ಚೌಟಾಲಗೆ ಜೈಲು 10 ವರ್ಷ ಫಿಕ್ಸು

ನವದೆಹಲಿ: ಹರ್ಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ, ಪುತ್ರ ಅಜಯ್ ಚೌಟಾಲ ಅವರಿಗೆ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ರೋಹಿಣಿಯಲ್ಲಿನ ವಿಶೇಷ ಸಿಬಿಐ ಕೋರ್ಟ್ ತೀರ್ಪು ನೀಡಿದೆ.
2000ನೇ ಇಸವಿಯಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ. ಕಳೆದ ವಾರ ಕೋರ್ಟ್ ಈ ಪ್ರಕರಣ ಸಂಬಂಧ 55 ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿತ್ತು. ಇವರ ಜೊತೆ ಆಗಿನ ಪ್ರಾಥಮಿಕ ಶಿಕ್ಷಣ ನಿರ್ದೇಶಕ, ಸಂಜೀವ್ ಕುಮಾರ್, ಚೌಟಾಲ ಅವರಿಗೆ ವಿಶೇಷ ಅಧಿಕಾರಿಯಾಗಿದ್ದ ವಿದ್ಯಾಧರಗೂ 10 ವರ್ಷಶಿಕ್ಷೆ ವಿಧಿಸಲಾಗಿದೆ. ಒಟ್ಟು 9 ಮಂದಿಗೆ 10 ವರ್ಷಗಳ ಶಿಕ್ಷೆಯಾಗಿದ್ದರೆ, ಒಬ್ಬರಿಗೆ 5 ವರ್ಷ, ಉಳಿದ 45 ಮಂದಿಗೆ 4 ವರ್ಷಗಳ ಸಜೆಯಾಗಿದೆ.
ಕೋರ್ಟ್ ಮುಂದೆ ಗದ್ದಲ: ಮಂಗಳವಾರ ಪ್ರಕರಣದ ಸಂಬಂಧ ಕೋರ್ಟ್ ತೀರ್ಪು ನೀಡಲಿದೆ ಎಂದು ಮೊದಲೇ ಮನಗಂಡಿದ್ದ ಚೌಟಾಲ ಬೆಂಬಲಿಗರು ಕೋರ್ಟ್ ಆವರಣದಲ್ಲಿ ಜಮಾಯಿಸಿದ್ದರು. ಕೋರ್ಟ್ ಆವರಣಕ್ಕೆ ಅವರು ನುಗ್ಗಲು ಯತ್ನಿಸಿದ್ದರಿಂದ ಪೊಲೀಸರು ಮತ್ತು ಬೆಂಬಲಿಗರ ನಡುವೆ ಭಾರಿ ಘರ್ಷಣೆಯಾಗಿತ್ತು.
ಶಾಸಕತ್ವಕ್ಕೆ ಕುತ್ತು?
ಈ ತೀರ್ಪಿನ ಅನ್ವಯ ಹಾಲಿ ಶಾಸಕರಾಗಿರುವ ಅಜಯ್ ಚೌಟಾಲ ಶಾಸಕತ್ವ ಅನರ್ಹಗೊಳ್ಳುವ ಸಾಧ್ಯತೆ ಎದುರಾಗಿದೆ. ಜೊತೆಗೆ 2014ರಲ್ಲಿ ಹರ್ಯಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸ್ಪರ್ಧೆಗೂ ಅನರ್ಹರಾಗಲಿದ್ದಾರೆ. ಆದರೆ ಈಗಾಗಲೇ ಚೌಟಾಲ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿದಲ್ಲಿ ಚೌಟಾಲ ಪಾರಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


