ಸೂಪರ್..! ಆಟೋ ಡ್ರೈವರ್ ಪುತ್ರಿ ಸಿಎ ಟಾಪರ್

ಮುಂಬೈ: 'ಸಾಧನೆಗೆ ಬಡತನದ ಹಂಗಿಲ್ಲ' ಎನ್ನುತ್ತಾರೆ ತಿಳಿದವರು. ಈ ಮಾತು ಮುಂಬೈನ ಇಪ್ಪತ್ತನಾಲ್ಕು ವರ್ಷದ ಪ್ರೇಮಾ ಜಯಕುಮಾರ್ ವಿಚಾರದಲ್ಲಿ ಅಕ್ಷರಶಃ ನಿಜವಾಗಿದೆ. ಸಾಮಾನ್ಯ ಆಟೋರಿಕ್ಷಾ ಚಾಲಕನೊಬ್ಬನ ಮಗಳಾದ ಪ್ರೇಮಾ ಬಡತನದ ನಡುವೆಯೂ ಶ್ರಮವಹಿಸಿ ಓದಿ ಈಗ ಚಾರ್ಟೆಡ್ ಅಕೌಂಟೆನ್ಸಿ(ಸಿಎ) ಪರೀಕ್ಷೆಯಲ್ಲಿ ದೇಶಕ್ಕೇ ಮೊದಲಿಗಳಾಗಿ ತೇರ್ಗಡೆಯಾಗಿದ್ದಾಳೆ.
ಕಳೆದ ನವೆಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರೇಮಾ 800ಕ್ಕೆ 607 ಅಂಕ ಗಳಿಸಿದ್ದಾರೆ. ತಮ್ಮ ಈ ಸಾಧನೆಯನ್ನು ತಂದೆ- ತಾಯಿಗೆ ಅರ್ಪಿಸಿರುವ ಪ್ರೇಮಾ, ಮಕ್ಕಳ ಶಿಕ್ಷಣಕ್ಕಾಗಿ ಅವರು ಪಟ್ಟ ಪಾಡನ್ನು ಸ್ಮರಿಸಿಕೊಳ್ಳಲು ಮರೆಯುವುದಿಲ್ಲ.
ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಆದರೂ ನನ್ನ ತಂದೆ ಹಾಗೂ ತಾಯಿ ನನ್ನ ಹಾಗೂ ನನ್ನ ಸಹೋದರನ ಶಿಕ್ಷಣಕ್ಕೆ ಅಡ್ಡಿ ಮಾಡಲಿಲ್ಲ. ಹೊಟ್ಟೆ, ಬಾಯಿ ಕಟ್ಟಿ ಓದಿನ ಖರ್ಚು, ವೆಚ್ಚ ಹೊಂದಿಸಿಕೊಟ್ಟಿದ್ದಾರೆ ಎಂದು ಹೇಳುತ್ತಾರೆ ಪ್ರೇಮಾ.
ಸಿಎ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ ಪಡೆದಿರುವುದು ನನ್ನ ಜೀವಮಾನದ ಸಾಧನೆ. ಈ ಯಶಸ್ಸಿಗೆ ಕಠಿಣ ಪರಿಶ್ರಮವೇ ಕಾರಣ. ಆದರೆ, ತಂದೆ- ತಾಯಿಗಳ ಬೆಂಬಲ ಹಾಗೂ ಆಶೀರ್ವಾದ ಇಲ್ಲದೇ ಹೋಗಿರುತ್ತಿದ್ದರೆ ಇಂಥ ಸಾಧನೆ ಸಾಧ್ಯವೇ ಇರುತ್ತಿರಲಿಲ್ಲ.
ನನ್ನ ಪಾಲಕರು ನನಗೋಸ್ಕರ ತುಂಬಾ ತ್ಯಾಗ ಮಾಡಿದ್ದಾರೆ. ಇನ್ನು ಮುಂದಾದರೂ ಅವರಿಗೆ ಉತ್ತಮ ಜೀವನ ಕಲ್ಪಿಸಬೇಕಿದೆ ಎನ್ನುತ್ತಾರೆ ಪ್ರೇಮಾ. ಪ್ರೇಮಾ ಜತೆಗೆ ಸಿಎ ಪರೀಕ್ಷೆಗೆ ಕೂತಿದ್ದ ಆಕೆಯ ಸಹೋದರನೂ ಉತ್ತೀರ್ಣ ಹೊಂದಿರುವುದು ಜಯಕುಮಾರ್ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ. ಈ ಹಿಂದೆ ಮುಂಬೈ ವಿಶ್ವವಿದ್ಯಾಲಯ ನಡೆಸಿದ ಬಿಕಾಂ ಪರೀಕ್ಷೆಯಲ್ಲಿ ಪ್ರೇಮಾ ಎರಡನೇ ರ್ಯಾಂಕ್ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


