ಬಹದ್ಧೂರ್ ಕುಳ್ಳ!

ಚಂದ್ರ ಬಹದ್ಧೂರ್ ದಂಗಿ ಯಾರು ಗೊತ್ತಾ? ಗಿನ್ನಿಸ್ ಪುಸ್ತಕದಲ್ಲಿ ಜಗತ್ತಿನ ಅತ್ಯಂತ ಕುಳ್ಳ ಎಂಬ ಅಕ್ಷರಗಳನ್ನು ಮುದ್ರಿಸಿದವನು. 54.6 ಸೆಂ.ಮೀ. ಉದ್ದವಿರುವ ಬಹದ್ಧೂರ್‌ನ ಊರು ನೇಪಾಳ. ಫಿಲಿಪ್‌ನ ಜುನ್‌ರೇ ಬಲಾವಿಂಗ್‌ಗಿಂತಲೂ 5.3 ಸೆಂ.ಮೀ. ಗಿಡ್ಡ. ನವ ದೆಹಲಿಯ ಗುಲ್ ಮಹಮ್ಮದ್ 57ಸೆಂ.ಮೀ. ಉದ್ದಳತೆಯೊಂದಿಗೆ ಜಗತ್ತಿನ ಅತ್ಯಂತ ಕುಳ್ಳ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ.
ಮಹಮ್ಮದ್‌ಗಿಂತಲೂ ಕುಳ್ಳನೊಬ್ಬ ಇದ್ದಾನೆ ಎಂದಾಗ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನ ಪ್ರಧಾನ ಸಂಪಾದಕ ಕ್ರೈಗ್ ಗ್ಲೆನ್‌ಡೇ ತಲೆ ಕೆಡಿಸಿಕೊಂಡಿದ್ದರು. ಲಂಡನ್‌ನಿಂದ ಕಟ್ಮಂಡುವಿಗೆ ಟೇಪು ಹಿಡಿದುಕೊಂಡು ಓಡೋಡಿ ಬಂದಿದ್ದರು. ದಿನವೊಂದರಲ್ಲಿ 3 ಬಾರಿ ಅಳತೆ ಮಾಡಿ 54.6 ಸೆಂ.ಮೀ. ಇದ್ದಾರೆಂದು ಸ್ಪಷ್ಟಪಡಿಸಿಕೊಂಡರು. ನೋಡ ನೋಡುತ್ತಿದ್ದಂತೆ ಚಂದ್ರ ಗಿನ್ನಿಸ್ ಪ್ರಶಸ್ತಿ ಕೈಯಲ್ಲಿರಿಸಿಕೊಂಡ. ಚಂದ್ರನಿಗಿಂತ ಗಿನ್ನಿಸ್ ಪ್ರಶಸ್ತಿ ಪತ್ರವೇ ಉದ್ದವಿದೆ!
74 ವರ್ಷದ ಚಂದ್ರ 14.6 ಕೆ.ಜಿ ತೂಗುತ್ತಾನೆ. ನೇಪಾಳದ ಗುಡ್ಡಗಾಡು ಪ್ರದೇಶ ರಿಮ್ಕೋಲಿಯಲ್ಲಿ ವಾಸವಿದ್ದಾನೆ. ಸಂಪ್ರದಾಯಿಕ ನೇಪಾಳಿ ವಸ್ತ್ರಗಳನ್ನು ತಯಾರಿಸುತ್ತ ಸಾಮಾನ್ಯ ಎತ್ತರವುಳ್ಳವರಾಗಿರುವ ಆತನ ಐವರು ಸಹೋದರರೊಂದಿಗಿದ್ದಾನೆ. ತನ್ನ ಕುಳ್ಳ ಸಾಧಾನೆಯಿಂದ ಭಾರತ ಹೆಸರನ್ನು ಗಿನ್ನಿಸ್ ಪುಸ್ತಕದಲ್ಲಿ ಕಾಣುವಂತೆ ಮಾಡಿದ ಹೆಮ್ಮೆ ಬಹೂದ್ಧೂರ್‌ನದ್ದು. ಕ್ರೈಗ್ ಗ್ಲೆನ್‌ಡೇ ಪ್ರಕಾರ ಚಂದ್ರನಿಗಿಂತ ಗಿಡ್ಡದ ವ್ಯಕ್ತಿ ಇರಲು ಸಾಧ್ಯವೇ ಇಲ್ಲವಂತೆ. ಮುಂಬರುವ ದಿನಗಳಲ್ಲೂ ಅಷ್ಟು ಕುಳ್ಳಗಿರುವ ವ್ಯಕ್ತಿ ಹುಟ್ಟಲೂ ಸಾಧ್ಯವಿಲ್ಲವಂತೆ. ಅಂತೂ ನಮ್ಮ ಚಂದ್ರ ಯಾರಿಗೂ ಮುರಿಯಲಾಗದ ಕುಳ್ಳನೆಯ ಮೈಲಿಗಲ್ಲನ್ನು ಸ್ತಾಪಿಸಿದ್ದು ನಮಗೂ ಹೆಮ್ಮೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


