ಮೊದಲು ಸಮುದ್ರದ ದಾಟಿ ಮನುಷ್ಯರು
ಈಜಿಪ್ಟ್‌ನ ರಾಣಿ ಹಾತ್ಸೇಪ್ಸೂತ್ ಸಮುದ್ರ ಅನ್ವೇಷಣೆ ಪ್ರಾರಂಭಿಸಿದ ಮೊದಲ ಆಡಳಿತಗಾರ್ತಿ. ..
ಈಜಿಪ್ಟ್‌ನ ರಾಣಿ ಹಾತ್ಸೇಪ್ಸೂತ್ ಸಮುದ್ರ ಅನ್ವೇಷಣೆ ಪ್ರಾರಂಭಿಸಿದ ಮೊದಲ ಆಡಳಿತಗಾರ್ತಿ. 3500 ವರ್ಷಗಳ ಹಿಂದೆ ಪುರಾತನ ಈಜಿಪ್ಟ್‌ನ
250 ಜನರು ಈ ಇತಿಹಾಸ ಸೃಷ್ಟಿಸಿದರು. ಕೆಂಪು ಸಮುದ್ರದ ದಕ್ಷಿಣ ಭಾಗದ ಕೊನೆಯ ಹಂತ ದಾಟುವ ಮೂಲಕ ಪೂಂಟ್ ಎಂಬ ಸ್ಥಳವನ್ನು ತಲುಪಿದ್ದರು. ಕಪ್ಪು ಮನುಷ್ಯರನ್ನು ಮೊದಲ ಬಾರಿಗೆ ಅನ್ವೇಷಿಸಿದರು. ಪೂಂಟ್‌ನಲ್ಲಿದ್ದ ಬೆಲೆಬಾಳುವ ಮರಗಳು, ಧೂಪದ್ರವ್ಯ, ಆನೆ ದಂತ, ಚಿನ್ನ, ಚಿರತೆಯ ಚರ್ಮ ಸೇರಿದಂತೆ ಅನೇಕ ಬೆಲೆಬಾಳುವ ಸರಕುಗಳನ್ನು ಈಜಿಪ್ಟ್‌ಗೆ ಕೊಂಡೊಯ್ದರು. ಪೂಂಟ್ ಕಾಡುಗಳಲ್ಲಿ ವಾಸವಿದ್ದ ಅನೇಕ ಪ್ರಾಣಿಗಳ ಮರಿಗಳನ್ನು ಈಜಿಪ್ಟ್‌ಗೆ ತರಲಾಯಿತು. ಭಾರತಕ್ಕೆ ಬ್ರಿಟಿಷರು ಬಂದು ಮಾಡಿದ್ದೂ ಇದೇ ಅಲ್ಲವೇ?
ಇತಿಹಾಸದಲ್ಲಿ ವಿಜ್ಞಾನ
ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಯೂ, ಅನೇಕ ಮಹತ್ವಪೂರ್ಣ ವಿಜ್ಞಾನ ಗ್ರಂಥಗಳ ಕರ್ತೃವೂ ಆಗಿರುವ ಜಾನ್ ಡೆಸ್ಮಾಂಡ್ ಬರ್ನಾಲ್ ಅವರ ವಿಜ್ಞಾನ ಕುರಿತಾದ ನಾಲ್ಕು ಸಂಪುಟಗಳ ಬರಹಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 'ಇತಿಹಾಸದಲ್ಲಿ ವಿಜ್ಞಾನ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದೆ. ಕ್ಷಣಕ್ಷಣಕ್ಕೂ ಬದಲಾಗುತ್ತ ಸಾಗುವ ಜ್ಞಾನದ ಹೆಜ್ಜೆಗಳ ದಾಖಲೆಯೊಂದಿಗೆ ಕಾಲಾತೀತವಾಗಿಯೇ ಉಳಿಯಬಹುದಾದಂಥ ಸತ್ಯದ ನೋಟಗಳನ್ನು ಕಾಣಿಸುವ ಪ್ರಯತ್ನ ಪುಸ್ತಕದ್ದಾಗಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಾಸಕ್ತರ ಬತ್ತಳಿಕೆಯಲ್ಲಿ ಬಹಳ ಅಮೂಲ್ಯದ ಸಂಗ್ರಹವಾಗಬಲ್ಲದು. ವಿಜ್ಞಾನದ ಉದಯ, ಸಮಕಾಲೀನ ನೈಸರ್ಗಿಕ ವಿಜ್ಞಾನಗಳು, ವಿಜ್ಞಾನ ಮತ್ತು ಕೈಗಾರಿಕಾ ಕ್ರಾಂತಿ, ಸಮಾಜವಿಜ್ಞಾನ ಸಮಾರೋಪ ಎಂಬ ನಾಲ್ಕು ಸಂಪುಟಗಳ ಒಟ್ಟು ಬೆಲೆ 500 ಆಗಿದೆ.
ಸೂರದಾಸರ ಕೋಪ ನೀಗಿಸಿದ್ದು ಕಸಗುಡಿಸುವವ!
ಸೂರದಾಸರು ದೈವ ಭಕ್ತರು. ಆಧ್ಯಾತ್ಮ, ಭಗವಂತನ ಸಾಮಿಪ್ಯ ಬಯಸಿದ್ದರು. ಸೂರದಾಸರಿಗೆ ತುಂಬಾ ಕೋಪ ಇದೆ ಎಂದು ಗುರುಗಳಿಗೆ ತಿಳಿದಿತ್ತು. ಹಾಗಾಗಿ ಮುಂದಿನ ಒಂದು ತಿಂಗಳ ಕಾಲ ನೀವು ನಿಮ್ಮ ಎಲ್ಲ ಚಟುವಟಿಕೆ ಮಾಡುವಾಗ ಭಗವಂತನ ನಾಮಜಪ ಮಾಡಬೇಕು ಎಂದರು. ಒಂದು ತಿಂಗಳು ಪೂರೈಸುವ ಕಡೆಯ ದಿನ ಮಾರ್ಗ ಮಧ್ಯೆ ಒಬ್ಬ ಕಸಗುಡಿಸುತ್ತಿರುವವನ ಅಲಕ್ಷ್ಯತನದಿಂದ ಸೂರದಾಸರ ಬಟ್ಟೆಗಳು ಕೊಳೆಯಾದವು. ಕೋಪಗೊಂಡು ಬೈದುಬಿಟ್ಟರು. ಆದ್ದರಿಂದಾಗಿ ಸೂರದಾಸರಿಗೆ ಮತ್ತೊಂದು ತಿಂಗಳು ಮೊದಲಿನಂತೇ ಮಾಡಬೇಕೆಂದು ಹೇಳಿದರು. ಹೀಗೇ ನಾಲ್ಕನೇ ತಿಂಗಳ ಕೊನೆಯ ದಿನ ಕಸ ಗುಡಿಸುವವನು ಸೂರದಾಸರಿಗೆ ಕೋಪ ಬರುವಂತೆ ಮಾಡಿ ಮತ್ತೊಂದು ತಿಂಗಳು ಅದೇ ಕೆಲಸ ಮಾಡುವಂತೆ ಮಾಡಬೇಕೆಂದು ಕಸವನ್ನೆಲ್ಲಾ ಸೂರದಾಸರ ತಲೆಯ ಮೇಲೆ ಸುರುವಿದನು. ಆದರೆ ಈ ಸಲ, ಸೂರದಾಸರು ತಮ್ಮ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಾ ಹೇಳಿದರು 'ನಾನು ನಿನಗೆ ಕೃತಜ್ಞ. ನೀನೆ ನನ್ನ ಗುರು. ಕೋಪವೆಂಬ ದೋಷದಿಂದ ಹೊರಗೆ ಬರಲು ಕಲಿಸಿರುವಿ' ಎಂದಾಗ ಕಸಗುಡಿಸುವವನು ನಾಚಿಕೆಯಿಂದ ತಲೆ ತಗ್ಗಿಸಿದನು. ಸೂರದಾಸರಿಗೆ ಗುರುಗಳ ಆಶೀರ್ವಾದ ಸಿಕ್ಕಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

