ಪ್ರಧಾನ ಸುದ್ದಿ

222 ಮನೆ ಕುಸಿತ

ರಾಜ್ಯದ ವಿವಿಧೆಡೆ ಶನಿವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಮೂರ್ನಾಲ್ಕು ದಿನಗಳಿಂದ...

Published On :

ಬೆಂಗಳೂರು: ರಾಜ್ಯದ ವಿವಿಧೆಡೆ ಶನಿವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಯಲ್ಲಿ ಸುಮಾರು 222 ಮನೆಗಳು ಕುಸಿದಿವೆ.
ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ 77 ಮನೆ ಸೇರಿ ಒಟ್ಟು 88 ಮನೆ ಕುಸಿದರೆ, ರಾಯಭಾಗ ತಾಲೂಕಿನಲ್ಲಿ 68, ರಾಮದುರ್ಗ ತಾಲೂಕಿನಲ್ಲಿ 22 ಮನೆಗಳು ಧರೆಗುರುಳಿವೆ.
ಆದರೆ, ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ 222 ಮನೆಗಳು ನೆಲಸಮವಾಗಿವೆ. ರಾಯಭಾಗ ತಾಲೂಕಿನ ಕುಸಿದ ಮನೆಗಳ ಪೈಕಿ ಕುಡುಚಿ, ಚಿಂಚಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.          
 ಮಳೆ ಹಾನಿಗೆ ಸಂಬಂಧಿಸಿದಂತೆ ತಾಲೂಕು ಅಧಿಕಾರಿಗಳಿಂದ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಂು ಬಗ್ಗೆ ಸಮಗ್ರ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಕೆಲವಡೆ ಪೂರ್ತಿ ಮನೆಗಳು ಕುಸಿದಿದ್ದರೆ, ಇನ್ನು ಕೆಲವಡೆ ಭಾಗಶಃ ಕುಸಿದಿವೆ ಎಂದು ಜಿಲ್ಲಾಧಿಕಾರಿ ಜಯರಾಂ ತಿಳಿಸಿದ್ದಾರೆ.
1.50 ಲಕ್ಷ ಪರಿಹಾರ:  ಬೆಳಗಾವಿ ಜಿಲ್ಲೆಂಾದ್ಯಂತ ಸಿಡಿಲು ಬಡಿದು ಇಲ್ಲಿಂುವರೆಗೆ 5 ಜನರು ಸಾವೀಗಿಡಾಗಿದ್ದ ಪ್ರಕೃತಿ ವಿಕೋಪ ಪರಿಹಾರದಡಿ ಪ್ರತಿಂೊಬ್ಬರಿಗೆ 1.50 ಲಕ್ಷ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಳೆ ಹಾಜರ್: ಉಡುಪಿ ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿದ ಮಳೆ ನಂತರದ ಕೆಲವು ದಿನಗಳಲ್ಲಿ ಬಿಡುವು ಪಡೆದಂತಿತ್ತು. ಆದರೆ, ಶನಿವಾರ ರಾತ್ರಿ ಉಡುಪಿ ಸೇರಿದಂತೆ ಕಾಪು, ಕಾರ್ಕಳ, ಕುಂದಾಪುರ, ಬ್ರಹ್ಮಾವರ ಇನ್ನಿತರ ಕಡೆಗಳಲ್ಲಿ ಮತ್ತೆ ಮಳೆ ಸುರಿದಿದೆ. ಭಾನುವಾರ ಬೆಳಗ್ಗೆ ಗಾಳಿ ಮಳೆಗೆ ಅಂಬಲಪಾಡಿಯಲ್ಲಿ ಇಬ್ರಾಹಿಂ ಸಾಹೇಬ್ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು 40 ಸಾವಿರ ನಷ್ಟವಾಗಿದೆ. ಮೂಡುಬೆಟ್ಟಿನ ಇಶಾಕ್ ಸಾಹೇಬ್ ಅವರ ಮನೆ ಮೇಲೆ ವಿದ್ಯುತ್ ತಂತಿ ಬಿದ್ದು 20 ಸಾವಿರ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಕಾರವಾರದಲ್ಲೂ ಉತ್ತಮ ಮಳೆ: ಕರಾವಳಿ ಭಾಗ ಸೇರಿದಂತೆ ಧಾರವಾಡ ಜಿಲ್ಲೆ, ಕೊಪ್ಪಳದ ಕೆಲವು ಭಾಗಗಳಲ್ಲಿ ಮಳೆ ಭಾನುವಾರವೂ ಸುರಿಯಿತು. ಕಾರವಾರ ಸಮೀಪದ ಬೈತಖೋಲದಲ್ಲಿನ ಮೀನೆಣ್ಣೆ ಘಟಕದ ಚಿಮಣಿ ಪೈಪ್ ಭಾನುವಾರ ಭಾರಿ ಗಾಳಿ, ಮಳೆಗೆ ಮುರಿದು ಬಿದ್ದು ಗಾಬರಿ ಮೂಡಿಸಿತು. ಕಾರವಾರದ ಭಾನುವಾರ ಸಂತೆಗೆ ಬೆಳಗಾವಿ, ಧಾರವಾಡ ಮತ್ತಿತರ ಕಡೆಗಳಿಂದ ಆಗಮಿಸಿದ ಕಾಯಿಪಲ್ಲೆ ಮಾರಾಟಗಾರರು ಮಳೆಯಿಂದ ತೊಂದರೆಗೊಳಗಾದರು. 

ಅಭಿವೃದ್ಧಿಗೆ ಕಾಲಮಿತಿ ಅವಶ್ಯ
ಈಗಾಗಲೇ ಸರ್ಕಾರ ಹೈ-ಕ ಅಭಿವೃದ್ಧಿ ಮಂಡಳಿ ರಚಿಸಿದೆ. ನಂಜುಡಪ್ಪ ವರದಿ ಅನುಷ್ಠಾನ ಸಮಿತಿ ರಚಿಸಿದೆ. ಆದರೆ ಇವುಗಳಿಗೆ ಹೆಚ್ಚುವರಿ ಅನುದಾನ ನೀಡದೆ ಬಜೆಟ್‌ನ ಹಣವನ್ನೇ ಈ ಸಮಿತಿಗಳ ಮೂಲಕ ನೀಡಲಾಗುತ್ತಿತ್ತು. ಹೊಸದಾಗಿ ಹೈ-ಕ ಅಭಿವೃದ್ಧಿ ಮಂಡಳಿ ರಚಿಸುವಾಗ ಅಭಿವೃದ್ಧಿ ಕಾರ್ಯಗಳ ಸೂಕ್ತ ಯೋಜನೆ ರೂಪಿಸುವುದರ ಜತೆಗೆ ಕಾಲಮಿತಿ ಅಳವಡಿಸಬೇಕು ಎಂಬ ಒತ್ತಾಯವಿದೆ. ಹೈ-ಕ ಪ್ರದೇಶ ಹಿಂದುಳಿದಿದೆಯಾದರೂ ಎಲ್ಲ ಪ್ರದೇಶಗಳು ಸಮಾನವಾಗಿ ಹಿಂದುಳಿದಿಲ್ಲ. ಅಲ್ಲೂ ಕೆಲವು ಪ್ರದೇಶಗಳು ಮುಂದುವರಿದಿವೆ. ಇವುಗಳ ನಡುವೆ ಸಮತೋಲನ ತರುವ ಗುರಿಯೊಂದಿಗೆ ಅಭಿವೃದ್ಧಿ ರೂಪುರೇಷೆ ತಯಾರಿಸಬೇಕು ಮತ್ತು 5-10 ವರ್ಷದಲ್ಲಿ ಈ ಪ್ರದೇಶಗಳ ಅಭಿವೃದ್ಧಿ ಮಾಡಬೇಕು ಎಂಬ ಕಾಲಮಿತಿ ಅಳವಡಿಸಬೇಕು. ಅಂದರೆ ಮಾತ್ರ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಸಾಧ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.