ಪ್ರಧಾನ ಸುದ್ದಿ

ಕೇರಳಕ್ಕೆ ಮುಂಗಾರು ಪ್ರವೇಶ

ಮುಂಗಾರು ಮಾರುತ ನಿರೀಕ್ಷೆಯಂತೆ ಶನಿವಾರ ಕೇರಳ ಪ್ರವೇಶಿಸಿದೆ. ಈ ಮೂಲಕ ಮುಂಗಾರು ಮಾರುತ ವಿಳಂಬವಾಗಿ ಸುರಿಯಬಹುದೆನ್ನುವ ಆತಂಕ ...

Published On :

ತಿರುವನಂತಪುರ: ಮುಂಗಾರು ಮಾರುತ ನಿರೀಕ್ಷೆಯಂತೆ ಶನಿವಾರ ಕೇರಳ ಪ್ರವೇಶಿಸಿದೆ. ಈ ಮೂಲಕ ಮುಂಗಾರು ಮಾರುತ ವಿಳಂಬವಾಗಿ ಸುರಿಯಬಹುದೆನ್ನುವ ಆತಂಕ ನಿವಾರಣೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ನೈಋತ್ಯ ಮಾರುತ ಇನ್ನಷ್ಟು ಪ್ರದೇಶಗಳಿಗೆ ಮುಂದುವರಿಯಲು ಅನುಕೂಲಕರವಾಗಿದೆ. ಮುಂದಿನ 48 ಗಂಟೆಗಳಲ್ಲಿ ಮುಂಗಾರು ಮಾರುತವು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಲಿದೆ. ಸದ್ಯ ದಕ್ಷಿಣ ಅರಬ್ಬೀಸಮುದ್ರ, ಕೇರಳ, ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು ಮತ್ತು ತಮಿಳುನಾಡಿನ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.