ಪ್ರಧಾನ ಸುದ್ದಿ

ಟಿಪ್ಪು ವಿವಿಗೆ 200 ಎಕ್ರೆ

ಟಿಪ್ಪು ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ 200 ಎಕರೆ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಅಲ್ಪಸಂಖ್ಯಾತ ಇಲಾಖೆ...

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.15-
ಟಿಪ್ಪು ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ 200 ಎಕರೆ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಅಲ್ಪಸಂಖ್ಯಾತ ಇಲಾಖೆ ಪತ್ರ ಬರೆದಿದೆ. ಕೇಂದ್ರ ಸರ್ಕಾರದ ಈ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಕೆಲವೇ ದಿನಗಳಲ್ಲಿ ಭೂಮಿ ಮಂಜೂರಾಗುವ ಸಾಧ್ಯತೆಯಿದೆ. ಈ ವಿಷಯವನ್ನು ಕೇಂದ್ರ ಅಲ್ಪಸಂಖ್ಯಾತ ಇಲಾಖೆ ಸಚಿವ ಕೆ.ರೆಹಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಟಿಪ್ಪು ವಿವಿ ಹೆಸರಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಹೆಸರಲ್ಲಿ ಯಾವುದೇ ಬದಲಾವಣೆಯಿಲ್ಲ. ಟಿಪ್ಪು ಹೆಸರಿಡಲು ಅಲ್ಪಸಂಖ್ಯಾತ ಇಲಾಖೆಯ ಹಿಂದಿನ ಸಚಿವರೇ ನಿರ್ಧರಿಸಿದ್ದರು. ಹೀಗಾಗಿ ಹೆಸರು ಬದಲಾಯಿಸುವ ಯಾವುದೆ ಚಿಂತನೆ ಕೇಂದ್ರದ ಮುಂದಿಲ್ಲ ಎಂದು ಬೆಂಗಳೂರಿನಲ್ಲಿ ಹೇಳಿದರು. ಆದರೆ ಖಾನ್ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ಸಂಶೋಧಕ ಚಿದಾನಂದ ಮೂರ್ತಿ ಕೇಂದ್ರದ ನಿರ್ಧಾರಕ್ಕೆ ಕಿಡಿಕಾರಿದ್ದಾರೆ. 'ಆತ ಮೈಸೂರಿನ ಹುಲಿಯಲ್ಲ, ನರಭಕ್ಷಕ ಹುಲಿ. ಇಂಥ ಕೋಮುವಾದಿಯ ಹೆಸರಲ್ಲಿ ವಿವಿ ಸ್ಥಾಪಿಸುವುದು ನಾಗರಿಕ ಸಮಾಜಕ್ಕೆ ನೀಡುವ ತಪ್ಪು ಸಂದೇಶವಾಗುತ್ತದೆ' ಎಂದರು. 

ಸಚಿವರು ಹೇಳಿದ್ದೇನು?: ಟಿಪ್ಪು ವಿವಿ ವಿವಾದ ಹೊಸತಲ್ಲ. ವಿವಿ ಸ್ಥಾಪಿಸಲು 5 ವರ್ಷಗಳ ಹಿಂದೆಯೆ ನಿರ್ಧರಿಸಲಾಗಿತ್ತು. ಇದರಿಂದ ಹಿಂದೆ ಸರಿಯುವ ಯಾವುದೆ ಸಾಧ್ಯತೆಯಿಲ್ಲ. ರಾಜ್ಯದಲ್ಲಿ ಅನವಶ್ಯಕವಾಗಿ ಕೋಮುವಾದಿ ಶಕ್ತಿಗಳು ವಿವಾದ ಹುಟ್ಟಿಸುತ್ತಿವೆ. ಒಂದೊಮ್ಮೆ ರಾಜ್ಯ ಸರ್ಕಾರ ಟಿಪ್ಪು ಹೆಸರು ಬೇಡ ಎಂದು ಹೇಳಿದರೆ ಕೈಬಿಡುತ್ತೇವೆ. ಟಿಪ್ಪು ಒಬ್ಬ ದೇಶಪ್ರೇಮಿಯಲ್ಲ ಎಂದಾದರೇ ಲಕ್ಷಾಂತರ ಜನರು ಅವರನೇಕೆ ಗೌರವಿಸುತ್ತಿದ್ದರು?
ಬಿಜೆಪಿ ಸರ್ಕಾರವಿದ್ದಾಗಲೂ ಭೂಮಿ ನೀಡುವಂತೆ ಅಂದಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅದಕ್ಕೆ ಒಪ್ಪಿಗೆ ಕೂಡ ದೊರೆತಿತ್ತು. ಈಗ ಹೊಸ ಸರ್ಕಾರ ಬಂದ ಹಿನೆಲೆಯಲ್ಲಿ ಮತ್ತೆ ಪತ್ರ ಬರೆದಿದ್ದೇನೆ. ಮುಸ್ಲಿಂ ಜನಾಂಗದ ಅಭಿವೃದ್ಧಿಯನು ವಿರೋಧಿಸುತ್ತಿರುವವರು ಟಿಪ್ಪು ವಿವಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಪಸಂಖ್ಯಾತರು ಶಾಶ್ವತವಾಗಿ ಹಿಂದುಳಿಯಬೇಕು ಎನುವುದು ಕೋಮುವಾದಿಗಳ ಆಶಯವಾಗಿದೆ ಎಂದು ರೆಹಮಾನ್ ಖಾನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಒಬ್ಬ ನರಭಕ್ಷಕ ಹುಲಿ: ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಹೋರಾಟಗಾರನಲ್ಲ. ಮೈಸೂರು ಹುಲಿಯೂ ಅಲ್ಲ. ಆತನೊಬ್ಬ ನರಭಕ್ಷಕ ಹುಲಿ ಎಂದು ಸಂಶೋಧಕ ಚಿದಾನಂದ ಮೂರ್ತಿ ಕಿಡಿಕಾರಿದ್ದಾರೆ. ಮತಾಂತರವಾಗದ ಲಕ್ಷಾಂತರ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮೀಯರನು ಕೊಲೆ ಮಾಡುವಂತೆ ತನ ಅಧಿಕಾರಿಗಳಿಗೆ ಟಿಪ್ಪು ಪತ್ರ ಬರೆದಿದ್ದ. ಈ ವಿಚಾರವನು ಟಿಪ್ಪು ಮಗನೇ ದಾಖಲಿಸಿದ್ದಾನೆ. ಕನಡ ನಾಡಿನಲ್ಲಿ ಪ್ರಾರಂಭವಾಗುವ ವಿವಿಗೆ ಕನಡ ವಿರೋಧಿಯ ಹೆಸರಿಡುವುದು ಕೂಡ ಖಂಡನಾರ್ಹ. ಅಧಿಕಾರಕ್ಕೆ ಬಂದ ದಿನವೇ ಪರ್ಷಿಯನ್‌ನು ಆಡಳಿತ ಭಾಷೆಯನಾಗಿ ಸ್ವೀಕರಿಸಿದ್ದ ಎಂದು ಚಿಮೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತ ವಿವಿಯನು ಸ್ಥಾಪಿಸುವುದಕ್ಕೆ ಯಾವುದೆ ಆಕ್ಷೇಪವಿಲ್ಲ. ಆದರೆ ಜನವಿರೋಧಿ ಟಿಪ್ಪುವಿನ ಹೆಸರಿಡುವುದು ಬೇಡ. ಆತನ ಹೊರತಾಗಿ ಮುಸ್ಲಿಂ ಸಮುದಾಯದಲ್ಲಿ ಸಾಕಷ್ಟು ಜನನಾಯಕರಿದ್ದಾರೆ. ರಾಜಕೀಯ ಹಾಗೂ ಮತಬ್ಯಾಂಕ್‌ಗಳಿಗಾಗಿ ಕಾಂಗ್ರೆಸ್ ಟಿಪ್ಪುನ ಹೆಸರಿಡಲು ಮುಂದಾಗಿದೆ. ತನ ರಾಜ್ಯವನು ಉಳಿಸಿಕೊಳ್ಳಲು ಹೋರಾಟ ನಡೆಸಿದ ಟಿಪ್ಪುವನು ಸ್ವಾತಂತ್ರ್ಯ ಹೋರಾಟಗಾರ ಎನುವುದು ಹಾಸ್ಯಾಸ್ಪದ. ಮತಾಂಧ, ಕ್ರೂರಿ ಹಾಗೂ ನರಭಕ್ಷಕನ ಹೆರಸನು ಅಲ್ಪಸಂಖ್ಯಾತ ವಿವಿಗೆ ಇಟ್ಟರೆ ಅದರ ಭವಿಷ್ಯ ಏನೆಂಬುದು ತಿಳಿಯುತ್ತದೆ. ಗೋಡ್ಸೆ ಹೆಸರಲ್ಲಿ ವಿವಿ ಮಾಡುವುದಕ್ಕು, ಟಿಪ್ಪು ವಿವಿ ಪ್ರಾರಂಭಿಸುವುದಕ್ಕೂ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಚಿದಾನಂದಮೂರ್ತಿ ಹೇಳಿದ್ದಾರೆ.

ಟಿಪ್ಪು ವಿವಿ ಹೆಸರಲ್ಲಿ ಯಾವುದೇ ಬದಲಾವಣೆಯಿಲ್ಲ. ರಾಜ್ಯ ಸರ್ಕಾರವೇ ಹೆಸರನ್ನು ಬದಲಿಸಲು ಸೂಚಿಸಿದರೆ ಕೈ ಬಿಡುತ್ತೇವೆ.
- ಕೆ.ರೆಹಮಾನ್ ಖಾನ್, ಕೇಂದ್ರ ಸಚಿವ

ಟಿಪ್ಪು ಸುಲ್ತಾನ್ ಸ್ವಾತಂತ್ರ್ಯಹೋರಾಟಗಾರನಲ್ಲ. ಮೈಸೂರು ಹುಲಿಯೂ ಅಲ್ಲ. ಆತ ನರಭಕ್ಷಕ ಹುಲಿ.
- ಡಾ.ಚಿದಾನಂದ ಮೂರ್ತಿ, ಸಂಶೋಧಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.