ ಇರುವ ಮೊಬೈಲ್‌ನಿಂದ ಎಸ್‌ಎಂಎಸ್ ಮಾಡಿದರೆ ಸಾಕು. ನೀವು ಪ್ರಯಾಣಿಸಬೇಕಿರುವ ರೈಲು ಟಿಕೆಟ್ ಬುಕ್ ಆಗುತ್ತದೆ.

ಹೌದು. ಈ ಎಸ್‌ಎಂಎಸ್ ಆಧರಿತ ರೈಲು ಟಿಕೆಟ್ ಬುಕ್ಕಿಂಗ್ ಸೇವೆ ಜು.1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಈ ಸೌಲಭ್ಯ ಬಳಸಿ ಸಾಮಾನ್ಯ ಮೊಬೈಲ್‌ನಿಂದಲೂ ರೇಲ್ವೆ ಟಿಕೆಟ್ ಬುಕ್ ಮಾಡುವುದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಟಿಕೆಟ್ ಬುಕ್ಕಿಂಗ್‌ಗಾಗಿ ಆರಂಭಿಸಲಾಗಿರುವ ನೂತನ ಸಂಖ್ಯೆಯನ್ನು ಐಆರ್‌ಸಿಟಿಸಿಯು ಶೀಘ್ರದಲ್ಲೇ ಘೋಷಣೆ ಮಾಡಲಿದೆ.
ಅನುಕೂಲ ಏನು?: ಈ ನೂತನ ಸೇವೆಗಾಗಿ ಇಂಡಿಯನ್ ರೇಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ ಇಂಟರ್ನೆಟ್ ರಹಿತ ಎರಡು ರೀತಿಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಬುಕ್‌ಮಾಡಿದ ಟಿಕೆಟ್‌ನ ಪ್ರಿಂಟ್ ತೆಗೆಯಬೇಕಾದ ಅಗತ್ಯವೂ ಇರುವುದಿಲ್ಲ. ಪ್ರಯಾಣದ ವೇಳೆ ನಿಮ್ಮ ಮೊಬೈಲ್‌ನಲ್ಲಿರುವ ಎಸ್‌ಎಂಎಸ್ ಅನ್ನೇ ಟಿಕೆಟ್ ಆಗಿ ಪರಿಗಣಿಸಲಾಗುತ್ತದೆ.
ಈ ನೂತನ ವ್ಯವಸ್ಥೆಯ ಮುಖ್ಯ ಅನುಕೂಲವೇನೆಂದರೆ ಪ್ರಯಾಣಿಕರು ದಿನದ ಯಾವುದೇ ಅವಧಿಯಲ್ಲಿ, ಯಾವುದೇ ಸ್ಥಳದಿಂದಲಾದರೂ ಟಿಕೆಟ್ ಬುಕ್ಕಿಂಗ್ ಮಾಡುವುದು ಸಾಧ್ಯವಿದೆ.

ದರ ಎಷ್ಟು?
ಟಿಕೆಟ್ ಬುಕ್ ಮಾಡಲು ಕಳುಹಿಸಲಾಗುವ ಪ್ರತಿ ಎಸ್‌ಎಂಎಸ್‌ಗೆ 3 ನಿಗದಿಪಡಿಸಲಾಗಿದೆ. ಇದಲ್ಲದೆ, 5 ಸಾವಿರದ ವರೆಗಿನ ಪ್ರತಿ ಟಿಕೆಟ್‌ಗೆ 5, 5 ಸಾವಿರಕ್ಕಿಂತ ಹೆಚ್ಚಿನ ಟಿಕೆಟ್‌ಗೆ 10 ತೆರಿಗೆ ವಿಧಿಸಲಾಗುತ್ತದೆ.

ಟಿಕೆಟ್ ಬುಕ್ಕಿಂಗ್ ಹೇಗೆ?
-ಎಸ್‌ಎಂಎಸ್ ಟಿಕೆಟ್ ಬುಕ್ಕಿಂಗ್ ಸೇವೆಗಾಗಿ ನೀವು ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಐಆರ್‌ಟಿಸಿ ಹಾಗೂ ಬ್ಯಾಂಕ್‌ನಲ್ಲಿ ನೋಂದಣಿ ಮಾಡಿರಬೇಕು. ಆಗ ಬ್ಯಾಂಕ್ ನಿಮಗೆ ಎಂಎಂಐಡಿ (ಮೊಬೈಲ್ ಮನಿ ಐಡೆಂಟಿಫೈಯರ್) ಮತ್ತು ಒಪಿಟಿ (ಒನ್‌ಟೈಂ ಪಾಸ್‌ವರ್ಡ್) ನೀಡುತ್ತದೆ.

- ಟಿಕೆಟ್ ಬುಕ್ ಮಾಡಬೇಕೆಂದಿದ್ದರೆ ರೇಲ್ವೆಯು ನೀಡಿರುವ ವಿಶೇಷ ಸಂಖ್ಯೆಗೆ ಪ್ರಯಾಣಿಸಬೇಕಿರುವ ರೈಲಿನ ಸಂಖ್ಯೆ, ತಲುಪಬೇಕಿರುವ ಸ್ಥಳ, ಪ್ರಯಾಣದ ದಿನಾಂಕ, ಕ್ಲಾಸ್‌ನ ಜತೆಗೆ ಹೆಸರು, ವಯಸ್ಸು, ಲಿಂಗ (ಸ್ತ್ರೀ ಅಥವಾ ಪುರುಷ)  ಮಾಹಿತಿಯನ್ನು ದಾಖಲಿಸಿ ರೇಲ್ವೆ ನೀಡುವ ಆ ಸಂಖ್ಯೆಗೆ "BOOK’ ಎಂದು ಮೆಸೇಜ್ ಮಾಡಿ.

-ನಂತರ ನಿಮ್ಮ ಮೊಬೈಲ್‌ಗೆ ಟ್ರಾನ್ಸ್ಯಾಕ್ಷನ್ ಐಡಿ ಕಳುಹಿಸಿ ಕೊಡಲಾಗುತ್ತದೆ. ಬಳಿಕ ಟ್ರ್ಯಾನ್ಸ್ಯಾಕ್ಷನ್ ಐಡಿ, ಎಂಎಂಐಡಿಯೊಂದಿಗೆ 'PAY', ಎಂದು ಟೈಪ್ ಮಾಡಿ ಇನ್ನೊಂದು ಎಸ್‌ಎಂಎಸ್ ಕಳುಹಿಸಬೇಕು. ಆಗ ನಿಮ್ಮ ಟಿಕೆಟ್ ಬುಕ್ ಆಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.